Advertisement
ಹುಚ್ಚವನಹಳ್ಳಿ ಮಂಜುನಾಥ್ ಬಣದ ಮುಖಂಡರು 25ಕ್ಕೂ ಹೆಚ್ಚು ಟ್ರಾಕ್ಟರ್‌ಗಳಲ್ಲಿ ಪರೇಡ್ ನಡೆಸಲಾಯಿತು. ಕೇಂದ್ರ ಸರ್ಕಾರ ಕೃಷಿಗೆ ಸಂಬಂಧಿಸಿದಂತೆ ಜಾರಿ ಮಾಡಿರುವ ಮೂರು ಕಾಯ್ದೆಗಳು ರೈತರ ಪಾಲಿಗೆ ಅಕ್ಷರಶಃ ಮರಣ ಶಾಸನ. ಕಾಯ್ದೆಗಳ ಪರಿಣಾಮ ಅನ್ನದಾತರು ಬೀದಿಗೆ ಬರುವಂತಹ ದಾರುಣ ಸ್ಥಿತಿ ನಿರ್ಮಾಣವಾಗಿಯೇ ತೀರುತ್ತದೆ. ರೈತರ ಜಮೀನು, ಗದ್ದೆ ಎಲ್ಲವು ಬಂಡವಾಳಗಾರರ ಪಾಲಾಗಲಿವೆ. ಹಾಗಾಗಿ ಕೇಂದ್ರ ಸರ್ಕಾರ ಕೂಡಲೇ ಕರಾಳ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಕಾಯ್ದೆಗಳಿಂದ ಎಪಿಎಂಸಿ ಮುಚ್ಚುವುದಿಲ್ಲ. ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ ನೀಡಲಾಗಿದೆ
ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಪ್ರಾರಂಭಿಕ ಹಂತದಲ್ಲಿ ಹೆಚ್ಚಿನ ಧಾರಣೆಯಲ್ಲಿ ಖರೀದಿ ಮಾಡಬಹುದು. ಎಪಿಎಂಸಿಗಳಲ್ಲಿನ ಮಂಡಿಗಳು ಮುಚ್ಚಿದ ನಂತರ ಕಾರ್ಪೋರೇಟ್ ಕಂಪನಿಗಳು ಕೇಳುವ ಬೆಲೆಗೆ ಮಾರಾಟ ಮಾಡಬೇಕಾದ ವಾತಾವರಣ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಂಬಲ ಬೆಲೆಗೆ ಕಾಯ್ದೆ ರೂಪ ನೀಡುವಂತೆ ಒತ್ತಾಯಿಸಿದರು.
ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 142 ರೈತರು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರ ರೈತರು ಹಾಗೂ ಕಾರ್ಮಿಕರ ಬೆನ್ನೆಲುಬು ಮುರಿದಿದೆ. ಹೋರಾಟಗಾರರನ್ನು ಭಯೋತ್ಪಾದಕರಂತೆ ಎಂಬುದಾಗಿ ಕೇಂದ್ರ ಸರ್ಕಾರ ಬಿಂಬಿಸಿತು. ಹೀಗಿದ್ದರೆ 11 ಬಾರಿ ಸಭೆ ಏಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದರು. ಹಿರಿಯ ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ಹುಚ್ಚವ್ವನಹಳ್ಳಿ ಮಂಜುನಾಥ್, ಆವರಗೆರೆ ವಾಸು, ಆವರಗೆರೆ ಚಂದ್ರು, ಆವರಗೆರೆ ಉಮೇಶ್, ಜಬೀನಾಖಾನಂ, ದಾಕ್ಷಾಯಣಮ್ಮ, ಕೊಂಡಜ್ಜಿ ಮಲ್ಲಿಕಾರ್ಜುನ, ಮಹಾಂತೇಶ್, ಗೀತಾ ಚಂದ್ರಶೇಖರ್, ಯಶೋಧಮ್ಮ, ರಾಜೇಶ್ವರಿ, ಇಂದ್ರಮ್ಮ, ಹೆಗ್ಗರೆ ರಂಗಪ್ಪ, ಪೂಜಾರ್ ಅಂಜಿನಪ್ಪ, ಗುಮ್ಮನೂರು ಬಸವರಾಜ್, ದೇವನಹಳ್ಳಿ ರವಿ, ಹೂವಿನಮಡು ಅಂಜಿನಪ್ಪ, ಆನಂದರಾಜ್, ಐರಣಿಚಂದ್ರು, ಕರಿಬಸಪ್ಪ, ಶ್ರೀನಿವಾಸ್ ಇದ್ದರು.
Related Articles
Advertisement