Advertisement

ಸರ್ಕಾರದ ಮಾರ್ಗಸೂಚಿ ಪಾಲಿಸಿ: ವಾಗೀಶ್‌ ಸ್ವಾಮಿ

04:16 PM Apr 22, 2021 | Team Udayavani |

ಮಲೇಬೆನ್ನೂರು: ರೂಪಾಂತರಗೊಂಡ ಕೊರೊನಾ ವೈರಸ್‌ನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಎಲ್ಲರೂ ಅನುಸರಿಸಬೇಕು ಎಂದು ಜಿಪಂ ಸದಸ್ಯ ವಾಗೀಶ್‌ಸ್ವಾಮಿ ಮನವಿ ಮಾಡಿದರು.

Advertisement

ಪುರಸಭೆ ಆವರಣದಲ್ಲಿ ಕೊರೊನಾ ಜಾಗೃತಿ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾರ್ವಜನಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದರು. ಅಂಗಡಿಗಳಿಗೆ ಮಾಸ್ಕ್ ಧರಿಸದೇ ಬರುವ ಗ್ರಾಹಕರಿಗೆ ಮಾಸ್ಕ್ ನೀಡಿ ಬಿಲ್‌ನಲ್ಲಿ ಸೇರಿಸಿ. ಸಾರ್ವಜನಿಕ ಸ್ಥಳದಲ್ಲಿ, ಜನಸಂದಣಿ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ದೊರೆಯಲಿದೆ. ಎಲ್ಲರ ಸಹಕಾರದಿಂದ ಕೊರೊನಾ ಮುಕ್ತ ಮಲೇಬೆನ್ನೂರು ಮಾಡೋಣ ಎಂದರು.

ಪುರಸಭೆ ಅಧ್ಯಕ್ಷೆ ಶ್ರೀಮತಿ ಎಸ್‌., ಉಪಾಧ್ಯಕ್ಷೆ ಡಿ.ಕೆ. ಅಂಜಿನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ, ಮುಖ್ಯಾ ಧಿಕಾರಿ ದಿನಕರ್‌ ಭಿತ್ತಿಪತ್ರವನ್ನು ಮಾಡಿಸಿದ್ದಾರೆ. ಅವುಗಳನ್ನು ಪಟ್ಟಣದ ಹೊಟೇಲ್‌, ರಿಕರ ಅಂಗಡಿಗಳು, ಹೆಚ್ಚು ಜನಸಂದಣಿ ಇರುವ ಜಾಗಗಳಲ್ಲಿ ಅಂಟಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಎಸ್‌., ಉಪಾಧ್ಯಕ್ಷೆ ಡಿ.ಕೆ. ಅಂಜಿನಮ್ಮ, ಸದಸ್ಯರುಗಳಾದ ಬಿ. ಸುರೇಶ್‌, ಮಹಾಂತೇಶಸ್ವಾಮಿ, ಮಾಸಣಗಿ ಶೇಖಪ್ಪ, ನಾಮನಿರ್ದೇಶನ ಸದಸ್ಯರಾದ ಪೂಜಾರ್‌ ರಾಜು, ಮಂಜಣ್ಣ, ಲೋಕೇಶ್‌, ಆಶ್ರಯ ಸಮಿತಿ ಸದಸ್ಯ ಚಂದ್ರು, ಆರೋಗ್ಯ ಸಮಿತಿ ಸದಸ್ಯ ಎಸ್‌. ರಂಗನಾಥ್‌, ವಿಜಯ್‌ಕುಮಾರ್‌, ಶೇಖರಪ್ಪ, ನಾಗರಾಜ್‌ ಪಾಳೇಗಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next