Advertisement

ಸರ್ಕಾರಿ ನೌಕರರ ವರ್ಗಾವಣೆ ಸಹಜ ಪ್ರಕ್ರಿಯೆ

05:01 PM Jan 28, 2021 | Team Udayavani |

ಹೊನ್ನಾಳಿ: ಸರ್ಕಾರಿ ನೌಕರರ ವರ್ಗಾವಣೆ ಸಹಜ ಪ್ರಕ್ರಿಯೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ, ಕಂದಾಯ ಇಲಾಖೆ ವತಿಯಿಂದ ಗುರುಭವನದಲ್ಲಿ ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಹಾಗೂ ನೂತನ ತಹಶೀಲ್ದಾರ್‌ ಬಸನಗೌಡ ಕೋಟೂರು
ಅವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರು ತಾವಿದ್ದ ಸ್ಥಳದಲ್ಲಿ ಉತ್ತಮ ಕೆಲಸ ನಿರ್ವಹಿಸಿದರೆ ಜನರು ಸದಾ ಸ್ಮರಿಸುತ್ತಾರೆ. ಕೆಲಸ (ನೌಕರಿ) ಸಿಕ್ಕ ಮೇಲೆ ಇನ್ನೇನು ಕೆಲಸ ಎಂದು ತಾತ್ಸಾರ ಮಾಡಿದರೆ ಸಾಮಾನ್ಯ ಜನ ತಿರಸ್ಕರಿಸುತ್ತಾರೆ ಎಂದು ಹೇಳಿದರು.

Advertisement

ಜನಪ್ರತಿನಿ ಧಿಗಳ ಅಧಿ ಕಾರ ಕೇವಲ 5 ವರ್ಷ ನಂತರ ಮತದಾರನಿಗೆ ಬೇಕೆನಿಸಿದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ. ಜನಪ್ರತಿನಿಧಿ  ಮತದಾರನಿಗೆ ಸ್ಪಂದಿಸಿ ಕೆಲಸ ಮಾಡದಿದ್ದರೆ ತಿರಸ್ಕರಿಸುತ್ತಾರೆ. ಸರ್ಕಾರಿ ನೌಕರರು 60 ವರ್ಷ ವಯೋಮಿತಿವರೆಗೆ ಎಲ್ಲಾ ಸರ್ಕಾರಿ ಸೌಲಭ್ಯಗಳೊಂದಿಗೆ ಅಧಿ ಕಾರ ಅನುಭವಿಸುತ್ತಾರೆ ಎಂದು ಹೇಳಿದರು.

ತಹಶೀಲ್ದಾರ್‌ ತುಷಾರ್‌ .ಬಿ.ಹೊಸೂರು ಮಾತನಾಡಿ, ಶಾಸಕರು, ಇತರ ಜನಪ್ರತಿನಿ ಧಿಗಳು ಹಾಗೂ ತಾಲೂಕಿನ ಜನತೆ ನನಗೆ ಉತ್ತಮ
ಸಹಕಾರ ನೀಡಿದ ಪ್ರಯುಕ್ತ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದರು.
ನೂತನ ತಹಶೀಲ್ದಾರ್‌ ಬಸನಗೌಡ ಮಾತನಾಡಿ, ಎಲ್ಲರ ಸಹಕಾರ ಸಿಕ್ಕರೆ ಅ ಧಿಕಾರಿಗಳಿಗೆ ಕಾರ್ಯ ನಿರ್ವಹಿಸಲು ಉತ್ತಮ ಅವಕಾಶ ದೊರೆಯುತ್ತದೆ. ನನಗೂ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಮಾತನಾಡಿ, ತಾಲೂಕಿನಲ್ಲಿ ಎಲ್ಲಾ ಸರ್ಕಾರಿ ನೌಕರರು ಉತ್ತಮ
ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಾವು ಸದಾ ಜನ ಸೇವಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಬಿಇಒ ರಾಜೀವ್‌, ಸಿಪಿಐ ದೇವರಾಜ್‌, ಎಸ್‌ಐ ಬಸವರಾಜ್‌ ಬಿರಾದಾರ್‌ ಮಾತನಾಡಿದರು. ನ್ಯಾಮತಿ ತಾಲೂಕು ಉಪ ತಹಶೀಲ್ದಾರ್‌
ನಾಗರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಿಡಿಪಿಒ ಮಹಾಂತೇಶ್‌ ಪೂಜಾರ್‌, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರುದ್ರಪ್ಪ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ
ವರ್ಗಾವಣೆಗೊಂಡ ತಹಶೀಲ್ದಾರ್‌ ತುಷಾರ್‌ ಬಿ.ಹೊಸೂರು ದಂಪತಿಯನ್ನು ಹಾಗೂ ನೂತನ ತಹಶೀಲ್ದಾರ್‌ ಬಸನಗೌಡ ಕೋಟೂರು ಅವರನ್ನು
ಸನ್ಮಾನಿಸಲಾಯಿತು.

Advertisement

ಓದಿಗುರುಭವನಕ್ಕೆ ಸೌಲಭ್ಯ ಕಲ್ಪಿಸಿ

Advertisement

Udayavani is now on Telegram. Click here to join our channel and stay updated with the latest news.

Next