Advertisement
ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕೆ ಸಾರ್ವಜನಿಕರನ್ನು ಸೇರಿಸಲು ಗಣೇಶೋತ್ಸವ ಆಯೋಜಿಸಿದ್ದ ಮಾದರಿಯಲ್ಲಿ ದಾವಣಗೆರೆಯ ಹೋರಾಟಗಾರರು ಬಸವ ಜಯಂತಿ ಆಚರಿಸುವ ಮೂಲಕ ಸ್ವಾತಂತ್ರ್ಯ ಪ್ರೇಮಿಗಳನ್ನು ಒಗ್ಗೂಡಿಸಲು ಶ್ರಮಿಸಿದ್ದು, ಇತಿಹಾಸದಲ್ಲಿ ದಾಖಲಾಗಿದೆ ಎಂದು ತಿಳಿಸಿದರು.
Related Articles
Advertisement
ಈ ಷರತ್ತುಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದ್ದು, 1934 ಮಾ.2 ರಂದು ಗಾಂಧೀಜಿ ದಾವಣಗೆರೆಗೆ ಭೇಟಿ ನೀಡಿದರು. ಅವರ ಷರತ್ತಿನಂತೆ ಹರಿಜನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆಯನ್ನು ಗಾಂಧೀಜಿ ಯವರಿಂದ ನೆರವೇರಿಸಿದ್ದು ಐತಿಹಾಸಿಕ ಎಂದು ತಿಳಿಸಿದರು.
ಭಾರತದ ಇತಿಹಾಸದಲ್ಲಿ ಗಾಂ ಧಿಯವರು ಶಂಕುಸ್ಥಾಪನೆ ನೆರವೇರಿಸಿರುವುದು 2 ಕಾರ್ಯಕ್ರಮಗಳಲ್ಲಿ ಮಾತ್ರ. ಅದರಲ್ಲಿ ದಾವಣಗೆರೆಯೂ ಒಂದೆಂಬುದು ಹೆಗ್ಗಳಿಕೆ. ನಂತರ ಚನ್ನಗಿರಿ ರಂಗಪ್ಪನವರು ಗಾಂ ಧೀಜಿಯವರನ್ನು ಹರಿಜನ ಕಾಲೋನಿ ಈಗಿನ ಗಾಂಧಿ ನಗರಕ್ಕೆ ಕರೆದುಕೊಂಡು ಹೋಗಿದ್ದರು ಎಂದು ತಿಳಿಸಿದರು.
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಆರಂಭವಾದಾಗ ಇಲ್ಲಿನ ಹೋರಾಟಗಾರರು ತಾಲೂಕು ಆಫಿಸಿನ ಖಜಾನೆ ಲೂಟಿಗೆ ಹುನ್ನಾರ ಮಾಡಿದಾಗ ಗೌಪ್ಯ ಸ್ಥಳಗಳಲ್ಲಿದ್ದ ಬ್ರಿಟಿಷ್ ಪೊಲೀಸರು ಅವರ ಮೇಲೆ ಗೋಲಿಬಾರ್ ನಡೆಸಿದರು. ಆ ಸಂದರ್ಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರು ಗೋಲಿಬಾರ್‌ನಲ್ಲಿ ಮಡಿದು ತೀವ್ರ ಗಾಯಗೊಂಡ ಮೂರು ಹೋರಾಟಗಾರರು ಮುಂದಿನ ದಿನಗಳಲ್ಲಿ ಅಸುನೀಗಿದರು. ಇಂತಹ ಹಲವಾರು ಹೋರಾಟಗಳಿಗೆ ದಾವಣಗೆರೆ ಸಾಕ್ಷಿ ಆಗಿದೆ ಎಂದರು.
