Advertisement

ಹಿರಿಯೂರಿನಲ್ಲಿ ಪಾದಯಾತ್ರೆಗೆ ಭವ್ಯ ಸ್ವಾಗತ

03:07 PM Jan 26, 2021 | Team Udayavani |

ಹಿರಿಯೂರು: ಕುರುಬ ಜನಾಂಗಕ್ಕೆ ಎಸ್‌ಟಿ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಸರ್ಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಕಾಗಿನೆಲೆಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಆರಂಭಿಸಿರುವ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಇತರೆ ಸ್ವಾಮೀಜಿಗಳು ನಡೆಸುತ್ತಿರುವ ಪಾದಯಾತ್ರೆ ಐಮಂಗಲದಿಂದ ನಗರಕ್ಕೆ ಸೋಮವಾರ ಸಂಜೆ ಆಗಮಿಸಿತು. ತಾಲೂಕಿನ ಕುರುಬ ಸಮಾಜದ ಮುಖಂಡರು ಸಮಾಜದ ಬಂಧುಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಪಾದಯಾತ್ರೆ ಸ್ವಾಗತಿಸಿದರು.

Advertisement

ಭಾನುವಾರ ಚಿತ್ರದುರ್ಗದಿಂದ ಹೊರಟು ತಾಲೂಕಿನ ಐಮಂಗಲ ಗ್ರಾಮದಲ್ಲಿ ವಾಸ್ತವ್ಯ ಮಾಡಿ ಸೋಮವಾರ ಬೆಳಗ್ಗೆ ಐಮಂಗಲದಿಂದ
ಹಿರಿಯೂರಿಗೆ ಸಂಜೆ 5.30 ಆಗಮಿಸಿತು. ನಗರದ ಹುಳಿಯಾರ್‌ ರಸ್ತೆಯ ಯಜ್ಞವಲ್ಕ  ಶಾಲೆಯಲ್ಲಿ ಪಾದಯಾತ್ರಿಗಳಿಗೆ ವಸತಿ ಊಟ ಕಲ್ಪಿಸಿದ್ದು, ತಾಲೂಕಿನ ಎಲ್ಲ ಕುರುಬ ಸಮುದಾಯದವರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ ಬಾಬು, ತಾಲೂಕು ಕುರುಬ ಸಂಘದ ಅಧ್ಯಕ್ಷ ಮಹಂತೇಶ್‌, ಯಜ್ಞವಲ್ಕ ವಿದ್ಯಾಸಂಸ್ಥೆಯ
ಮುಖ್ಯಸ್ಥರಾದ ಸುರೇಶ್‌, ಗಿರಿಜಪ್ಪ, ಇಂಜಿನಿಯರ್‌ ಮಂಜಣ್ಣ, ವಕೀಲರಾದ ಕುಮಾರ್‌ ಗೌಡ, ಜೈರಾಂ, ಕಂದಿಕೆರೆ ಸುರೇಶ್‌ ಬಾಬು, ಗುತ್ತಿಗೆದಾರ ಎಚ್‌. ವೆಂಕಟೇಶ್‌, ನಗರಸಭೆ ಮಾಜಿ ಅಧ್ಯಕ್ಷೆ ಮಂಜುಳಾ ವೆಂಕಟೇಶ್‌, ಸಂಘದ ಪದಾಧಿ ಕಾರಿಗಳು ಸ್ವಾಗತಿಸಿದರು. ಪಾದಯಾತ್ರೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ರಾತ್ರಿ 6 ಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ವ್ಯಸ್ಥಾಪಕರು ತಿಳಿಸಿದ್ದಾರೆ.

ಓದಿ : ದೇರಳಕಟ್ಟೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ್ದ ಇಬ್ಬರ ಬಂಧನ!

Advertisement

Udayavani is now on Telegram. Click here to join our channel and stay updated with the latest news.

Next