Advertisement

ಕೊರೊನಾದಿಂದ ಸರ್ಕಾರದ ಆದಾಯ ಖೋತಾ: ಶೆಟ್ಟರ್

03:35 PM Jan 28, 2021 | Team Udayavani |

ದಾವಣಗೆರೆ: ಕೊರೊನಾದಿಂದ ಬಡವರು, ಶ್ರೀಮಂತರಿಗೂ ತೊಂದರೆ ಆಗಿದೆ. ಅದೇ ರೀತಿ ಸರ್ಕಾರದ ಆದಾಯ ಸಹ ಖೋತಾ ಆಗಿದೆ. ಪ್ರಧಾನಿ ಮೋದಿ ಆತ್ಮನಿರ್ಭರ ಯೋಜನೆ ಮೂಲಕ ಆರ್ಥಿಕ ಸುಧಾರಣೆ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಸಹ ಇರುವುದರಲ್ಲೇ ಸುಧಾರಣೆ ಮಾಡಿಕೊಂಡು ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ
ಉದ್ದಿಮೆ ಸಚಿವ ಜಗದೀಶ್‌ ಶೆಟ್ಟರ್‌ ತಿಳಿಸಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪರಿಣಾಮ ಸರ್ಕಾರಗಳ ಆದಾಯ ಕಡಿಮೆ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ರಾಜ್ಯದ ಬೊಕ್ಕಸ ಖಾಲಿ ಆಗಿದೆ ಎಂದು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಟೀಕೆಗಾಗಿ ಟೀಕೆ ಮಾಡುವುದರಲ್ಲಿ ಅರ್ಥ ಇಲ್ಲ. ಮಂತ್ರಿ ಮಂಡಲ ವಿಸ್ತರಣೆ ಸಂಬಂಧ ಕೆಲ ಸಮಸ್ಯೆಗಳಿರುತ್ತವೆ. ಅದನ್ನು
ಬಗೆಹರಿಸುವ ಕೆಲಸ ಸಿಎಂ ಯಡಿಯೂರಪ್ಪ ಮಾಡಿದ್ದಾರೆ ಎಂದರು.

ಪಂಜಾಬ್‌ ಮತ್ತು ಹರಿಯಾಣದಲ್ಲಿ ಮಾತ್ರ ರೈತರ ಪ್ರತಿಭಟನೆ ಇತ್ತು. ದೇಶದ ಬೇರೆ ರಾಜ್ಯಗಳಲ್ಲಿ ಇರಲಿಲ್ಲ. ಪ್ರಧಾನಿ ಮೋದಿ ರೈತರ ಹಿತಾಸಕ್ತಿಗಾಗಿಯೇ ಬದಲಾವಣೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಮತ್ತು ಪ್ರತಿಪಕ್ಷಗಳಿಗೆ ಟàಕೆ ಮಾಡುವುದಕ್ಕೆ ಬೇರೆ ಯಾವುದೇ ವಿಷಯ ಇಲ್ಲ. ಹಾಗಾಗಿ ಕಾಯ್ದೆಗಳ ಬಗ್ಗೆ ಟೀಕೆ ಮಾಡುತ್ತಿವೆ.

ಕಾಂಗ್ರೆಸ್‌ ಮತ್ತು ಪ್ರತಿಪಕ್ಷದವರ ಕುಮ್ಮಕ್ಕಿನಿಂದ ಈ ಹೋರಾಟ ನಡೆಯುತ್ತಿದೆ. ಮುಗ್ಧ ರೈತರ ಹೆಸರಲ್ಲಿ ಶೋಷಣೆ ನಡೆಯುತ್ತಿದೆ ಎಂದರು. ಹೋರಾಟ ನಿರತರ ರೈತರೊಂದಿಗೆ ಹಲವಾರು ಸಭೆ ನಡೆಸಲಾಗಿತ್ತು. ಸುಪ್ರೀಂ ಕೋರ್ಟ್‌ ಸಹ ತಜ್ಞರ ಸಮಿತಿ ರಚಿಸಿತ್ತು. ತಜ್ಞರ ಸಮಿತಿ ವರದಿ ನೀಡಿದ ನಂತರ ಸಮಾಲೋಚನೆ ಮಾಡುವುದಾಗಿ, ಒಂದೂವರೆ ವರ್ಷಗಳ ಕಾಲ
ಕಾಯ್ದೆಗಳ ಅಮಾನತಿನಲ್ಲಿಡುವುದಾಗಿ ಹೇಳಲಾಗಿತ್ತು. ಕಾಯ್ದೆಗಳು ಸರಿ ಇಲ್ಲ ಎಂದರೆ ವಾಪಸ್‌ ಪಡೆಯುವ ಅವಕಾಶ ಇತ್ತು. ಆದರೆ, ಅದಕ್ಕೂ ಅವಕಾಶ ನೀಡಲಿಲ್ಲ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ನಮ್ಮ ಪಕ್ಷದಲ್ಲಿ ಚುನಾವಣೆ ದಿನಾಂಕ ಘೋಷಣೆ ನಂತರವೇ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯುತ್ತದೆ. ಅಭ್ಯರ್ಥಿ ಬಗ್ಗೆ ಕೋರ್‌ ಕಮಿಟಿ, ರಾಜ್ಯ, ಕೇಂದ್ರ ಒಳಗೊಂಡಂತೆ ಎಲ್ಲಿಯೂ ಚರ್ಚೆ ಆಗಿಲ್ಲ ಎಂದರು.

 

Advertisement

ಓದಿ : ಕಾರಟಗಿಯಲ್ಲಿ ಹೈಟೆಕ್‌ ಬಸ್‌ನಿಲ್ದಾಣ: ದಢೇಸುಗೂರು

Advertisement

Udayavani is now on Telegram. Click here to join our channel and stay updated with the latest news.

Next