Advertisement

ಇಂದು ಪ್ರತಿಭಾನ್ವಿತ ಬಾಲಕಿ ಆದಿ ಸ್ವರೂಪ ಸ್ಮರಣಶಕ್ತಿ ಪ್ರದರ್ಶನ

06:12 PM Jul 25, 2021 | Team Udayavani |

ದಾವಣಗೆರೆ: ವಿಶ್ವ ದಾಖಲೆ ಮಾಡಿದ ಬಹುಮುಖ ಪ್ರತಿಭೆಯ ಬಾಲಕಿ ಆದಿ ಸ್ವರೂಪ ಅವಳಿಂದ ವಿಶೇಷ ಸ್ಮರಣಶಕ್ತಿ ಪ್ರದರ್ಶನ ಹಾಗೂ ನೆನಪಿನ ತಂತ್ರಗಳ ಅಳವಡಿಸಿಕೊಳ್ಳುವಿಕೆ ಕುರಿತ ಪರಿಚಯ ಕಾರ್ಯಕ್ರಮವನ್ನು ಜು. 25ರಂದು ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮಂಗಳೂರು ಕೊಡಿಯಾಬೈಲ್‌ನ ಸ್ವರೂಪ ಅಧ್ಯಯನ ಕೇಂದ್ರದ ನಿರ್ದೇಶಕ ಗೋಪಾಡ್ಕರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದಿಸ್ವರೂಪ ಪಡೆದುಕೊಂಡ ವಿಶೇಷ ಸ್ಮರಣಶಕ್ತಿಯ ತಂತ್ರಗಳನ್ನು ಮಕ್ಕಳಲ್ಲಿ ಅಳವಡಿಸುವಿಕೆ ಬಗ್ಗೆ ತಿಳಿಸಲು ಹಾಗೂ ಈ ವಿಶೇಷ ಶಿಕ್ಷಣ ಕುರಿತು ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ನೂರು ಜನ ಶಿಕ್ಷಕರು ಹಾಗೂ ಪ್ರತಿ ಶಿಕ್ಷಕರಿಗೆ 10 ವಿದ್ಯಾರ್ಥಿಗಳನ್ನು ಆಯ್ದುಕೊಂಡು ತರಬೇತಿ ಶಿಬಿರ ನಡೆಸಲು ನಿರ್ಧರಿಸಲಾಗಿದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

ಬಹುಮುಖ ಪ್ರತಿಭೆಯ ಆದಿಸ್ವರೂಪ 10ನೇ ತರಗತಿಯ ರಾಜ್ಯ ಪಠ್ಯದ ಒಂದು ಪುಸ್ತಕಕ್ಕೆ ಒಂದೇ ಪುಟದಲ್ಲಿ ಚಿಕ್ಕಚಿಕ್ಕ ಚಿತ್ರ (ವಿಶ್ಯುವಲ್‌ ಮೆಮರಿ ಆರ್ಟ್‌ ) ರಚಿಸಿ ದಾಖಲೆ ಮಾಡಿದ್ದಾಳೆ. ಈ ವಿಶೇಷ ಸಾಧನೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ದಾಖಲೆ ಆಗಿದೆ. ಮಕ್ಕಳಿಗೆ ಪಾಠ ಪ್ರಶ್ನೋತ್ತರಗಳು ಸುಲಭದಲ್ಲಿ ನೆನಪಿನಲ್ಲಿ ಉಳಿಯಲು, ನಿತ್ಯ ಸ್ಮರಣೆ ಮಾಡಲು ಇದು ಸಹಕಾರಿಯಾಗಲಿದೆ. ಶಾಲೆಗೆ ಹೋಗದ ಆದಿಸ್ವರೂಪ, 16ನೇ ವಯಸ್ಸಿಗೆ 10ನೇ ತರಗತಿಯನ್ನು ಏಕಕಾಲಕ್ಕೆ ಎರಡು ಕೈಗಳಿಂದ ಬರೆದು ರ್‍ಯಾಂಕ್‌ ಪಡೆಯುವ ಸಿದ್ಧತೆ ನಡೆಸಿದ್ದಳು.

