Advertisement

ಜಿಲ್ಲೆಯ 3.81 ಲಕ್ಷ ಜನರಿಗೆ ಕೊರೊನಾ ಲಸಿಕೆ

09:14 PM Jun 15, 2021 | Team Udayavani |

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಂತ ಹಂತವಾಗಿ ಪೂರೈಕೆಯಾಗುತ್ತಿರುವ ಕೊವಿಡ್‌ ಲಸಿಕೆಯನ್ನು ಜಿಲ್ಲಾ ಆರೋಗ್ಯ ಇಲಾಖೆ ಜಿಲ್ಲೆಯ ಜನರಿಗೆ ನಿರಂತರವಾಗಿ ನೀಡುತ್ತಿದ್ದು ಈವರೆಗೆ 3.81ಲಕ್ಷ ಜನರು ಲಸಿಕೆ ಪಡೆದಿದ್ದಾರೆ.

Advertisement

ಜಿಲ್ಲಾ ಆರೋಗ್ಯ ಇಲಾಖೆಯ ಜೂ. 14 ರವರೆಗಿನ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ದಾವಣಗೆರೆ ತಾಲೂಕಿನಲ್ಲಿ ಅತಿ ಹೆಚ್ಚು ಜನರು ಅಂದರೆ 1.49 ಲಕ್ಷ ಜನರು ಕೋವಿಡ್‌ ಲಸಿಕೆ ಪಡೆದಿದ್ದಾರೆ. ಜಗಳೂರು ತಾಲೂಕಿನಲ್ಲಿ ಅತಿ ಕಡಿಮೆ ಎಂದರೆ 28,585 ಜನರು ಲಸಿಕೆ ಪಡೆದುಕೊಂಡಿದ್ದಾರೆ. ಉಳಿದಂತೆ ಚನ್ನಗಿರಿ ತಾಲೂಕಿನಲ್ಲಿ 90,694, ಹರಿಹರ ತಾಲೂಕಿನಲ್ಲಿ 53,479, ಹೊನ್ನಾಳಿ ತಾಲೂಕಿನಲ್ಲಿ 58,782 ಜನರು ಲಸಿಕೆ ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ 15,661 ಆರೋಗ್ಯ ಕಾರ್ಯಕರ್ತರು, 12,299 ಮುಂಚೂಣಿ ಕೊರೊನಾ ಯೋಧರು, 18-44 ವರ್ಷ ವಯೋಮಾನದ 29,278 ಜನರು, 45-59 ವರ್ಷ ವಯೋಮಾನದ 1,45,028 ಜನರು, 60 ವರ್ಷ ಮೇಲ್ಪಟ್ಟ 1,07,562 ಜನರು ಮೊದಲ ಹಂತದ ಡೋಸ್‌ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 10,125 ಆರೋಗ್ಯ ಕಾರ್ಯಕರ್ತರು, 4452 ಜನ ಮುಂಚೂಣಿ ಕೊರೊನಾ ಯೋಧರು, 18-44 ವರ್ಷ ವಯೋಮಾನದ 106 ಜನರು 45-59 ವರ್ಷ ವಯೋಮಾನದ 22,484 ಜನರು ಹಾಗೂ 60 ವರ್ಷ ಮೇಲ್ಪಟ್ಟ 34,156 ಜನರು ಎರಡೂ ಹಂತದ ಲಸಿಕೆ ಹಾಕಿಸಿಕೊಂಡಿದ್ದಾರೆ. ಪ್ರಸ್ತುತ ಆರೋಗ್ಯ ಕಾರ್ಯಕರ್ತರು, ಕೊರೊನಾ ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರ ಕುಟುಂಬದ 18-45 ವರ್ಷ ವಯೋಮಾನದವರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಪೂರೈಕೆ ಹೆಚ್ಚಾಗುತ್ತಿದ್ದಂತೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲು ಯೋಜನೆ ಹಾಕಿಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತೆರೆದ ಲಸಿಕಾ ಕೇಂದ್ರದಲ್ಲಿ ಲಸಿಕೆ ನೀಡುತ್ತಿದ್ದರೆ, ಕೊರೊನಾ ಮುಂಚೂಣಿ ಕಾರ್ಯಕರ್ತರಿಗೆ ಅವರು ಕೆಲಸ ಮಾಡುವ ಸ್ಥಳದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ.

