Advertisement

ಪ್ರತ್ಯೇಕ ಅನುದಾನ ಮೀಸಲಿಡಲು ಮನವಿ

04:49 PM Jan 25, 2021 | Team Udayavani |

ಬಳ್ಳಾರಿ: ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಗಮನ ಸಳೆಯಲಾಗುವುದು ಎಂದು ಶಾಸಕ ಜಿ. ಸೋಮಶೇಖರ ರೆಡ್ಡಿ ಭರವಸೆ ನೀಡಿದರು.
ನಗರ ಹೊರವಲಯದಲ್ಲಿ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್‌ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕಲ್ಯಾಣ ಕರ್ನಾಟಕದ ಜಿಲ್ಲೆಗಳು ನಂಜುಂಡಪ್ಪ ವರದಿ ಪ್ರಕಾರ ಬಹಳ ಹಿಂದುಳಿದಿವೆ. ಈ ಭಾಗಕ್ಕೆ ಪ್ರತಿವರ್ಷ ಹೆಚ್ಚಿನ ಅನುದಾನ ನೀಡಿದರೂ, ಇನ್ನೂ ಪ್ರಾದೇಶಿಕ ಅಸಮಾನತೆ ಕಡಿಮೆಯಾಗಿಲ್ಲ. ಹಾಗಾಗಿ ಈ ಭಾಗಕ್ಕೆ ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಪ್ರತ್ಯೇಕ ಅನುದಾನ ಮೀಸಲಿಡುವ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಂದಿನ ವಿಧಾನಸಭೆ ಅಧಿ ವೇಶನದಲ್ಲಿ ಗಮನ
ಸೆಳೆಯಲಾಗುವುದು ಎಂದವರು ತಿಳಿಸಿದರು.

ಕಲ್ಯಾಣ ಕರ್ನಾಟಕದ ಭಾಗದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಈ ಪೈಕಿ 50 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ
ಶಿಕ್ಷಣ ನೀಡುವಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾತ್ರ ಅಪಾರವಾಗಿದೆ. ಕೋವಿಡ್‌ ಸಮಯಲ್ಲಿ ಖಾಸಗಿ ಶಾಲೆಗಳನ್ನು ನಿರ್ವಹಿಸುವುದು ತುಂಬಾ ಕಷ್ಟವಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಪ್ರತಿ ಹೋರಾಟದ ಹಿಂದೆ ನಾನು ಇರಲಿದ್ದೇನೆ. ಶಿಕ್ಷಣಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾಕಷ್ಟು ಕೊಡುಗೆ ನೀಡುತ್ತಿರುವುದನ್ನು ನಾನು ಅರಿತಿದ್ದೇನೆ. ನಿಮ್ಮ ಹೋರಾಟದ ಪ್ರತೀ ಹಂತದಲ್ಲೂ ನಾನು ನಿಮ್ಮ ಜೊತೆಗೆ ಇರಲಿದ್ದೇನೆ. ವಿಧಾನ ಸಭೆಯ ಒಳಗೆ, ಹೊರಗೆ ಹೋರಾಟ ಮಾಡುವೆ ಎಂದು ಅವರು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಕಲ್ಯಾಣ ಸ್ವಾಮಿ, ನಿಮ್ಮ ಪ್ರತಿ ಹೋರಾಟದ ಹಿಂದೆ ನಾನು ಇದ್ದೇನೆ. ನಿಮ್ಮ ನ್ಯಾಯಯುತ ಹೋರಾಟ ಸಫಲ ಆಗಲಿ. ಸಾಂಕ್ರಾಮಿಕ ಕಾಯಿಲೆ ಕಾಲದಲ್ಲಿ ತಾವು ಸಾಕಷ್ಟು ಕಷ್ಟ ಪಟ್ಟಿದ್ದೀರಿ. ನಿಮ್ಮನ್ನು ಯಾವುದೇ ಸರ್ಕಾರ ಪರಿಗಣಿಸಿಲ್ಲ. ಇದಕ್ಕೆ ನನಗೂ ಬೇಸರ ಇದೆ ಎಂದರು.

ಕಾರ್ಯಕ್ರಮದಲ್ಲಿ ಒಕ್ಕೂಟದ ಕಲ್ಯಾಣ ಕರ್ನಾಟಕ ಅಧ್ಯಕ್ಷ ರಾಘವೇಂದ್ರ ಪಾನಘಂಟಿ, ಉತ್ತರ ಕರ್ನಾಟಕ ಸಂಚಾಲಕ ಪ್ರಹ್ಲಾದ್‌ ಆಗಳಿ, ಬಳ್ಳಾರಿ ಜಿಲ್ಲಾಧ್ಯಕ್ಷ ಮರಿಸ್ವಾಮಿ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರ್‌ ಶೇಖರ್‌, ಬುಡಾ ಮಾಜಿ ಅಧ್ಯಕ್ಷ ಪ್ರತಾಪ್‌ ರೆಡ್ಡಿ, ಗಿರೀಶ್‌ ಕಣವಿ, ಧನಂಜಯ್‌ ರೆಡ್ಡಿ, ಕೆಕೆ ಭಾಗದ ಆರು ಜಿಲ್ಲೆಗಳ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು, ಪದಾಧಿ ಾರಿಗಳು ಇದ್ದರು.

Advertisement

ಓದಿ: ಶೋಷಿತರಿಗೆ ಪ್ರಾಧಿಕಾರದಿಂದ ಕಾನೂನು ನೆರವು: ಹೊಸಮನಿ

Advertisement

Udayavani is now on Telegram. Click here to join our channel and stay updated with the latest news.

Next