Advertisement

24ರಂದು ಸಾಮೂಹಿಕ ವಿವಾಹ ಮಹೋತ್ಸವ

04:50 PM Jan 28, 2021 | Team Udayavani |

ದಾವಣಗೆರೆ: ಹರಿಹರದ ಕರುನಾಡ ಕದಂಬರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವನಿಮಿತ್ತ ಮೂರನೇ ವರ್ಷದ ಕನ್ನಡದ ಹಬ್ಬ ಹಾಗೂಸರ್ವಧರ್ಮೀಯರ ಉಚಿತ ಸಾಮೂಹಿಕವಿವಾಹ ಮಹೋತ್ಸವ ಕಾರ್ಯಕ್ರಮವನ್ನುಫೆ.24ರಂದು ಬೆಳಗ್ಗೆ 11ಗಂಟೆಗೆ ಹರಿಹರದಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆಎಂದು ವೇದಿಕೆ ರಾಜ್ಯಾಧ್ಯಕ್ಷ ಎಚ್‌. ಸುಧಾಕರ್‌ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿಮುರುಘಾ ಶರಣರು, ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ,ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ,ಹರಿಹರ ಪಂಚಮಸಾಲಿ ಜಗದ್ಗುರು ಪೀಠದವಚನಾನಂದ ಸ್ವಾಮೀಜಿ, ಮಹರ್ಷಿ ವಾಲೀಕಿಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ,ಐರಣಿ ಮಠದ ಬಸವರಾಜ ದೇಶೀಕೇಂದ್ರಸ್ವಾಮೀಜಿ, ಬೆಂಗಳೂರು ಕಾಳಿಕಾಮಠದಋಷಿಕುಮಾರ ಸ್ವಾಮೀಜಿ, ಮಾದಾರ

ಚನ್ನಯ್ಯಗುರುಪೀಠದಬಸವಮೂರ್ತಿ ಮಾದಾರಚನ್ನಯ್ಯ ಸ್ವಾಮೀಜಿ, ಕೋಡಿಹಳ್ಳಿ ಬೃಹನ್ಮಠದಷಡಕ್ಷರಿಮುನಿ ಸ್ವಾಮೀಜಿ, ನಿಜಶರಣ ಅಂಬಿಗರ
ಚೌಡಯ್ಯ ಗುರುಪೀಠದ ಭೀಷ್ಮಶಾಂತಮುನಿಸ್ವಾಮೀಜಿ, ಬಂಜಾರಾ ಗುರುಪೀಠದಸೇವಾಲಾಲ್‌ ಸ್ವಾಮೀಜಿ, ಕೋಡಿಯಾಲಹೊಸಪೇಟೆಯ ಬಾಲಯೋಗಿ ಜಗದೀಶ್ವರಸ್ವಾಮೀಜಿ, ತಿಮ್ಮನಕಟ್ಟೆಯ ಪ್ರಭುಲಿಂಗಸ್ವಾಮೀಜಿ, ಹರಿಹರದ ಅಲ್‌ ಹಜ್‌ ಖಾಜಿಸೈಯದ್‌ ಶಂಶುದೀªನ್‌ ಭರ್ಕಾತಿ ಮೌಲಾನಾಸಾಹೇಬ್‌, ಆರೋಗ್ಯ ಮಾತೆ ದೇವಾಲಯದಫಾದರ್‌ ಡಾ. ಅಂತೋನಿ ಪೀಟರ್‌, ಕವಲೆತ್ತುಬಸವ ಕೇಂದ್ರದ ಶರಣೆ ಮುಕ್ತಾಯಮ್ಮ,ತೋಳಹುಣಸೆಯ ರೆಹಬರ್‌ ಅಲಿಷಾ ಖಾದ್ರಿರಫಯಿ, ಹರಿಹರದ ಜುಬೇರ್‌ ಅಹ್ಮದ್‌ಮೌಲಾನಾ ಸಾನ್ನಿಧ್ಯ ವಹಿಸುವರು ಎಂದುತಿಳಿಸಿದರು.

ಸ್ಥಳೀಯ ಶಾಸಕ ಎಸ್‌. ರಾಮಪ್ಪಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ. ಸಿದ್ದೇಶ್ವರಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಶಾಸಕಎಚ್‌.ಎಸ್‌. ಶಿವಶಂಕರ್‌, ಬಿ.ಪಿ. ಹರೀಶ್‌,ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರಅಜಯಕುಮಾರ್‌, ಸಮಾಜ ಸೇವಕ ಶೀನಿವಾಸ್‌ನಂದಿಗಾವಿ ಸೇರಿದಂತೆ ಜಿಲ್ಲೆಯ ಶಾಸಕರು,ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ವೇದಿಕೆಯ ಗೌರವ ಅಧ್ಯಕ್ಷ ಎಚ್‌.ಕೆ. ಕೊಟ್ರಪ್ಪಮಾತನಾಡಿ, ದುಂದುವೆಚ್ಚಕ್ಕೆ ಕಡಿವಾಣ ಹಾಕುವಲ್ಲಿಸಾಮೂಹಿಕ ವಿವಾಹ ಹೆಚ್ಚು ಅನುಕೂಲವಾಗಿದೆ.ಸಂಘಟನೆ ವತಿಯಿಂದ ವಧುವರರಿಗೆ ಸೀರೆ,ತಾಳಿ, ಕಾಲುಂಗುರ, ಬಾಸಿಂಗ, ಪಂಚೆ, ಅಂಗಿ,ಶಲೆಕೊಡಲಾಗುತ್ತದೆ. ಫೆ. 15ವರೆಗೂ ಹೆಸರುನೋಂದಾಯಿಸಲು ಅವಕಾಶವಿದೆ ಎಂದರು.ವೇದಿಕೆಯ ಪ್ರಮುಖರಾದ ರಂಜಿತ್‌, ಶ್ರೀಧರ‌,ಸಾಗರ್‌, ಬಸವರಾಜ್‌, ಶಿವರಾಜ್‌ ಇನ್ನಿತರರುಸುದ್ದಿಗೋಷ್ಠಿಯಲ್ಲಿದ್ದರು.

Advertisement

 

ಓದಿ : ನಾಡು ನುಡಿ ತಂಟೆಗೆ ಬಂದರೆ ಕೈಕಟ್ಟಿ ಕೂರಲು ಕನ್ನಡಿಗರೇನು ಕೈಗೆ ಬಳೆ ತೊಟ್ಟು ಕೂತಿಲ್ಲ!

 

Advertisement

Udayavani is now on Telegram. Click here to join our channel and stay updated with the latest news.

Next