Advertisement

ಅನುದಾನ ಸಮರ್ಪಕ ಬಳಕೆಯಾಗಲಿ

05:49 PM Apr 25, 2021 | Team Udayavani |

ದಾವಣಗೆರೆ: ಕೋವಿಡ್‌ ನಿರ್ವಹಣೆಗಾಗಿ ಸರ್ಕಾರದಿಂದ ಬಂದಿರುವ ಅನುದಾನವನ್ನು ಜಿಲ್ಲಾಡಳಿತ ಕೋವಿಡ್‌ ರೋಗಿಗಳು ಹಾಗೂ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳ ಸಹಾಯಕ್ಕೆ ಬಳಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಆಗ್ರಹಿಸಿದರು.

Advertisement

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಂತೆ ಕೊರೊನಾ ನಿರ್ವಹಣೆ ಅನುದಾನವನ್ನು ವೈದ್ಯಕೀಯ ಮೂಲ ಸೌಲಭ್ಯಕ್ಕಾಗಿ ಬಳಸುವ ಅನಿವಾರ್ಯತೆ ಈ ವರ್ಷ ಇಲ್ಲ. ಪ್ರಸ್ತುತ ಸಕಲ ವೈದ್ಯಕೀಯ ಸೌಲಭ್ಯಗಳಿದ್ದು ಬಂದಂಥ ಅನುದಾನವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಕೊರೊನಾ ಸೋಂಕಿತ ಬಡವರ ಬಿಲ್‌ ಪಾವತಿಗೆ, ಕೋವಿಡ್‌ನಿಂದ ಮೃತಪಟ್ಟ ಬಡ ಕುಟುಂಬದವರಿಗೆ ಪರಿಹಾರಕ್ಕೆ ಬಳಸಬೇಕು ಎಂದರು.

ಕೊರೊನಾದಿಂದ ಮೃತಪಟ್ಟವರ ದೇಹ ಸಾಗಿಸಲು ಖಾಸಗಿ ಆಂಬ್ಯುಲೆನ್ಸ್‌ನವರು 12 ರಿಂದ 13 ಸಾವಿರ ರೂ. ಹಾಗೂ ಒಂದು ಪಿಪಿಇ ಕಿಟ್‌ಗೆ ಎರಡು ಸಾವಿರ ರೂ. ಪಡೆಯುತ್ತಿದ್ದಾರೆ. ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಜಿಲ್ಲಾಡಳಿತ ಕೋವಿಡ್‌ನಿಂದ ಮೃತಪಟ್ಟವರ ಶವಗಳನ್ನು ಉಚಿತವಾಗಿ ಸಾಗಿಸಲು ಅಂಬ್ಯುಲೆನ್ಸ್‌ ವ್ಯವಸ್ಥೆ ಮಾಡಬೇಕು. ಅಂತ್ಯಕ್ರಿಯೆಯಲ್ಲಿ ಭಾಗವಹಿಸುವವರಿಗೆ ಐದು ಉಚಿತ ಪಿಪಿಇ ಕಿಟ್‌ ವಿತರಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು. ಕಾಂಗ್ರೆಸ್‌ ಮುಖಂಡ ಗೋವಿಂದ್‌ ಹಾಲೇಕಲ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next