Advertisement

ಹರಿಹರ: ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಬಂದ್

05:40 PM Apr 08, 2021 | Team Udayavani |

ಹರಿಹರ: ಆರನೇ ವೇತನ ಆಯೋಗದ ಅನುಸಾರ ವೇತನ ಪರಿಷ್ಕರಣೆಗೆ ಆಗ್ರಹಿಸಿ ನೌಕರರ ರಾಜ್ಯ ವ್ಯಾಪಿ ಮುಷ್ಕರದಿಂದಾಗಿ ತಾಲೂಕಿನಾದ್ಯಂತ ಬುಧವಾರ ಕೆಎಸ್‌ ಆರ್‌ಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಬೆಳಿಗ್ಗೆ 8 ರಿಂದ ಯಾವುದೇ ಬಸ್‌, ನಿಲ್ದಾಣಕ್ಕೆ ಬರಲಿಲ್ಲ. ತಾಲೂಕಿನಲ್ಲಿ ಖಾಸಗಿ ಬಸ್‌ ಸೌಲಭ್ಯ ಕಡಿಮೆ,. ಗ್ರಾಮೀಣ ಭಾಗದಿಂದ ಹರಿಹರ, ದಾವಣಗೆರೆಗೆ ಬಂದು ಹೋಗುವ ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಯಿತು. ಹಲವರು ಟೆಂಪೊ, ಆಟೋ, ಮೆಟಡಾರ್‌ಗಳನ್ನು ಆಶ್ರಯಿಸಿದರು.

Advertisement

ಖಾಸಗೀ ಬಸ್‌ಗಳು, ಮತ್ತಿತರೆ ವಾಹನಗಳಲ್ಲಿ ಮಿತಿ ಮೀರಿ ಪ್ರಯಾಣಿಕರನ್ನು ತುಂಬುವುದು, ಹೆಚ್ಚುವರಿ ಪ್ರಯಾಣ ದರ ವಿ ಧಿಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಪ್ರಯಾಣಿಕರ ಶೋಷಣೆಯಾಗುತ್ತಿರುವುದು ಕಂಡುಬಂತು. ಹರಿಹರ-ದಾವಣಗೆರೆ ಮಧ್ಯೆ ನಿಗ ದಿತ 15 ರೂ. ಬದಲು 20 ರೂ. ಪಡೆಯಲಾಗುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದರು.

ಹರಪನಹಳ್ಳಿ, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ ರಸ್ತೆಯಲ್ಲೂ ವಾಹನಗಳ ಸಂಚಾರ ಕಡಿಮೆ ಇತ್ತು. ಮುಷ್ಕರದ ಮಾಹಿತಿ ಇಲ್ಲದೆ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಪರದಾಡಿದರು. ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ರಾಜ್ಯದ ನಾಲ್ಕು ದಿಕ್ಕುಗಳಿಗೆ ಸಾಗುವ 1500 ಬಸ್‌ಗಳು ಬಂದು ಹೋಗುತ್ತವೆ. ಇಲ್ಲಿನ ಸಂಸ್ಥೆಯ ಡಿಪೋದಿಂದ 100ಕ್ಕೂ ಹೆಚ್ಚು ಮಾರ್ಗಗಳಿಗೆ ಬಸ್‌ ಸಂಚಾರವಿದೆ. ಸಮೀಪದ ಡಿಪೋದಲ್ಲೂ ಮ್ಯಾನೇಜರ್‌ ಹಾಗೂ ಇತರೆ ಕೆಲವು ಹಿರಿಯ ಅ ಧಿಕಾರಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ನೌಕರರು ಕೆಲಸಕ್ಕೆ ಹಾಜರಾಗಲಿಲ್ಲ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next