Advertisement
ಚುನಾವಣಾ ಆಯೋಗವು ತಾಲೂಕಾವಾರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ವರ್ಗೀಕರಿಸಿ ಈಗಾಗಲೇ ಆದೇಶ ಹೊರಡಿಸಿದ್ದು ಜಿಲ್ಲೆಯ 195ಗ್ರಾಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗುತ್ತಿದೆ. ಇತ್ತೀಚೆಗಷ್ಟೇ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರು, ಈ ಹಿಂದಿನ ಅವಧಿಯಲ್ಲಿ ತಮ್ಮ ಪಂಚಾಯಿತಿಗೆ ಯಾವ ಮೀಸಲಾತಿ ಬಂದಿತ್ತು. ಈ ಬಾರಿ ಯಾವುದು ಬರಬಹುದು ಎಂಬಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಮೊದಲು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಗೊಳಿಸಲಾಗುತ್ತದೆ. ಸಾಧ್ಯವಾದಷ್ಟು ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಮೀಸಲಾತಿಯೇ ಉಪಾಧ್ಯಕ್ಷ ಸ್ಥಾನಕ್ಕೆ ಬರದಂತೆ ನೋಡಿಕೊಳ್ಳಲು ಆಯೋಗ ಸೂಚಿಸಿದೆ. ಆಯೋಗದ ಸೂಚನೆಯಂತೆ ಕೆಲವು ವರ್ಗಗಳಲ್ಲಿ ಶೇ.50ಕ್ಕಿಂತ ಕಡಿಮೆ ಇಲ್ಲದಂತೆ ಮಹಿಳೆಯರಿಗೆ ಸ್ಥಾನಗಳನ್ನು ಮೀಸಲಿರಿಸಲೇ ಬೇಕಾಗಿದೆ. ಅಲ್ಪಸ್ಥಾನಗಳಿರುವ ವರ್ಗದಲ್ಲಿ ಬೆಸ ಸಂಖ್ಯೆಯ
ಸ್ಥಾನಗಳಿರುವಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕಾಗಿದೆ. ಉದಾಹರಣೆಗೆ ಮೂರು ಸ್ಥಾನಗಳಿದ್ದರೆ ಅಲ್ಲಿ ಎರಡು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಬೇಕಿದೆ. ಈ ವರ್ಗಗಳಲ್ಲಿ ಗ್ರಾಪಂ ಗದ್ದುಗೆ ಏರುವ ಕನಸು ಕಾಣುವ ಪುರುಷರಿಗೆ ನಿರಾಸೆಯಾಗುವುದಂತೂ ಖಚಿತ. ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ಸದಸ್ಯರ ಸಮ್ಮುಖದಲ್ಲಿಯೇ ನಡೆಸಲಾಗುತ್ತದೆ. ತನ್ಮೂಲಕ ಕಮೀಸಲಾತಿ ನಿಗದಿ
ಪಾರದರ್ಶಕವಾಗಿ ನಡೆಯುವುದರಿಂದ ಯಾವುದೇ ಪಕ್ಷ, ಮುಖಮಡರ ಒತ್ತಡಕ್ಕೆ ಇಲ್ಲಿ ಆಸ್ಪದ ಇಲ್ಲ ಎಂಬುದು ಇಲ್ಲಿ ಗಮನಾರ್ಹ.
Related Articles
Advertisement
ಕೆಲ ಪ್ರಬಲ ಆಕಾಂಕ್ಷಿಗಳು ತಮಗೆ ಅನುಕೂಲವಾಗುವ ಮೀಸಲಾತಿ ಬಂದರೆ ಬೆಂಬಲಿಸುವಂತೆ ಈಗಾಗಲೇ ಸದಸ್ಯರ ಮನವೊಲಿಸುವ ಕಾರ್ಯ ಮುಂದುವರಿಸಿದ್ದಾರೆ. ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಸದಸ್ಯರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಯೋಜನೆಯನ್ನೂ ಹಾಕಿಕೊಂಡಿದ್ದಾರೆ.
ಮೀಸಲಾತಿಗೆ ನಿಗದಿ ಸಭೆ
ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆಯು ಗ್ರಾಪಂ ಸದಸ್ಯರ ಸಮಕ್ಷಮ ಜಿಲ್ಲಾಧಿಕಾರಿಗಳ ಕಚೇರಿಯ ತುಂಗಾಭದ್ರ ಸಭಾಂಗಣದಲ್ಲಿ ನಡೆಯಲಿದೆ. ಜ. 27ರಂದು ಬೆಳಗ್ಗೆ 10ಗಂಟೆಗೆ ಹರಿಹರ ತಾಲೂಕು, ಮಧ್ಯಾಹ್ನ 2ಗಂಟೆಗೆ ಹೊನ್ನಾಳಿ ತಾಲೂಕು, ಜ. 28ರಂದು ಬೆಳಗ್ಗೆ 10ಗಂಟೆಗೆ ಜಗಳೂರು ತಾಲೂಕು, ಮಧ್ಯಾಹ್ನ 2 ಗಂಟೆಗೆ ದಾವಣಗೆರೆ ತಾಲೂಕು, ಜ.29ರಂದು ಬೆಳಗ್ಗೆ 10ಗಂಟೆಗೆ ನ್ಯಾಮತಿ ತಾಲೂಕು ಹಾಗೂ ಮಧ್ಯಾಹ್ನ 1ಗಂಟೆಗೆ ಚನ್ನಗಿರಿ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳಮೀಸಲಾತಿ ನಿಗದಿ ಸಭೆ ನಡೆಯಲಿದೆ. ಎಚ್.ಕೆ. ನಟರಾಜ ಓದಿ : ದೇವೋಭವದಿಂದ ಅತಿಥಿ ತುಮ್ ಕಬ್ ಜಾವೋಗೆ ವರೆಗೆ…