Advertisement

ಬಡವರ ಮರಳು ಜಪ್ತಿಗೆ ಅವಕಾಶ ಕೊಡಲ್ಲ

10:01 PM Jun 16, 2021 | Team Udayavani

ಹೊನ್ನಾಳಿ: ಅಕ್ರಮ ಮರಳು ಗಣಿಗಾರಿಕೆಗೆ ನಾನು ಬೆಂಬಲ ನೀಡುವುದಿಲ್ಲ. ಆದರೆ ಆಶ್ರಯ ಮನೆ ಕಟ್ಟಲು ಎತ್ತಿನಗಾಡಿ, ಬೈಕ್‌ನಲ್ಲಿ ತಂದು ಸಂಗ್ರಹಿಸಿಟ್ಟಿದ್ದ ಮರಳನ್ನು ಜಪ್ತಿ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಅರಬಗಟ್ಟೆ ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮಾಡಿ ಮರಳು ಸಂಗ್ರಹಿಸಿದ್ದರೆ ಅಂತಹ ಮರಳನ್ನು ಜಪ್ತಿ ಮಾಡಲಿ. ಅದಕ್ಕೆ ನಾನು ಬೆಂಬಲ ನೀಡುತ್ತೇನೆ. ಬಡವರು ಮನೆ ಕಟ್ಟಲು ಸಂಗ್ರಹಿಸಿಟ್ಟ ಮರಳು ಜಪ್ತಿ ಮಾಡಬಾರದು ಎಂದರು. ಎತ್ತಿನಗಾಡಿ, ಬೈಕ್‌ನಲ್ಲಿ ಮರಳನ್ನು ಆಶ್ರಯ ಮನೆ ಕಟ್ಟಲು ತೆಗೆದುಕೊಂಡು ಹೋಗುತ್ತಾರೆ.

ಅದಕ್ಕೆ ಸರ್ಕಾರ ಅನುಮತಿ ನೀಡಿದೆ. ಎತ್ತಿನಗಾಡಿಯಲ್ಲಿ ಮರಳು ಹೊಡೆಯುತ್ತಿರುವುದರಿಂದ ಬಡವರಿಗೆ ಕಡಿಮೆ ಬೆಲೆಗೆ ಮರಳು ಸಿಗುತ್ತಿದ್ದು ಅಂತಹವರ ಪರವಾಗಿ ನಾನು ಸದಾ ಇರುತ್ತೇನೆ ಎಂದು ಘೋಷಿಸಿದರು. ಮರಳಿನ ವಿಷಯವಾಗಿ ಈ ಹಿಂದೆ ಅಹೋರಾತ್ರಿ ಹೋರಾಟ ಮಾಡಿದ್ದೇನೆ. ಅಲ್ಲದೆ ಜೈಲಿಗೂ ಹೋಗಿ ಬಂದಿದ್ದೇನೆ. ಮರಳಿಗೆ ಚಿನ್ನದ ಬೆಲೆ ಬಂದಿದ್ದು, ಚಿನ್ನವನ್ನು ಖರೀದಿ ಮಾಡಬಹುದು. ಆದರೆ ಬಡವರು ಮರಳು ಖರೀದಿ ಮಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆಲ್ಲ ಹತ್ತು ಸಾವಿರ ರೂ.ಗೆ ಒಂದು ಟ್ರಾÂಕ್ಟರ್‌ ಲೋಡ್‌ ಮರಳು ಸಿಗುತ್ತಿತ್ತು. ನಾನು ಶಾಸಕನಾದ ಮೇಲೆ ಮೂರರಿಂದ ನಾಲ್ಕು ಸಾವಿರಕ್ಕೆ ಒಂದು ಟ್ರಾÂಕ್ಟರ್‌ ಮರಳು ಸಿಗುತ್ತಿದೆ. ನಾನು ಬಡವರ ಪರವಾಗಿ ಇರುವುದೇ ಇದಕ್ಕೆ ಕಾರಣ ಎಂದರು. ಮಟ್ಕಾ, ಜೂಜಾಟ ಅಡ್ಡೆಯ ಮೇಲೆ ದಾಳಿ ಮಾಡಿದರೆ ನಾನು ಬೇಡ ಎನ್ನುವುದಿಲ್ಲ. ಮನೆ ಕಟ್ಟಲು ಸಂಗ್ರಹಿಸಿದ್ದ ಮರಳನ್ನು ಜಪ್ತಿ ಮಾಡಬೇಡಿ. ಮನೆ ಕಟ್ಟಲು ಮರಳು ಸಂಗ್ರಹಿಸಿದ್ದೇ ತಪ್ಪಾ ಎಂದು ಪ್ರಶ್ನಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next