Advertisement

ಮತದಾನ ನಮ್ಮೆಲ್ಲರ ಹಕ್ಕು-ಕರ್ತವ್ಯ

03:32 PM Jan 26, 2021 | Team Udayavani |

ಮೊಳಕಾಲ್ಮೂರು: ದೇಶದಲ್ಲಿ ಸೂಕ್ತ·ಸರ್ಕಾರವನ್ನು ಅಧಿಕಾರಕ್ಕೆ ತಂದುದೇಶದ ಸಮಗ್ರ ಅಭಿವೃದ್ಧಿಗೊಳಿಸಲುಪ್ರಜಾಪ್ರಭುತ್ವದ ಸಂವಿಧಾನದಡಿಯಲ್ಲಿನೀಡಲಾಗಿರುವ ಮತದಾನದ ಹಕ್ಕುತುಂಬಾ ಪರಿಣಾಮಕಾರಿಯಾಗಿದೆಎಂದು ಜೆ.ಎಂ.ಎಫ್‌.ಸಿನ್ಯಾಯಾಲಯದನ್ಯಾಯಾ ಧೀಶರಾದಎಸ್‌.ನಿರ್ಮಲ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆಕಾಲೇಜಿನಲ್ಲಿ ತಾಲೂಕು ಕಾನೂನುಸೇವಾ ಸಮಿತಿ, ವಕೀಲರ ಸಂಘ,ತಾಲೂಕು ಆಡಳಿತ, ರಾಷ್ಟ್ರೀಯಸೇವಾ ಯೋಜನಾ ಘಟಕ,ಸರ್ಕಾರಿ ಪ್ರಥಮ ದರ್ಜೆ ಕಾಲೇಜುಸಹಯೋಗದೊಂದಿಗೆ ಆಯೋಜಿಸಿದ್ದಮತದಾರರ ದಿನಾಚರಣೆ ನಿಮಿತ್ತಕಾನೂನು ಅರಿವು ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.

ವಕೀಲ ರಾಮಾಂಜಿನೇಯಮಾತನಾಡಿ, ದೇಶದಲ್ಲಿ ಮತದಾನದಹಕ್ಕು ಪ್ರಮುಖವಾಗಿದೆ. ದೇಶದಲ್ಲಿಜನ ಸಾಮಾನ್ಯರಸಮಸ್ಯೆಗಳನ್ನುಬಗೆಹರಿಸುವ ನಾಯಕನನ್ನು ಆಯ್ಕೆಮಾಡುವ ಹಕ್ಕಾಗಿದೆ. ಪ್ರಜಾಪ್ರಭುತ್ವರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕರಸಮಸ್ಯೆಗಳನ್ನು ನಿವಾರಿಸಲುಒಬ್ಬ ನಾಯಕನನ್ನು ಮತದಾನದಮೂಲಕ ಆಯ್ಕೆ ಮಾಡುವುದೇಮತದಾನದ ಹಕ್ಕಾಗಿದೆ. ಮತದಾನದಜಾಗೃತಿಯಿಲ್ಲದವರಿಗೆ ಜಾಗೃತಿಮೂಡಿಸಿ ಜವಾಬ್ದಾರಿ ಮೂಡಿ ಸುವಧ್ಯೇಯೋದ್ದೇಶವಾಗಿದೆ. ದೇಶದಲ್ಲಿ
18 ವರ್ಷ ತುಂಬಿದ ಯಾವುದೇತಾರತಮ್ಯವಿಲ್ಲದೆ ನೋಂದಾಯಿತರುಮತದಾನ ಮಾಡಬಹುದಾಗಿದೆ
ಎಂದರು.

ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿ ಸಲಾಯಿತು. ಅರ್ಹ ಫಲಾನು ಭವಿಗಳಿಗೆ ಮತದಾನದ ಗುರುತಿನಚೀಟಿ ವಿತರಿಸಲಾಯಿತು. ಪಾಪಯ್ಯ,ಡಿ.ಸೂರಯ್ಯ, ಹಸೀನಾ ಬಾನು,ವೀಣಾ, ಎಂ.ಎನ್‌.ವಿಜಯಲಕ್ಷ್ಮಿ,ಅನಸೂಯ, ಶ್ರುತಿ, ಚಂದ್ರು, ಶಿವಣ್ಣ,ಡಾ.ಎಸ್‌.ಕೆ.ಯೋಗಾನಂದ, ತಿಮ್ಮಣ್ಣ,ರಾಜೇಶ್ವರಿ, ಸುಷ್ಮ, ಎಲ್‌.ರಾಘವೇಂದ್ರ,ನಾಗರಾಜ್‌ ಹಾಗೂ ವಿದ್ಯಾರ್ಥಿಗಳುಭಾಗವಹಿಸಿದ್ದರು.
ಪಪಂ ಕಚೇರಿ: ಪಟ್ಟಣದ ಪಪಂಕಾರ್ಯಾಲಯದಲ್ಲಿ ಮತದಾರರದಿನಾಚರಣೆ ಅಂಗವಾಗಿ ತಾಲೂಕಸಮಾಜ ಕಲ್ಯಾಣ ಇಲಾಖೆ ವತಿಯಿಂದಡಾ.ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ
ವಿತರಿಸಲಾಯಿತು. –

ಟ್ಟಣದ ತಾಲೂಕುಮಟ್ಟದ ಎಲ್ಲಾ ಇಲಾಖೆಗಳಿಗೂನೀಡಲಾಗುವುದೆಂದು ತಾಲೂಕುಸಮಾಜ ಕಲ್ಯಾಣಾ ಧಿಕಾರಿ ಪ್ರೇಮನಾಥತಿಳಿಸಿದ್ದಾರೆ. ಈ ಸಂದರ್ಭದಲ್ಲಿಪ.ಪಂ ಅಧ್ಯಕ್ಷ ಪಿ.ಲಕ್ಷ್ಮಣ, ಸದಸ್ಯಮಂಜಣ್ಣ, ಮುಖ್ಯಾ ಧಿಕಾರಿ ಪಿ.ಬಸಣ್ಣ,ಫಜಲೂರೆಹಮಾನ್‌, ಪವನ್‌ಕುಮಾರ್‌, ತಿಪ್ಪೇಸ್ವಾಮಿ, ಪಿ.ಆರ್‌.ಸಿದ್ದಣ್ಣ, ರಮೇಶ್‌ ಮೊದಲಾದವರುಭಾಗವಹಿಸಿದ್ದರು.

Advertisement

ಓದಿ : ಸಮಾವೇಶದಲ್ಲಿ ವಚನಾನಂದ ಶ್ರೀ ಭಾಗವಹಿಸಲ್ಲ

Advertisement

Udayavani is now on Telegram. Click here to join our channel and stay updated with the latest news.

Next