ದಾವಣಗೆರೆ ಪುರಸಭಾ ಭವನದ ಹಿಂಭಾಗದಲ್ಲಿ ಆಗ ಸ್ಟೇಷನ್ ಕೋರ್ಟ್‌ನಲ್ಲಿ ಅರಣ್ಯ ಸತ್ಯಾಗ್ರಹಿಗಳ ವಿಚಾರಣೆ ನಡೆಸಿದಾಗ ಸತ್ಯಾಗ್ರಹಿಗಳ ಹೇಳಿಕೆಗಳು ದಂಡಾ ಧಿಕಾರಿಗಳಿಗೆ ಅಚ್ಚರಿ ತಂದವು. ವಯಸ್ಸು ಕೇಳಿ ಪ್ರಶ್ನಿಸಿದರೆ ಸ್ವಾತಂತ್ರ್ಯ ಪ್ರಜ್ಞೆ ಬಂದಿದ್ದರಿಂದ ಲೆಕ್ಕಾ ಹಾಕಿ ವಯಸ್ಸು ಹೇಳುತ್ತಿದ್ದರು. ಕೆಲಸ ಏನೆಂದು ಪ್ರಶ್ನಿಸಿದರೆ ದೇಶ ಸೇವೆ ಎಂಬ ಉತ್ತರ ನೀಡುತ್ತಿದ್ದರು. ಇದಕ್ಕೆ ಸಿಟ್ಟಿಗೆದ್ದ ದಂಡಾಧಿ ಕಾರಿ ಅವರಿಗೆ ಆಗಿನ ಕಾಲದಲ್ಲೆ 500 ದಂಡ ತೆರದಿದ್ದರೆ 48 ತಿಂಗಳು ಕಾಲ ಕಠಿಣ ಶಿಕ್ಷೆ ಅನುಭವಿಸಬೇಕು ಎಂದು ಸೂಚಿಸಿದ್ದರು. ಶಿಕ್ಷೆಗೆ ಒಳಗಾದ ರಾಜಕೀಯ ಬಂ ಧಿಗಳನ್ನು ಛಡಿ ಏಟಿನಿಂದ ಶಿಕ್ಷಿಸುತ್ತಿದ್ದರು ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಇತ್ತೀಚಿನ ಮಕ್ಕಳಲ್ಲಿ ಸ್ವಾತಂತ್ರ್ಯ ದ ಬಗೆಗಿನ ಹುರುಪು, ಹುಮ್ಮಸ್ಸು ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯ ಹೇಗೆ ಬಂತು ಎಂದು ತಿಳಿದುಕೊಳ್ಳುವ ವ್ಯವಧಾನವಿಲ್ಲ. ಕೇವಲ ಪರೀಕ್ಷೆಗಳಲ್ಲಿ ಅಂಕ ಪಡೆಯಲು ಮಾತ್ರ ಓದುತ್ತಿದ್ದಾರೆ ವಿನಃ ಆದರೆ ಅದರಲ್ಲಿರುವ ಸ್ವಾತಂತ್ರ್ಯ ದ ಕುರಿತಾದ ಜ್ವಾಲೆಯನ್ನು ಅರಿತುಕೊಳ್ಳುವಲ್ಲಿ ಅಸಡ್ಡೆತನ ತೋರುತ್ತಿದ್ದಾರೆ. ದೇಶ ಪ್ರೇಮದ ಕಿಚ್ಚು ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಿಇಒ ವಿಜಯ ಮಹಾಂತೇಶ ದಾನಮ್ಮನವರ, ಇಂದಿನ ಯುವಪೀಳಿಗೆ ಆಧುನಿಕತೆ ಹಾಗೂ ಪಾಶ್ಚಿಮಾತ್ಯಕ್ಕೆ ಮಾರು ಹೋಗಿದ್ದಾರೆ. ಅವರ ಭಾವನೆಯಲ್ಲಿ ನಾವು ದೇಶಾಭಿಮಾನ ಬಿತ್ತುವ ಕೆಲಸವಾಗಬೇಕು ಎಂದು ಆಶಿಸಿದರು.
ಮಹಾಪೌರ ಎಸ್.ಟಿ.ವೀರೇಶ್ ಅನಿಸಿಕೆ ಹಂಚಿಕೊಂಡರು. ಹಾಗೂ ಕಲಾವಿದರಾದ ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ, ಕೆ.ಪರಶುರಾಮ ಹೊನ್ನಾಳಿ, ಕೊಂಡಯ್ಯ ನ್ಯಾಮತಿ, ಚಂದ್ರಪ್ಪ, ವಂಶತ್ ಹರಿಹರ ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಯಿತು.