ಹೊಳಲ್ಕೆರೆ: ಸಂವಿಧಾನ ಕಲ್ಪಿಸಿರುವ ಶ್ರೇಷ್ಠ ಹಕ್ಕುಗಳಲ್ಲಿ ಮತದಾನದ ಅರಿವು ಕೂಡ ನಮ್ಮೆಲ್ಲರ ಹಕ್ಕಾಗಿದ್ದು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಕುರಿತ ಜಾಗೃತಿ ಬೇಕು ಎಂದು ಮಲ್ಲಾಡಿಹಳ್ಳಿ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಉಪಪ್ರಾಚಾರ್ಯ ಆರ್.ಬಿ.ಹಾರೋಮಠ
ತಿಳಿಸಿದರು.
ಮತದಾನ ಜಾಗೃತಿ ದಿನದ ನಿಮಿತ್ತ ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿ, ದೇಶದ ಮತದಾನದ ಪ್ರಮಾಣದಲ್ಲಿ ಗಣನೀಯ ಬದಲಾವಣೆ ಕಂಡಿದ್ದು, ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯ ಸೂಚಿಸಲು ಚುನಾವಣೆ ಒಂದು ವೇದಿಕೆಯಾಗಿದೆ. ನಾವೆಲ್ಲರೂ ಸಂವಿಧಾನದಲ್ಲಿ ಇರುವ ಮತದಾನದ ಬಗ್ಗೆ ಶಿಕ್ಷಣ ಪಡೆದುಕೊಂಡು ಜಾಗೃತರಾಗಬೇಕು ಎಂದು ಹೇಳಿದರು.
ಹಿರಿಯ ಶಿಕ್ಷಕ ಜಿ.ಟಿ.ಶಂಕರಮೂರ್ತಿ, ಪ್ರಮಾಣ ವಚನ ಬೋಧಿಸಿ ಮಾತನಾಡಿ, ಮತದಾನದಿಂದ ದೇಶದ ಭವಿಷ್ಯವೇ ನಿರ್ಮಾಣವಾಗುವುದರಿಂದ ಮತ ಚಲಾವಣೆಯು ಸಹ ದೇಶದ ಹಲವಾರು ವಿಚಾರಗಳಲ್ಲಿ ಸಾಕಷ್ಟು ಬದಲಾವಣೆ ತರಲಿದೆ. ನಾವುಗಳೆಲ್ಲರೂ ಯೋಚಿಸಿ ಮತದಾನ ಮಾಡಬೇಕು ಎಂದರು.
ಅನಾಥ ಸೇವಾಶ್ರಮದ ಇತರೆ ಸಂಸ್ಥೆಗಳಾದ ರಾಘವೇಂದ್ರ ಐ.ಟಿ.ಐ, ರಾಘವೇಂದ್ರ ವಿಜ್ಞಾನ ಪಪೂ ಕಾಲೇಜು, ಅ.ಸೇ.ಪಪೂ ಕಾಲೇಜು, ರಾಘವೇಂದ್ರ ಗುರುಕುಲ ವಿದ್ಯಾಪೀಠದಲ್ಲಿ ಪ್ರಮಾಣ ವಚನ ಬೋ ಧಿಸುವುದರ ಮೂಲಕ ಜಾಗೃತಿ ಮೂಡಿಸಲಾಯಿತು.
ಓದಿ : ಹವ್ಯಾಸಕ್ಕೆ ಅನುಗುಣವಾಗಿ ಖಾತೆ ಹಂಚಿಕೆ ಮಾಡಲಾಗಿದೆ: ಡಿಸಿಎಂ ಲಕ್ಷ್ಮಣ ಸವದಿ