Advertisement

ದೇವಸ್ಥಾನ ನಿರ್ಮಾಣ ಪುಣ್ಯದ ಕಾರ್ಯ

03:19 PM Jan 27, 2021 | Team Udayavani |

ಮಲೇಬೆನ್ನೂರು: ಬೆನಕನಕೊಂಡಿ ಮನೆತನದವರು ತಮ್ಮ ಒಡೆತನದಲ್ಲಿದ್ದ ಜಮೀನು ಮಾರಾಟ ಮಾಡಿ ಬೃಹತ್‌ ದೇವಸ್ಥಾನ ನಿರ್ಮಾಣ ಮಾಡುತ್ತಿರುವುದು ಪುಣ್ಯದ ಕೆಲಸ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ಬೆನಕನಕೊಂಡಿ ಮನೆ ತನದವರು ಮಲೇಬೆನ್ನೂರು- ಕುಂಬಳೂರು ಮಧ್ಯದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಗಣಪತಿ ಮತ್ತು ಶ್ರೀ ಭದ್ರಕಾಳಿ ಅಮ್ಮನವರ ದೇವಸ್ಥಾನದ ಕಟ್ಟಡ ವೀಕ್ಷಿಸಿ ಅವರು ಮಾತನಾಡಿದರು. ಬೃಹತ್‌ ದೇವಸ್ಥಾನ ಲೋಕಾರ್ಪಣೆಯಾದ ನಂತರ ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ರಾಜ್ಯದ ಹೆಮ್ಮೆಯ ಕಿರೀಟ ಆಗಲಿದೆ ಎಂದರು.

ಮುಖ್ಯಮಂತ್ರಿಗಳು ದಾವಣಗೆರೆ ನಗರಪಾಲಿಕೆಗೆ 125 ಕೋಟಿ, ಸ್ಮಾರ್ಟ್‌ ಸಿಟಿ ಯೋಜನೆಗೆ 1 ಸಾವಿರ ಕೋಟಿ, ಅನುದಾನ ನೀಡಿದ್ದಾರೆ. ಮೆಕ್ಕೆಜೋಳ, ಭತ್ತ ಬೆಳೆಯುವ ರೈತರ ಅಕೌಂಟ್‌ಗೆ 37 ಕೋಟಿ, ತೋಟಗಾರಿಕೆ ರೈತರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ನೀಡಿದ್ದಾರೆ.
ಹೊನ್ನಾಳಿ ತಾಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗೆ 48 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಶ್ರೀಮಂತಿಕೆ ಮತ್ತು ನೈತಿಕತೆ ಇರುವುದು ವಿರಳ. ಆದರೆ ಬೆನಕನಕೊಂಡಿ ಮನೆತನದವರು
ತಮಗಲ್ಲದೆ ಸಾರ್ವಜನಿಕರಿಗಾಗಿ ಬೃಹತ್‌ ದೇವಸ್ಥಾನ ನಿರ್ಮಾಣ ಮಾಡುವುದರ ಮೂಲಕ ಪುಣ್ಯದ ಕೆಲಸ ಮಾಡುತ್ತಿದ್ದಾರೆ.
ಇಂದಿನ ಜಂಜಾಟದಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಇಂತಹ ಪುಣ್ಯಕ್ಷೇತ್ರ ಅಗತ್ಯ ಎಂದರು.

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಹರಿಹರ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಆರ್ಯವೈಶ್ಯ ನಿಗಮದ ಅಧ್ಯಕ್ಷ ಎಚ್‌.ಎಸ್‌. ಅರುಣ್‌, ದಾವಣಗೆರೆ ಉದ್ಯಮಿ ಬಿ.ಸಿ. ಉಮಾಪತಿ, ಎನ್‌. ಎಂ.ಜೆ. ಮುರುಗೇಶ್‌ ಮಾತನಾಡಿ, ಬೆನಕನಕೊಂಡಿ ಮನೆತನದ ಕಾರ್ಯವನ್ನು
ಶ್ಲಾಘಿಸಿದರು.

ಜಿಲ್ಲಾ ಧಿಕಾರಿ ಮಹಾಂತೇಶ್‌ ಬೀಳಗಿ, ಉಪವಿಭಾಗಾ ಧಿಕಾರಿ ಮಮತಾ ಹೊಸಗೌಡರ, ವೀರಶೈವ ಸಮಾಜ ಜ್ಯೋತಿ ಪ್ರಕಾಶ್‌, ಜಿಪಂ ಸಿಇಒ ಪದ್ಮ ಬಸವಂತಪ್ಪ, ದೂಡಾ ಕಮಿಷನರ್‌ ಕುಮಾರಸ್ವಾಮಿ, ಸ್ಮಾರ್ಟ್‌ಸಿಟಿ ಕಮಿಷನರ್‌ ರವಿಂದ್ರ ಮಾಲ್ಲಾಪುರ ಮತ್ತು ಬೆನಕನಕೊಂಡಿ
ಮನೆತನದವರು ಉಪಸ್ಥಿತರಿದ್ದರು.

Advertisement

ಓದಿ : ಕೆಂಪು ಕೋಟೆ ಬಳಿ ನಡೆದ ಹಿಂಸಾಚಾರದಲ್ಲಿ ಅನ್ಯ ಶಕ್ತಿಗಳ ಕೈವಾಡ : HDK

Advertisement

Udayavani is now on Telegram. Click here to join our channel and stay updated with the latest news.

Next