Advertisement

ಶಾಮನೂರು-ಮಲ್ಲಿಕಾರ್ಜುನ್‌ ಸೇವಾ ಕಾರ್ಯ ಮಾದರಿ: ಮುನಿಯಪ್ಪ

ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್‌. ಎಸ್‌.ಮಲ್ಲಿಕಾರ್ಜುನ್‌ ದಾವಣಗೆರೆ ನಾಗರಿಕರಿಗಾಗಿ ಹಮ್ಮಿಕೊಂಡಿರುವ ಉಚಿತ ಲಸಿಕಾ ಶಿಬಿರ ಕಾರ್ಯಕ್ರಮ ಮುಂದುವರೆದಿದೆ. ಸೋಮವಾರ ದಾವಣಗೆರೆಯ ತೊಗಟವೀರ ಕಲ್ಯಾಣಮಂಟಪದಲ್ಲಿ 24ನೇ ವಾರ್ಡ್‌ನ ನಾಗರಿಕರಿಗೆ ಏರ್ಪಡಿಸಿದ್ದ ಲಸಿಕಾ ಶಿಬಿರಕ್ಕೆ ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸರ್ಕಾರದ ನಿರ್ಲಕ್ಷéದಿಂದ ಸರಿಯಾದ ಸಮಯಕ್ಕೆ ಲಸಿಕೆ ಬಾರದ ಕಾರಣ ಶಾಸಕ ಶಾಮನೂರು ಶಿವಶಂಕರಪ್ಪ ಅವರೇ ಲಸಿಕೆ ಖರೀದಿಸಿ ದಾವಣಗೆರೆ ನಾಗರಿಕರಿಗೆ ಉಚಿತವಾಗಿ ಲಸಿಕೆ ಹಾಕಿಸುತ್ತಿರುವುದು ಸಂತೋಷದ ವಿಷಯ ಎಂದು ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ನಲ್ಲೂರು ಎಸ್‌. ರಾಘವೇಂದ್ರ, ಬೆಳ್ಳೂಡಿ ಮಂಜುನಾಥ್‌, ಬಸವರಾಜ್‌, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌, ಸದಸ್ಯ ಜಿ.ಎಸ್‌. ಮಂಜುನಾಥ್‌, ಬಿ.ಎಚ್‌.ವೀರಭದ್ರಪ್ಪ, ಜಿಲ್ಲಾ ಪಂಚಾಯತ್‌ ಸದಸ್ಯ ಕೆ.ಎಸ್‌. ಬಸವಂತಪ್ಪ ಇತರರು ಇದ್ದರು.

ಲಸಿಕೆ ಪಡೆದವರಿಗೆ ನೀರು ಮತ್ತು ಉಪಹಾರದ ವ್ಯವಸೆ ಮಾಡಲಾಗಿತ್ತು. ದುರ್ಗಾಂಬಿಕಾ ದೇವಾಲಯದ ಆವರಣ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಭೋಜನಾಲಯದ ಬಳಿ ಲಸಿಕಾ ಕೇಂದ್ರಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ಭೇಟಿ ನೀಡಿ ಪರಿಶೀಲಿಸಿದರು. ಲಸಿಕೆ ಪಡೆದವರ ಯೋಗಕ್ಷೇಮ ವಿಚಾರಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಮಾಲತೇಶ ರಾವ್‌, ಬಾಬುರಾವ್‌ ಸಾಳಂಕಿ, ಮಂಜುನಾಥ್‌ ಸಾಳಂಕಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌, ಸದಸ್ಯ ವಿನಾಯಕ ಪೈಲ್ವಾನ್‌, ಮಾಜಿ ಸದಸ್ಯ ಪಿ.ಎನ್‌. ಚಂದ್ರಶೇಖರ್‌, ತರಕಾರಿ ಚಂದ್ರಪ್ಪ, ಕುರುಬರಹಟ್ಟಿ ರಾಜು, ಜಿ.ಡಿ. ಕುಮಾರ್‌ ಇತರರು ಇದ್ದರು.

ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಅವರ ಸೂಚನೆ ಮೇರೆಗೆ ದಾವಣಗೆರೆಯ ಬಾಪೂಜಿ ಆಸ್ಪತ್ರೆ ಹಾಗೂ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಸಿಬ್ಬಂದಿ ವರ್ಗದವರು ಜೂನ್‌ 5 ರಿಂದ ನಿರಂತರ ವಾಗಿ ಲಸಿಕಾ ಶಿಬಿರ ನಡೆಸಿಕೊಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next