Advertisement

ಹೊನ್ನಾಳಿ: ಬ್ಯಾಂಕ್‌ಗಳ ಮುಂದೆ ಕ್ಯೂ

09:39 PM May 05, 2021 | Team Udayavani |

ಹೊನ್ನಾಳಿ: ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಸರ್ಕಾರ ರಾಜ್ಯಾದ್ಯಂತ ಜಾರಿಗೊಳಿಸಿರುವ ಜನತಾ ಕರ್ಫ್ಯೂ ಮಂಗಳವಾರ ಏಳು ದಿನ ಪೂರೈಸಿತು. ಇದುವರೆಗೂ ವ್ಯಾಪಾರ ವಹಿವಾಟಿಗೆ ಬೆಳಿಗ್ಗೆ 6 ರಿಂದ 10ರವರೆಗೆ ಇದ್ದ ಸಮಯವನ್ನು ವಿಸ್ತರಿಸಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಿಗದಿ ಮಾಡಲಾಗಿದೆ. ತರಕಾರಿ ವ್ಯಾಪಾರಿಗಳು ಮಾತ್ರ ಮಾರುಕಟ್ಟೆಯಲ್ಲಿ ಮಾರಾಟ ಮಾಡದೆ ರೈತರಿಂದ ತರಕಾರಿ ಖರೀದಿಸಿ ತಳ್ಳು ಗಾಡಿಯಲ್ಲಿ ಮಾರಾಟ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ತಹಶೀಲ್ದಾರ್‌ ಬಸನಗೌಡ ಕೋಟೂರ ತಿಳಿಸಿದ್ದಾರೆ.

Advertisement

ಬ್ಯಾಂಕ್‌ಗಳ ಮುಂದೆ ದೊಡ್ಡ ಕ್ಯೂ: ಪಟ್ಟಣದ ಎಲ್ಲಾ ಬ್ಯಾಂಕ್‌ಗಳ ಮುಂಭಾಗದಲ್ಲಿ ಜನರ ದೊಡ್ಡ ಸರತಿ ಸಾಲು ಮಂಗಳವಾರ ಕಂಡು ಬಂತು. ನ್ಯಾಮತಿ ರಸ್ತೆಯಲ್ಲಿರುವ ಎಸ್‌ಬಿಐ 1 ಮತ್ತು 2, ಕರ್ನಾಟಕ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಪ್ರಗತಿ ಗ್ರಾಮೀಣ ಬ್ಯಾಕ್‌ಗಳ ಮುಂದೆ ಗ್ರಾಹಕರು ತಮ್ಮ ವಹಿವಾಟು ನಡೆಸಲು ಹೋಗಲು ಸರತಿ ಸಾಲಿನಲ್ಲಿ ನಿಂತಿದ್ದರು. ಜನತಾ ಕಫೂನಿಂದಾಗಿ ಬ್ಯಾಂಕ್‌ ಗಳ ಕಾರ್ಯ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಜನರಿಂದ ದೊಡ್ಡ ಸರತಿ ಸಾಲು ನಿರ್ಮಾಣವಾಗಿತ್ತು. ಬೆಳಿಗ್ಗೆ 7:30 ರಿಂದಲೇ ಪ್ರಾರಂಭವಾಗುವ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಲು ಬಂದಂತಹ ಜನರು ಬಿಸಿಲಿನ ತಾಪಕ್ಕೆ ಬಸವಳಿಯುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next