Advertisement

ಯಲವಟ್ಟಿಯಲ್ಲಿ ತಹಶೀಲ್ದಾರ್‌ ಗ್ರಾಮ ವಾಸ್ತವ್ಯ

05:41 PM Apr 13, 2021 | Team Udayavani |

ಮಲೇಬೆನ್ನೂರು: ಹರಿಹರ ತಹಶೀಲ್ದಾರ್‌ ನೇತೃತ್ವದಲ್ಲಿ ಜಿಗಳಿ ಪಿರ್ಕ ವ್ಯಾಪ್ತಿಯ ಯಲವಟ್ಟಿಯಲ್ಲಿ ಗ್ರಾಮ ವಾಸ್ತವ್ಯ ಹಮ್ಮಿಕೊಳ್ಳಲಾಗಿದೆ ಎಂದು ಉಪ ತಹಶೀಲ್ದಾರ್‌ ಆರ್‌. ರವಿ ತಿಳಿಸಿದರು.

Advertisement

ಯಲವಟ್ಟಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಚರ್ಚಿಸಿ ಅವರು ಮಾತನಾಡಿದರು. ಗ್ರಾಮ ವಾಸ್ತವ್ಯಕ್ಕೆ ಎಲ್ಲಾ ಇಲಾಖೆ ಅ ಧಿಕಾರಿಗಳು ಬಂದಿರುತ್ತಾರೆ. ಗ್ರಾಮದಲ್ಲಿ ಏನೇ ಸಮಸ್ಯೆಗಳಿದ್ದಲ್ಲಿ, ಸಾಮಾಜಿಕ ಭದ್ರತಾ ಸೌಲಭ್ಯಗಳ ಕುರಿತು, ವಿದ್ಯುತ್‌, ನೀರು, ರಸ್ತೆ, ಚರಂಡಿ ಸಮಸ್ಯೆಗಳಿದ್ದಲ್ಲಿ ಲಿಖತವಾಗಿ ಅರ್ಜಿ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.

ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಲೆಕ್ಕಾಧಿ ಕಾರಿ ಸುಭಾನಿ, ಗ್ರಾಪಂ ಅಧ್ಯಕ್ಷ ಬಾವಿಕಟ್ಟೆ ಮಲ್ಲಿಕಾರ್ಜುನಪ್ಪ, ಉಪಾಧ್ಯಕ್ಷ ಈರಣ್ಣ ನಾಯ್ಕ, ಸದಸ್ಯರಾದ ಬಿ. ಸಿದ್ದೇಶ್‌, ಚನ್ನಪ್ಪ ಗೌಡ, ಪಿಡಿಒ ರಾಮನಗೌಡ, ಕಾರ್ಯದರ್ಶಿ ದೀಪಾ, ಗ್ರಾಮ ಸಹಾಯಕ ರಂಗನಾಥ್‌, ಪವನ್‌ ಕುಮಾರ್‌ ದೇಶಪಾಂಡೆ, ಮಂಜ ನಾಯ್ಕ, ಮುಖಂಡರಾದ ನರಸಪ್ಪ, ಚನ್ನಬಸಪ್ಪ ಗೌಡ, ಮಹೇಂದ್ರಪ್ಪ, ರಾಮಚಂದ್ರಪ್ಪ, ರಾಜು, ಜಮಾಲ್‌ ಸಾಬ್‌, ಹುಲ್ಮನಿ ಚಂದ್ರಣ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next