Advertisement

ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲು ಸೂಚನೆ

04:30 PM Feb 25, 2021 | Team Udayavani |

ಜಗಳೂರು: ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದು
ತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಅಧಿ ಕಾರಿಗಳಿಗೆ ಸೂಚನೆ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಪಂ ಸದಸ್ಯ ಮರೇನಹಳ್ಳಿ ಬಸವರಾಜ್‌ ಮಾತನಾಡಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಇಲಾಖೆಯಲ್ಲಿ 2019-20ನೇ ಸಾಲಿಗೆ 60 ಬೋರ್‌ವೆಲ್‌ ಹಾಗೂ ಪೈಪ್‌ ಲೈನ್‌ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. 2020-21ರಲ್ಲಿ 85 ಕಾಮಗಾರಿಗಳನ್ನು ಮಾಡಲಾಗಿದೆ. ಇವುಗಳಿಗೆ ಸುಮಾರು 2 ರಿಂದ 3 ಕೋಟಿ ರೂ. ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವ ಗ್ರಾಮದಲ್ಲಿ ಎಷ್ಟು ಅನುದಾನ, ಅದರ ಗುಣಮಟ್ಟತೆ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಕೇವಲ ಇದೊಂದೇ ಇಲಾಖೆಯಲ್ಲಿ ಇಷ್ಟೊಂದು ಅನುದಾನ ವಿನಿಯೋಗವಾಗಿದೆ. ಆದರೆ ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ಸರ್ಕಾರದ ಅನುದಾನ ಎಲ್ಲಿ ಹೋಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನು ಸಹ
ಉನ್ನತ ಮಟ್ಟದ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.

ಹಿರೇಮಲ್ಲನಹೊಳೆ ಕ್ಷೇತ್ರದ ಸದಸ್ಯ ತಿಮ್ಮಾ ಬೋವಿ ಮಾತನಾಡಿ, ಗ್ರಾಪಂ ಆಡಳಿತ ಅ ಧಿಕಾರಿಗಳ ಕೈಯಲ್ಲಿದ್ದಾಗ ಪಿಡಿಒ 15ನೇ ಹಣಕಾಸು ಯೋಜನೆಯನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಬೀದಿದೀಪ, ಚರಂಡಿ ಸ್ವತ್ಛತೆ, ಇತರೆ ಮೂಲಭೂತ ಸೌಲಭ್ಯಕ್ಕೆ ಲೆಕ್ಕಪತ್ರವಿಲ್ಲದೆ ಬೇಕಾಬಿಟ್ಟಿಯಾಗಿ ಅನುದಾನವನ್ನು ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಲ್ಲಾ ನಾಯ್ಕ, 15ನೇ ಹಣಕಾಸು ಯೋಜನೆಯಡಿ ವರ್ಷದಲ್ಲಿ ಎರಡು ಬಾರಿ ಅನುದಾನ ಬಿಡುಗಡೆಯಾಗುತ್ತದೆ. ಅದರಲ್ಲಿ ಬೋರ್‌ವೆಲ್‌ ದುರಸ್ತಿ, ಬೀದಿದೀಪ ಸೇರಿದಂತೆ ಇತರೆ ಕೆಲಸಗಳನ್ನು ಮಾಡಲಾಗುತ್ತದೆ. ಹಿಂದೆ ಮಾಡಿದ ಕೆಲಸಕ್ಕೆ ಈಗ ಬಿಲ್‌ ಮಾಡಿಕೊಂಡಿರುತ್ತಾರೆ. ಒಂದೇ ದಿನ ಲಕ್ಷಗಟ್ಟಲೇ ಬಿಡಿಸಬಹುದು. ಯಾವುದೇ ರೀತಿಯ ಸಮಸ್ಯೆ ಇದ್ದರೆ ನಿಮ್ಮಲ್ಲಿರುವ ದಾಖಲೆಗಳನ್ನು ಒದಗಿಸಿ ಎಂದರು.

22 ಗ್ರಾಪಂಗಳ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದೆ. ಆಸಕ್ತ ಕೂಲಿಕಾರರು ಆಯಾ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಚೀಟಿ ನೀಡಿ ಉದ್ಯೋಗ ಪಡೆಯಬೇಕಿದೆ. ಹಲವು ಪಂಚಾಯಿತಿಗಳಲ್ಲಿ ನರೇಗಾ ಯೋಜನೆ ಪ್ರಗತಿಯಲ್ಲಿದೆ. 15ನೇ ಹಣಕಾಸು ಯೋಜನೆಯಡಿ ಜೂನ್‌ ಮಾಹೆಯಲ್ಲಿ ಮೊದಲನೇ ಕಂತು, ಅಕ್ಟೋಬರ್‌ ಮಾಹೆ ಯಲ್ಲಿ ಎರಡನೇ ಕಂತಿನ ಹಣ ಬಿಡುಗಡೆಯಾಗುತ್ತದೆ.

ಅನುದಾನದ ಹೊಂದಾಣಿಕೆಗಾಗಿ ಕ್ರಿಯಾ ಯೋಜನೆಯಲ್ಲಿ ಮುಂಗಡ ಕಾಮಗಾರಿಗಳನ್ನು ನಮೂದಿಸಿರಬಹುದು. ಅನುದಾನ ದುರುಪಯೋಗವಾಗಿದ್ದರೆ ವರದಿ ತರಿಸಿಕೊಂಡು ತನಿಖೆ ನಡೆಸಲು ಮೇಲಾಧಿ ಕಾರಿಗಳಿಗೆ ಶಿಫಾರಸು ಮಾಡುವುದಾಗಿ ತಿಳಿಸಿದರು.

Advertisement

ಸಭೆಯಲ್ಲಿ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್‌, ಸದಸ್ಯರಾದ ತಿಪ್ಪೇಸ್ವಾಮಿ, ಬಿದರಕೆರೆ ಬಸವರಾಜ್‌, ಶಂಕರ್‌ ನಾಯ್ಕ, ಮಮತಾ ಮಲ್ಲೇಶ್‌, ಲಕ್ಷ್ಮೀಬಾಯಿ ಸುರೇಶ್‌ ನಾಯ್ಕ, ಕಮಲಮ್ಮ ಲೋಕೇಶ್‌, ಮಂಜಮ್ಮ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜ್ಜಣ್ಣ, ತಾಪಂ ಸಹಾಯಕ ನಿರ್ದೇಶಕ ವೆಂಕಟೇಶ್‌, ವ್ಯವಸ್ಥಾಪಕ ರವಿಕುಮಾರ್‌ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಓದಿ : ವಂಚನೆ ಪ್ರಕರಣ: ನೀರವ್ ಮೋದಿ ಭಾರತಕ್ಕೆ ಗಡಿಪಾರು: ಬ್ರಿಟನ್ ಕೋರ್ಟ್ ತೀರ್ಪು

 

 

Advertisement

Udayavani is now on Telegram. Click here to join our channel and stay updated with the latest news.

Next