Advertisement

ವಾರಿಯರ್ಸ್ ಆರೋಗ್ಯಕ್ಕೆ ಒತ್ತು ನೀಡಿ

07:11 PM Apr 27, 2021 | Team Udayavani |

ಜಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ, ಅರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತರು ಮೊದಲು ತಮ್ಮ ಆರೋಗ್ಯಕ್ಕೆ ಒತ್ತು ನೀಡಿದರೆ ನೀವು ಆರೋಗ್ಯವಾಗಿದ್ದಾರೆ ಇತರರು ಆರೋಗ್ಯ ಕಾಪಾಡಲು ಸಾಧ್ಯವಾಗಲಿದೆ ಎಂದು ತಾಪಂ ಇಒ ಮಲ್ಲಾನಾಯ್ಕ ಹೇಳಿದರು.

Advertisement

ತಾಲೂಕಿನ ತೊರಣಗಟ್ಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಚೌಡಮ್ಮ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಮಟ್ಟದ ಟಾಸ್ಕ್ಫೋರ್ಸ್‌ ಕಮಿಟಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್‌ ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಶವ ಸಂಸ್ಕಾರ ಮಾಡಲು ಸಹ ಸ್ಥಳ ದೊರೆಯದಂತ ಸ್ಥಿತಿ ನಿರ್ಮಾಣವಾಗಿದೆ.

ಇಂತಹ ಸ್ಥಿತಿ ಗ್ರಾಮಗಳಿಗೆ ಬರದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರು ಕೋವಿಡ್‌ ನಿಯಮ ಪಾಲಿಸಬೇಕು. ಹಬ್ಬ ಆಚರಣೆಗಳನ್ನು ಸ್ವಲ್ಪದಿನ ಮುಂದೂಡಿ ಬೇರೆ ಊರಿನಿಂದ ಬಂದವರಿಗೆ ಸೋಂಕು ಇದ್ದರೆ ಅವರಿಂದ ನಿಮಗೆ ಹರಡುತ್ತದೆ. ಇದರಿಂದ ಇಡೀ ಗ್ರಾಮಕ್ಕೆ ಸೋಂಕು ಹರಡಲಿದೆ ಎಂದರು.

ಗ್ರಾಮೀಣ ಮಟ್ಟದಲ್ಲಿ ರಚಿಸಿರುವ ಕಮಿಟಿಯವರು ನಮ್ಮ ಊರಿಗೆ ಕೊರೊನಾ ಬರುವುದೇ ಬೇಡ ಎಂಬ ಶಪತಮಾಡಿ ಹಗಲಿರುಳು ಶ್ರಮಿಸಬೇಕು. ಗ್ರಾಮಗಳಲ್ಲಿರುವ ಚರಂಡಿಗಳನ್ನು ಶುಚಿಗೊಳಿಸಬೇಕು. ಮುಂಜಾಗ್ರತಾ ಕ್ರಮ ಅನುಸರಿಸಬೇಕು ಹೇಳಿದರು.

ಪಿಡಿಒ ಮರುಳು ಸಿದ್ದಪ್ಪ ಮಾತನಾಡಿ, ಕೊರೊನಾ ನಿಯಂತ್ರಣಕ್ಕೆ ತರಲು ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದ್ದು, ಸಮಿತಿಯವರ ಜತೆಗೆ ಪ್ರತಿಯೊಬ್ಬರ ಸಹಕಾರ ಅತೀ ಮುಖ್ಯವಾಗಿದ್ದು, ಜಾಗೃತಿ ಮೂಡಿಸುವ ಜವಾಬ್ದಾರಿಯಾಗಿದೆ ಎಂದರು.

Advertisement

ಗ್ರಾಪಂ ವ್ಯಾಪ್ತಿಯಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಲ್ಲೇದೆವರಪುರ ಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾ ಧಿಕಾರಿ ಡಾ.ಉಮೇಶ್‌ ಮಾತನಾಡಿ, ಎರಡನೇ ಅಲೆ ಸ್ಫೋಟಗೊಳ್ಳುತ್ತಿದ್ದು, ಸಾವಿನ ಸಂಖ್ಯೆಯಲ್ಲಿ ಹೆಚ್ಚಾಳವಾಗುತ್ತಿದೆ. ಹಾಗಾಗಿ ಸೋಂಕಿತರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ಗಳನ್ನು ಪಟ್ಟಿ ಮಾಡಿ ಅವರನ್ನು ಕೋವಿಡ್‌ ಪರಿಕ್ಷೇಗೆ ಒಳಪಡಿಸಬೇಕಾಗಿದೆ. ಶೇ.70 ರಷ್ಟು ಸೋಂಕಿನ ಲಕ್ಷಣಗಳಿಲ್ಲದಿದ್ದರು ಸಹ ಸೋಂಕು ತಗಲಿರುತ್ತದೆ. ಹಾಗಾಗಿ ಪ್ರತಿಯೊಬ್ಬರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ಎ.ಡಿ.ಶಿವಕುಮಾರ್‌, ಗ್ರಾಪಂ ಅಧ್ಯಕ್ಷೆ ಚೌಡಮ್ಮ, ಕಾರ್ಯದರ್ಶಿ ಸತೀಶ್‌, ಗ್ರಂಥಪಾಲಕ ಬಾಲಕೃಷ್ಣ, ಸ್ವಯಂ ಸೇವಕ ಬಡಪ್ಪ, ಗ್ರಾಪಂ ಸದಸ್ಯರು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next