Advertisement

ಮೀಸಲಾತಿ ಹೋರಾಟ: 29ಕ್ಕೆ ದಾವಣಗೆರೆಗೆ ಪಾದಯಾತ್ರೆ

03:08 PM Jan 27, 2021 | Team Udayavani |

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎಮೀಸಲಾತಿಗೆ ಒತ್ತಾಯಿಸಿ ಕೂಡಲ ಸಂಗಮದಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು
ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿನಡೆಯುತ್ತಿರುವ ಪಾದಯಾತ್ರೆ ಜ.29ರಂದುದಾವಣಗೆರೆಗೆ ಆಗಮಿಸಲಿದೆ. ಅಂದಿನಬಹಿರಂಗಸಭೆಯಲ್ಲಿ ಹರಿಹರ ಪೀಠದ ಶ್ರೀ ವಚನಾನಂದಸ್ವಾಮೀಜಿ ಭಾಗವಹಿಸುವರು ಎಂದು ಸ್ವಾಗತಸಮಿತಿ ಗೌರವ ಅಧ್ಯಕ್ಷ ಎಚ್‌.ಎಸ್‌. ನಾಗರಾಜ್‌ತಿಳಿಸಿದ್ದಾರೆ.

Advertisement

ಗಂಟೆಗೆ ಸಂಗೊಳ್ಳಿ ರಾಯಣ್ಣ ವೃತ್ತದಿಂದಬಹಿರಂಗ ಸಭೆ ನಡೆಯುವ ಶ್ರೀ ಬೀರಲಿಂಗೇಶ್ವದೇವಸ್ಥಾನ ಮೈದಾನದವರೆಗೆಮೆರವಣಿಗೆನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿತಿಳಿಸಿದರು.ಸಂಜೆ 4ಕ್ಕೆ ನಡೆಯುವ ಬಹಿರಂಗಸಭೆಯಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ,ಶ್ರೀ ವಚನಾನಂದ ಸ್ವಾಮೀಜಿ, ಶಾಸಕ ಬಸವರಾಜ್‌ಪಾಟೀಲ್‌ ಯತ್ನಾಳ, ವಿಜಯಾನಂದಕಾಶಪ್ಪನವರ್‌ ಭಾಗವಹಿಸುವರು ಎಂದರು.

ಪಂಚಮಸಾಲಿ ಸಮಾಜದಲ್ಲಿ ಗೊಂದಲವೇಇಲ್ಲದಿದ್ದರೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳುಸ್ವಾರ್ಥಕ್ಕಾಗಿ ಗೊಂದಲ ಇದೆ ಎನ್ನುವಂತೆಮಾಡಿದವರಿಗೆ ಉತ್ತರವಾಗಿ ಹರಪನಹಳ್ಳಿಯಲ್ಲಿನಡೆದ ಪಾದಯಾತ್ರೆಯ ಬಹಿರಗ ಸಭೆಯಲ್ಲಿಇಬ್ಬರೂ ಶ್ರೀಗಳು ವೇದಿಕೆ ಹಂಚಿಕೊಳ್ಳುವಮೂಲಕ ಸಮಾಜ ಒಗ್ಗಟ್ಟಾಗಿ ಇದೆ. ಮುಂದೆಯೂಇರುತ್ತದೆ. 2 ಎ ಮೀಸಲಾತಿ ಪಡೆದೇ ಪಡೆಯುತ್ತದೆ
ಎಂಬ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ ಬಹಿರಂಗ ಸಭೆಯಲ್ಲಿಭಾಗವಹಿಸಬೇಕು ಎಂದು ಹರಿಹರ ಪೀಠದಶ್ರೀಗಳನ್ನು ನಾವು ಭೇಟಿ ಮಾಡಿದಾಗಸಮಾಜದಿಂದ ನಾವು, ಸಮಾಜಕ್ಕಾಗಿ ನಾವು…ಎಂದು ತುಂಬು ಮನಸ್ಸಿನಿಂದ ಬಹಿರಂಗಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಕೊಂಡರು. ಅಂದಿನಸಭೆಯಲ್ಲಿ ಸಮಾಜದ ಮುಖಂಡರಾದ ಬಿ.ಸಿ.ಉಮಾಪತಿ, ಬಿ. ಲೋಕೇಶ್‌, ಎಂ. ದೊಡ್ಡಪ್ಪಇತರರು ಸಹ ಭಾಗವಹಿಸುವರು ಎಂದರು.
ಪಾದಯಾತ್ರೆ ಮಧ್ಯ ಕರ್ನಾಟಕ ಪ್ರವೇಶಿಸುವಮುನ್ನವೇ ಪಂಚಮಸಾಲಿ ಸಮಾಜಕ್ಕೆ 2 ಎಮೀಸಲಾತಿ ನೀಡುವ ಮೂಲಕ ಸಮಾಜದಋಣ ತೀರಿಸುವರು ಎಂಬ ವಿಶ್ವಾಸ ಇದೆ.ಇಲ್ಲದೇ ಹೋದಲ್ಲಿ ದಾವಣಗೆರೆಯಿಂದಲೇಬಾರುಕೋಲು ಚಳವಳಿ ನಡೆಸಬೇಕಾಗುತ್ತದೆಎಂದು ವಚನಾನಂದ ಸ್ವಾಮೀಜಿಹರಪನಹಳ್ಳಿಯಸಭೆಯಲ್ಲಿ ಹೇಳಿದ್ದಾರೆ. ಕೆಲವರು ತಮ್ಮ ವೈಯಕ್ತಿಕಅಭಿಪ್ರಾಯ ಹಂಚಿಕೊಂಡಿರಬಹುದು. ಆದರೆ,ಅದು ಸಮಾಜದ ಹೇಳಿಕೆ ಅಲ್ಲ. ಹರಿಹರದಲ್ಲಿನಬಹಿರಂಗ ಸಭೆಯಲ್ಲಿ ವಚನಾನಂದಶ್ರೀಗಳುಪಾಲ್ಗೊಳ್ಳದೇ ಇರುವುದಕ್ಕೆ ಸಂಬಂಧಿತರನ್ನೇಕೇಳಬೇಕು.ನಮ್ಮದು ಏನಿದ್ದರೂ ದಾವಣಗೆರೆಮಾರಂಭದ ಜವಾಬ್ದಾರಿ ಎಂದು ಪ್ರಶ್ನೆಯೊಂದಕ್ಕೆ
ಉತ್ತರಿಸಿದರು.

ಸ್ವಾಗತ ಸಮಿತಿ ಪ್ರಧಾನಕಾರ್ಯದರ್ಶಿ ಪ್ರಭು ಕಲುºರ್ಗಿ, ವೀಣಾಕಾಶಪ್ಪನವರ್‌, ಮಂಜುಳಾ ಮಹೇಶ್‌, ಬಾತಿನಾಗರಾಜ್‌, ಹದಡಿ ರವಿ, ತಣಿ°ಗೆರೆ ಶಿವಕುಮಾರ್‌ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

ಓದಿ :     ರಿಂಗ್‌ ರಸ್ತೆ ಸ್ವತ್ಛತೆಗೆ ಆರು ತಂಡ ರಚನೆ

Advertisement

Udayavani is now on Telegram. Click here to join our channel and stay updated with the latest news.

Next