ಆದರೆ, ಈ ಬಾರಿ ಬಹುಆಯ್ಕೆಯ ಪ್ರಶ್ನೆಪತ್ರಿಕೆ ಇದ್ದುದರಿಂದ ಅದು ಸಾಧ್ಯವಾಗಿಲ್ಲ. ಆದರೆ, ಪರೀಕ್ಷೆಯನ್ನು ಕೇವಲ ಒಂದು ತಾಸಿನಲ್ಲಿ ಬರೆದು ಮುಗಿಸಿದ್ದಾಳೆ ಎಂದು ಗೋಪಾಡ್ಕರ್‌ ತಿಳಿಸಿದರು.

ಹತ್ತನೇ ತರಗತಿಗೆ ಪೂರಕವಾಗಿ ಆರು ವಿಷಯಗಳ 10ನೇ ತರಗತಿಯ ಆರು ವಿಷಯಗಳ 10 ಪುಸ್ತಕಗಳಿಗೆ ಒಂದೇ ಚಿತ್ರದಲ್ಲಿ ನೋಟ್ಸ್‌, ಆರು ಪಠ್ಯ ಪುಸ್ತಕದ ಎಲ್ಲ ಪ್ರಶ್ನೋತ್ತರಗಳಿಗೆ ರಾಗ ಸಂಯೋಜನೆ, 20 ಗಂಟೆಯಲ್ಲಿ 10ನೇ ತರಗತಿಯ ಪೂರ್ಣ ಪಾಠ ಮನನ, ಬಾಯಲ್ಲಿ ಹಾಡಿಕೊಂಡು ಏಕಕಾಲಕ್ಕೆ ಎಡಗೈಯಲ್ಲಿ ಕನ್ನಡ, ಬಲಗೈಯಲ್ಲಿ ಇಂಗ್ಲಿಷ್‌ ಹೀಗೆ 17ರೀತಿಯಲ್ಲಿ ಎರಡೂ ಕೈಗಳಿಂದ ಬರೆಯುವುದು, 16 ಮಂದಿ ಒಟ್ಟಾಗಿ ಕೊಟ್ಟ ವಿಷಯಕ್ಕೆ ಎಲ್ಲರೂ ಕೇಳಿದ ಪ್ರಶ್ನೆಗೆ ಉತ್ತರಿಸುವುದು, 5000 ಇಸವಿಯ ವ್ಯಕ್ತಿ ಅಥವಾ ಘಟನೆ ದಾಖಲಿಸಿ ನಿರಂತರವಾಗಿ ಹೇಳುವುದು, 10ಸಾವಿರ ಒಂದು ಪದದ ಉತ್ತರ ಹೇಳುವುದು, ಕೈ ಭಾಷೆ ಮೂಲಕ 10ನೇ ತರಗತಿ ಪಾಠ ಪ್ರದರ್ಶನ, ಸಾವಿರ ವಸ್ತುಗಳನ್ನು 10 ಸೆಕೆಂಡ್‌ ನೋಡಿ, 100- ನಂಬರಿಗೆ ಜೋಡಿಸಿ ಕ್ರಮವಾಗಿ ಹೇಳುವುದು.

Advertisement

ಒಂದು ವಾಕ್ಯ ಒಂದು ರೇಖೆಯಂತೆ ಕ್ರಿಯೇಟಿವ್‌ ಆರ್ಟ್‌ ರಚಿಸಿ, ಪೂರ್ಣ ಪುಸ್ತಕ ದಾಖಲಿಸುವುದು ಅಲ್ಲದೇ ಸಂಗೀತ, ನೃತ್ಯ, ಚಿತ್ರಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆದಿಸ್ವರೂಪ ಸಾಧನೆ ಮಾಡಿದ್ದಾಳೆ ಎಂದು ಗೋಪಾಡ್ಕರ್‌ ತಿಳಿಸಿದರು. ರಂಗಕರ್ಮಿ ಸಿದ್ಧರಾಜು, ಬಾಲಕಿ ಆದಿ ಸ್ವರೂಪ, ಸ್ವರೂಪ ಅಧ್ಯಯನ ಕೇಂದ್ರದ ಕೇಂದ್ರದ ಪ್ರಾಂಶುಪಾಲೆ
ಸುಮಾಡ್ಕರ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next