ದಾವಣಗೆರೆ: ಕುಸ್ತಿ ಮತ್ತು ದೇಹದಾಡ್ಯì ಕ್ರೀಡೆಗಳು ಬುದ್ದಿ ಚುರುಕುಗೊಳಿಸುವ ಜತೆಗೆ ಆರೋಗ್ಯಯುತ ದೇಹ ಹೊಂದಲು ಸಹಕಾರಿ ಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಗ್ರೂಪ್ ಆಫ್ ಐರನ್ ಗೇಮ್ಸ್ ಹಾಗೂ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಬೆಂಚ್ ಪ್ರಸ್ ಸ್ಪರ್ಧೆ (ಮಲಗಿ ಭಾರವಾದ ಪ್ಲೇಟ್‌ಗಳನ್ನು ಎದೆಯ ಮಟ್ಟಕ್ಕೆ ಎತ್ತುವ ಸ್ಪರ್ಧೆ) ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವ್ಯಕ್ತಿ ಉತ್ತಮ ಸ್ಥಾನ ತಲುಪಬೇಕಾದರೆ ಕೌಶಲ್ಯ ಬೆಳೆಸಿಕೊಳ್ಳುವುದು ಅವಶ್ಯ. ಕೌಶಲ್ಯ ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಸ್ಪರ್ಧೆಯಲ್ಲಿ ಸೋಲು- ಗೆಲುವು ಸಾಮಾನ್ಯ. ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆ, ಸಂಸ್ಕೃತಿ ಮತ್ತು ಶಿಕ್ಷಣದಲ್ಲಿ ಆಸಕ್ತಿ ಬೆಳೆಸಿಕೊಂಡರೆ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಲು ಸಾಧ್ಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಕ್ರೀಡಾಪಟುಗಳಿಗೆ ಆರೋಗ್ಯ ಬಹಳ ಮುಖ್ಯ. ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಪುರುಷರ ಮತ್ತು ಮಹಿಳೆಯರ ಸಬ್ ಜ್ಯೂನಿಯರ್, ಜ್ಯೂನಿಯರ್ ಮತ್ತು ಮಾಸ್ಟರ್ ವಿಭಾಗದಲ್ಲಿ ನಡೆಯುತ್ತಿರುವ ಬೆಂಚ್ ಪ್ರಸ್ ಸ್ಪರ್ಧೆಯಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ಕ್ರೀಡಾಪಟು ಸತೀಶ್ ಕುಮಾರ್ ಕುದ್ರೋಳಿ, ರಾಷ್ಟ್ರೀಯ ಕ್ರೀಡಾಪಟು ಎಂ. ಮಹೇಶ್ವರಯ್ಯ, ಏಕಲವ್ಯ ಪ್ರಶಸ್ತಿ ಪುರಸ್ಕೃತ ದಾದಾಪೀರ್, ಮಂಗಳೂರಿನ ಜಯರಾಮ್, ಉಮೇಶ್ ಗಟ್ಟಿ, ಎಂ.ಎಸ್. ಷಣ್ಮುಗ, ಕೆ. ಕುಮಾರ್ ದಾವಣಗೆರೆ, ಕೆ. ಗಂಗಪ್ಪ, ಹರಿಹರದ ವೀರಭದ್ರಪ್ಪ ತೀರ್ಪುಗಾರರಾಗಿ ಭಾಗವಹಿಸಿದ್ದಾರೆ.
ವಿಶ್ವ ದಾಖಲೆ ನಿರ್ಮಿಸಿದ ಬಿ.ಎಚ್. ಭಾರತಿ, ರಾಷ್ಟ್ರ ಮಟ್ಟದ ಚಿನ್ನದ ಪದಕ ವಿಜೇತ ಲೋಗನಾಥ್, ರಜ್ವಿ ಖಾನ್, ವೇಟ್ ಲಿಫ್ಟರ್ ಶ್ರೀನಿವಾಸ್, ಕಾಮನ್ವೆಲ್ತ್ ಚಾಂಪಿಯನ್‌ಗಳಾದ ವಿಶ್ವನಾಥ್ ಗಾಣಿಗ, ಪ್ರದೀಪ್ ಆಚಾರ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉದ್ಘಾಟನೆ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಪೈಲ್ವಾನ್ ವೀರೇಶ್, ಪಿ.ಬಿ. ಪ್ರಕಾಶ್, ಸತೀಶ್‌ಕುಮಾರ್ ಕುದ್ರೋಳಿ, ಕೆ.ಎನ್. ಶೈಲಜಾ, ಪಿ.ಜಿ. ಪಾಂಡುರಂಗ, ರಜ್ವಿ ಖಾನ್ ಇತರರು ಇದ್ದರು.