Advertisement

ಹೊನ್ನಾಳಿ ಖಾಸಗಿ ಬಸ್‌ ನಿಲ್ದಾಣದಲ್ಲಿ ಜನವೋ ಜನ

03:17 PM Apr 20, 2021 | Team Udayavani |

ಹೊನ್ನಾಳಿ: ಪಟ್ಟಣದಲ್ಲಿ ಕೊರೊನಾ ಬಗ್ಗೆ ಸ್ವಲ್ಪವೂ ಎಚ್ಚರಿಕೆ ಇಲ್ಲದೆ ಜನರು ತಮ್ಮ ಪಾಡಿಗೆ ತಾವು ಓಡಾಡುವುದು, ಗುಂಪು ಸೇರುವುದು ನಿರಾತಂಕವಾಗಿ ಹಾಗೂ ರಾಜಾರೋಷವಾಗಿ ಓಡಾಡುವುದು ನಡೆದಿದೆ. ಸರ್ಕಾರ, ತಜ್ಞ ವೈದ್ಯರುಗಳು ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ ಕೊರೊನಾದಿಂದ ಬಹಳ ಎಚ್ಚರದಿಂದ ಇರಬೇಕು ಎಂದು ಹೇಳುತ್ತಲೇ ಇದ್ದಾರೆ.

Advertisement

ಆದರೆ ಇದರ ಪರಿವೇ ಇಲ್ಲದಂತೆ ಜನರು ವರ್ತಿಸುತ್ತಿರುವುದಕ್ಕೆ ಸೋಮವಾರ ಪಟ್ಟಣದ ಖಾಸಗಿ ಬಸ್‌ನಿಲ್ದಾಣದಲ್ಲಿ ಕಂಡು ಬಂದ ಜನ ದಟ್ಟಣೆಯೇ ಸಾಕ್ಷಿ. ಪಟ್ಟಣಕ್ಕೆ ಆಗಮಿಸಿದ ಜನರು ಹಾಗೂ ಪಟ್ಟಣದಿಂದ ಇತರ ಊರುಗಳಿಗೆ ತೆರಳುವ ಜನರಲ್ಲಿ ಬೆರಳೆಣಿಕೆ ಜನರು ಮಾತ್ರ ಮಾಸ್ಕ್ ಧರಿಸಿದ್ದರು.

ಸಾಮಾಜಿಕ ಆಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ಮಾತನಾಡುತ್ತಿದ್ದರು. ಕೊರೊನಾ ದೂರ ಇಡಲು ಜನರ ಮಧ್ಯೆ ಕನಿಷ್ಠ 6 ಅಡಿ ಅಂತರ ಇರಬೇಕು. ಆದರೆ ಖಾಸಗಿ ಬಸ್‌ನಿಲ್ದಾಣದಲ್ಲಿ ಜನರ ಅಂತರ ಒಂದು ಅಡಿಯೂ ಇರಲಿಲ್ಲ. ಅ ಧಿಕಾರಿಗಳು ಇಂತಹ ಸ್ಥಳಕ್ಕೆ ಬಂದು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮಾಹಿತಿ ನೀಡಿ ಗುಂಪಾಗಿದ್ದ ಜನರನ್ನು ಚದುರಿಸಬಹುದಿತ್ತು. ಆದರೆ ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಿದಂತೆ ಕಾಣಲಿಲ್ಲ

Advertisement

Udayavani is now on Telegram. Click here to join our channel and stay updated with the latest news.

Next