Advertisement

ಅರ್ಥಪೂರ್ಣ ಗಣರಾಜ್ಯ ದಿನಕ್ಕೆ ನಿರ್ಧಾರ

04:27 PM Jan 25, 2021 | Team Udayavani |

ದಾವಣಗೆರೆ: ರಾಷ್ಟ್ರೀಯ ಹಬ್ಬವಾದ·ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿರಬೇಕು. ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ
ಎಲ್ಲಾ ಮಹನೀಯರನ್ನು ನೆನೆಯುವ ದಿನಇದಾಗಿದೆ. ಅವರ ಶ್ರಮ, ತ್ಯಾಗ, ಬಲಿದಾನಗಳಿಗೆನಾವು ಗೌರವ ಸಮರ್ಪಿಸೋಣ ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

Advertisement

ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ. 26 ರಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ.ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿಧ್ವಜಾರೋಹಣ ನೆರವೇರಿಸಿ ಕ್ರೀಡಾಂಗಣದಲ್ಲಿಹಾಜರಿರಬೇಕು. ಅಂದು ಯಾವುದೇ ಕಾರಣಕ್ಕೂಸರ್ಕಾರಿ ಇಲಾಖೆ ಅ ಧಿಕಾರಿ ಮತ್ತು ಸಿಬ್ಬಂದಿಗಳುರಜೆ ಎಂದು ಭಾವಿಸದೇ ತಪ್ಪದೇ ಹಾಜರಿರಬೇಕುಎಂದು ಸೂಚಿಸಿದರು.

ಕೋವಿಡ್‌ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿಗಣರಾಜೋತ್ಸವ ಆಯೋಜಿಸಲಾಗಿದ್ದುಕೋವಿಡ್‌ ನಿಯಮಗಳನ್ನು ಪಾಲಿಸಬೇಕು.ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳುಇರುವುದಿಲ್ಲ ಹಾಗೂ ಗಣರಾಜ್ಯೋತ್ಸವಆಚರಣೆ ಸಂಬಂಧ ಸರ್ಕಾರನೀಡುವಮಾರ್ಗಸೂಚಿಗಳಿಗನುಗುಣವಾಗಿ ಕಾರ್ಯಕ್ರಮಹಮ್ಮಿಕೊಳ್ಳಲಾಗುವುದು ಎಂದರುಎಲ್ಲಾ ಸರ್ಕಾರಿ ಇಲಾಖೆಗಳಲ್ಲಿಧ್ವಜ ಸಂಹಿತಿಯನ್ನು ಕಾಪಾಡಬೇಕು.ಸಾರ್ವಜನಿಕ ಶಿಕ್ಷಣ ಇಲಾಖೆಯವರು ಎಲ್ಲಾಶಾಲೆಗಳಲ್ಲಿ ಬೆಳಿಗ್ಗೆ 7:30ಕ್ಕೆ ಧ್ವಜಾರೋಹಣನಡೆಯುವಂತೆ ನೋಡಿಕೊಳ್ಳಬೇಕು ಹಾಗೂನಗರದ ಪ್ರಮುಖ ವೃತ್ತಗಳಿಗೆ ಸಂಬಂಧಿ ಸಿದಇಲಾಖೆಗಳು ದೀಪಾಲಂಕಾರ ಮಾಡಿಸಬೇಕು.ಪಥಸಂಚಲನದಲ್ಲಿ ಭಾಗವಹಿಸುವ ತಂಡಗಳಿಗೆಕೇಸರಿ, ಬಿಳಿ, ಹಸಿರು ಮಾಸ್ಕ್ಗಳನ್ನು ಖಾದಿಗ್ರಾಮೋದ್ಯೋಗ ಇಲಾಖೆಯವರು ವ್ಯವಸ್ಥೆ
ಮಾಡಬೇಕು ಎಂದರು.

ಮಳೆಗಾಲದ ಸಮಯದಲ್ಲಿ ಜಿಲ್ಲಾಕ್ರೀಡಾಂಗಣದಲ್ಲಿ ನೀರು ನಿಂತು ಕಾರ್ಯಕ್ರಮಕ್ಕೆಅಡಚಣೆಯಾಗಿದ್ದಿದೆ. ಹಾಗಾಗಿ ಕ್ರೀಡಾಂಗಣದಲ್ಲಿಜಲ್ಲಿ ಮತ್ತು ಮರಳನ್ನು ಹಾಕಿಸಿ ನೆಲವನ್ನುಸಜ್ಜುಗೊಳಿಸಬೇಕು. ಜಿಲ್ಲೆಯ ಗ್ರಾಮೀಣಪ್ರದೇಶಗಳಲ್ಲಿ ಗಾಮ ಪಂಚಾಯತಿಗಳು, ಸ್ಥಳೀಯಸಂಸ್ಥೆಗಳು ಹಾಗೂಶಾಲೆಗಳಲ್ಲಿ ಧ್ವಜಾರೋಹಣದನಂತರ ಧ್ವಜವನ್ನು ಸಾಯಂಕಾಲದವರೆಗೆವ್ಯವಸ್ಥಿತವಾಗಿ ನೋಡಿಕೊಳ್ಳುವಂತೆ ಎಲ್ಲಾಗ್ರಾಮಪಂಚಾಯತಿಯ ಕಾರ್ಯದರ್ಶಿಗಳು ಹಾಗೂಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆನೀಡಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪೂಜಾರ್‌ವೀರಮಲ್ಲಪ್ಪ ಮಾತನಾಡಿ, ಗಣರಾಜ್ಯೋತ್ಸವಕಾರ್ಯಕ್ರಮದಲ್ಲಿ ಸರ್ಕಾರಿ ಅಧಿ ಕಾರಿ/ನೌಕರರಿಗೆಸರ್ವೋತ್ತಮ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.ಎಲ್ಲ ಇಲಾಖೆಗಳ ಅ ಧಿಕಾರಿಗಳು ತಮಗೆವಹಿಸಿರುವ ಜವಾಬ್ದಾರಿಯನ್ನುಶಿಸ್ತಿನಿಂದಯಶಸ್ವಿಗೊಳಿಸಬೇಕು ಎಂದರು.

Advertisement

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತವಿಶ್ವನಾಥ ಮುದಜ್ಜಿ, ಸಮಾಜ ಕಲ್ಯಾಣಾ ಧಿಕಾರಿರೇಷ್ಮಾಕೌಸರ್‌, ನಗರಾಭಿವೃದ್ಧಿಕೋಶದಯೋಜನಾ ನಿರ್ದೇಶಕಿ ಜಿ. ನಜ್ಮಾ, ಡಿಡಿಪಿಐಪರಮೇಶ್ವರಪ್ಪ, ಆಹಾರ ನಾಗರಿಕ ಸರಬರಾಜುಇಲಾಖೆಯ ಜಂಟಿನಿರ್ದೇಶಕ ಮಂಟೇಸ್ವಾಮಿಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳುಇದ್ದರು.

 

ಓದಿ:·ಸಮ ಸಮಾಜಕ್ಕೆ ಶಿಕ್ಷಣ ಅಗತ್ಯ

Advertisement

Udayavani is now on Telegram. Click here to join our channel and stay updated with the latest news.

Next