Advertisement

ಗರ್ಭಿಣಿಯರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲಿ

08:53 PM Jul 18, 2021 | Team Udayavani |

ಹೊನ್ನಾಳಿ: ಕೊರೊನಾ ಬಾರದಂತೆ ತಡೆಯಲು ಗರ್ಭಿಣಿಯರು ಕೊರೊನಾ ಲಸಿಕೆಯನ್ನು ಅವಶ್ಯವಾಗಿ ಹಾಕಿಸಿಕೊಳ್ಳಬೇಕು ಇದರಿಂದ ಯಾವುದೇ ಅಪಾಯ ಇಲ್ಲ ಎಂದು ತಜ್ಞರೇ ಹೇಳಿದ್ದಾರೆ.

Advertisement

ಹಾಗಾಗಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯಬೇಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮನವಿ ಮಾಡಿದರು. ಲಸಿಕಾ ಕೇಂದ್ರಗಳಾದ ಹೊನ್ನಾಳಿ ಪಟ್ಟಣದ ಅಂಬೇಡ್ಕರ್‌ ಭವನ ಹಾಗೂ ನ್ಯಾಮತಿ ಸರ್ಕಾರಿ ಆಸ್ಪತ್ರೆಗಳಿಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.

ಅವಳಿ ತಾಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ 800 ಲಸಿಕೆಗಳನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ 45 ವರ್ಷ ಮೇಲ್ಪಟ್ಟವರ ಎರಡನೇ ಡೋಸ್‌ ಲಸಿಕೆಗೆ ಮೀಸಲಿಡಲಾಗಿದೆ ಎಂದರು. ಅವಳಿ ತಾಲೂಕಿನಾದ್ಯಂತ 45 ವರ್ಷ ಮೇಲ್ಪಟ್ಟವರಿಗೆ 59,967 ಗುರಿ ಇದ್ದು, 58,860 ಜನರಿಗೆ ಲಸಿಕೆ ಹಾಕಿ ಶೇ. 98 ರಷ್ಟು ಗುರಿ ತಲುಪಲಾಗಿದೆ. 18 ಹಾಗೂ 45 ವರ್ಷ ಮೇಲ್ಪಟ್ಟ 84,260 ಜನರಿಗೆ ಈಗಾಗಲೇ ಲಸಿಕೆ ಹಾಕಲಾಗಿದೆ, ಉಳಿದವರಿಗೂ ಸಹ ಹಂತ ಹಂತವಾಗಿ ಲಸಿಕೆ ಹಾಕಿಸಲಾಗುವುದು.

ತಾಲೂಕಿನ ಕೊನೆ ಭಾಗದ ಹಳ್ಳಿಗಳಲ್ಲೂ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಪುರಸಭೆ ಸದಸ್ಯರಾದ ರಂಗಪ್ಪ, ಬಾಬು ಓಬಳದಾರ್‌, ಧರ್ಮಪ್ಪ, ಮುಖಂಡರಾದ ಸತೀಶ್‌, ಪಲ್ಲವಿ ರಾಜು, ಚಂದ್ರು, ಮಹೇಶ್‌ ಹುಡೇದ್‌, ಶುಶ್ರೂಷಕಿ ನಾಗರತ್ನಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next