ಮಲೇಬೆನ್ನೂರು: ದೇವಾಲಯ, ಮಂದಿರ, ಚರ್ಚ್‌ಗಳ ಗಂಟೆ ಬಾರಿಸುವುದರಿಂದಷ್ಟೇ ಹಳ್ಳಿಗಳ ಅಭಿವೃದ್ಧಿ ಸಾಧ್ಯವಿಲ್ಲ. ಅದಕ್ಕೆ ಇಚ್ಛಾಶಕ್ತಿಯೂ ಅಗತ್ಯ ಎಂದು ಸರ್ಕಾರಿ ಉರ್ದು ಪ್ರೌಢಶಾಲೆ ಮುಖ್ಯಾಧ್ಯಾಪಕಿ ರಾಜೇಶ್ವರಿ ಹೇಳಿದರು.
ಪಟ್ಟಣದ ಉರ್ದು ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ನೂತನ ಸದಸ್ಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸರ್ಕಾರ ಶಾಲೆಗೆ ಕಟ್ಟಡ, ಶಿಕ್ಷಕರು, ಪೀಠೊಪಕರಣ ಮತ್ತಿತರ ಸೌಲಭ್ಯಗಳನ್ನು ಒದಗಿಸುತ್ತದೆ. ಮಕ್ಕಳ ಹಾಜರಾತಿ ಉತ್ತಮ ಪಡಿಸಲು, ನಿ ಧಿ ಸಂಗ್ರಹಿಸಲು, ಎಸ್ ಡಿಎಂಸಿ ಸದಸ್ಯರು ಪೋಷಕರ ಮತ್ತು ಶಿಕ್ಷಕರ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕೆಂದರು.
ಶಿಕ್ಷಕಿ ಸೈಯದಾ ಕೌಸರ್ ತಸ್ಮಿಯಾ ಮಾತನಾಡಿ, ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಕರು ಶ್ರಮಿಸುತ್ತಿದ್ದೇವೆ. ನಮ್ಮ ಉತ್ಸಾಹಕ್ಕೆ ಎಸ್‌ಡಿಎಂಸಿ ಸಾಥ್ ನೀಡಬೇಕೆಂದು ಮನವಿ ಮಾಡಿದರು.
ಹಿರಿಯ ಶಿಕ್ಷಕ ರೇವಣಸಿದ್ದಪ್ಪ ಅಂಗಡಿ ಮಾತನಾಡಿ, ಎಸ್‌ಡಿಎಂಸಿ ಪದಾಧಿ ಕಾರಿಗಳು ಮಕ್ಕಳ ಹಾಜರಾತಿ ಹೆಚ್ಚಿಸಲು ಪ್ರಯತ್ನಿಸಬೇಕು. ಮಾಸಿಕ ಸಭೆಗಳಲ್ಲಿ ಭಾಗಿಯಾಗುವುದು, ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಶಾಲೆಗೆ ಕರೆತರುವುದು. ಶಾಲೆಯ ಕಾಂಪೌಂಡ್ ಸುತ್ತ ಅಂದ ಚಂದ ಮತ್ತು ಸ್ವತ್ಛತೆ ಕಾಪಾಡಲು ಶಾಲೆ ಪಕ್ಕದ ವ್ಯಾಪಾರಸ್ಥರ ಮನವೊಲಿಸಬೇಕಿದೆ ಎಂದರು.
ಮುಖಂಡ ಮೀರ್ ಆಜಾಂ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಖಲೀಲ್ ಅಹ್ಮದ್, ಎಸ್‌ಡಿಎಂಸಿ ಅಧ್ಯಕ್ಷ ಸೈಯ್ಯದ್ ಸಾಬೀರ್ ಅಲಿ, ಉಪಾಧ್ಯಕ್ಷೆ ಅಖೀಲಾಬೀ, ಸದಸ್ಯರುಗಳಾದ ಚಮನ್ ಶರೀಫ್, ಖಾಲೀದ್, ಹಸೀನಾ ಬಾನು, ಸೈಯ್ಯದ್ ಸಿದ್ಧಿಖೀ ಹಾಗೂ ಶಿಕ್ಷಕರು ಹಾಜರಿದ್ದರು. ಫರ್ರಾನಾ ಅಲಿ ಪ್ರಾರ್ಥಿಸಿದರು.
ಓದಿ :
ಬೇಸಿಗೆಯಲ್ಲಿ ನೀರಿನ ಕೊರತೆಯಿಲ್ಲ : ನ್ಯಾಮಗೌಡ