Advertisement
ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರಪಾಲಿಕೆ ವತಿಯಿಂದ ಸೋಮವಾರ ಮಹಾನಗರಪಾಲಿಕೆ ವರಣದಲ್ಲಿ ಏರ್ಪಡಿಸಲಾಗಿದ್ದ 11ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನ ಮಾಡದೆ ಅಧಿಕಾರಯುತವಾಗಿ ಸೌಲಭ್ಯಗಳನ್ನು ಕೇಳಲು ಅಥವಾ ವ್ಯವಸ್ಥೆಯನ್ನು ಪ್ರಶ್ನಿಸಲು ಆಗದು. ಮತದಾನದಲ್ಲಿ ಪಾಲ್ಗೊಂಡಿದ್ದರೆ ನಾವು ಆರಿಸಿದ ನಾಯಕರಿಂದ ಅಗತ್ಯ ಸವಲತ್ತುಗಳನ್ನು ಕೇಳಬಹುದು. ಆದ್ದರಿಂದ ಎಲ್ಲ ಅರ್ಹ ಮತದಾರರು, ವಿಶೇಷವಾಗಿ ಯುವ ಮತದಾರರು ಮತದಾನವೆಂಬ ಹಬ್ಬದಲ್ಲಿ ನಿರ್ಭೀತವಾಗಿ, ಯಾವುದೇ ಆಮಿಷಕ್ಕೆ ಬಲಿಯಾಗದೇ ತಮ್ಮ ಹಕ್ಕು ಚಲಾಯಿಸಬೇಕು ಎಂದರು.
ಒಂದು ಆರೋಗ್ಯಕರ ಚುನಾವಣೆಗೆ ಬುನಾದ ಆರೋಗ್ಯಯುತವಾದ ಮತದಾರರ ಪಟ್ಟಿ. ಆದ ಕಾರಣ ಮತದಾರರು ಮತದಾನ ಪಟ್ಟಿಗೆ ಸೇರ್ಪಡೆಗೆ ನೀಡುವಷ್ಟೇ ಪ್ರಾಮುಖ್ಯತೆ ಇತರೆ ತಿದ್ದುಪಡಿಗಳಿಗೂ ಮಾನ್ಯತೆ ನೀಡಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಇತ್ತೀಚೆಗೆ ಸುಶಿಕ್ಷಿತರ ಮತದಾನ ಪ್ರಮಾಣ ಕಡಿಮೆ ಆಗುತ್ತಿದ್ದು, ಮತದಾನದ ದಿನವನ್ನು ರಜಾ ದಿನವೆಂದು ಪರಿಗಣಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದರು. ಪ್ರಭಾರ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಜೀವ್ ಎಂ. ಮಾತನಾಡಿ, ಪ್ರಜ್ಞಾವಂತ ಮತದಾರನು ನಿಷ್ಠಾವಂತ ಪ್ರತಿನಿಧಿಯನ್ನು ಆಯ್ಕೆ ಮಾಡಿ ಸುಭದ್ರ ರಾಜ್ಯ, ರಾಷ್ಟ್ರ ನಿರ್ಮಾಣದಲ್ಲಿ ಪಾತ್ರ
ವಹಿಸಬೇಕು ಎಂದರು.
Related Articles
Advertisement
ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಸಾರ್ವನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪರಮೇಶ್ವರಪ್ಪ, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜಪ್ಪ ವೇದಿಕೆಯಲ್ಲಿದ್ದರು. ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು.
ಓದಿ : ಜೇವರ್ಗಿಯಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