Advertisement

ಸಹನೆ -ತಾಳ್ಮೆಯಿಂದ ದಾಂಪತ್ಯಜೀವನ ಸುಗಮ: ಸ್ವಾಮೀಜಿ

03:44 PM Feb 25, 2021 | Team Udayavani |

ಹರಿಹರ: ನವ ದಂಪತಿಗಳು ಪರಸ್ಪರ ಸಹನೆ, ತಾಳ್ಮೆಯಿಂದ ನಡೆದುಕೊಂಡರೆ ಮುಂದಿನ ದಾಂಪತ್ಯ ಜೀವನ ಹಸನಾಗುತ್ತದೆ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

Advertisement

ಕರುನಾಡ ಕದಂಬ ರಕ್ಷಣಾ ವೇದಿಕೆ ಕನ್ನಡ ರಾಜ್ಯೋತ್ಸವ ನಿಮಿತ್ತ ನಗರದಲ್ಲಿ ಬುಧವಾರ ಆಯೋಜಿಸಿದ್ದ ಸರ್ವ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಓದಿ : ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ಭಿನ್ನ ಪರಿಸರದಲ್ಲಿ ಬೆಳೆದ ಎರಡು ಜೀವಗಳು ವಿಭಿನ್ನ ಅಭಿರುಚಿ, ಆಸಕ್ತಿ ಹೊಂದಿರುವುದು ಸಹಜ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಪರಸ್ಪರ ಗೌರವಿಸುತ್ತಾ ಬಾಳ ಬಂಡಿ ನಡೆಸಬೇಕು. ಮನುಷ್ಯನಿಗೆ ಎರಡು ಕಣ್ಣು, ಎರಡು ಕಿವಿ ಇದ್ದರೂ ವೀಕ್ಷಣೆ ಹಾಗೂ ಆಲಿಕೆಯಲ್ಲಿ ವ್ಯತ್ಯಾಸವಾಗದು. ಇದು ದಾಂಪತ್ಯ ಜೀವನಕ್ಕೂ ಮಾದರಿಯಾಗಿದೆ. ಎರಡು ದೇಹ ಒಂದು ಮನಸ್ಸಾಗಿ ಬದುಕಿದರೆ ದಾಂಪತ್ಯ ಜೀವನ ಹಸನಾಗುತ್ತದೆ ಎಂದರು.

ಬೆಂಗಳೂರು ಕಾಳಿಕಾಮಠದ ಋಷಿಕುಮಾರ ಸ್ವಾಮೀಜಿ ಮಾತನಾಡಿ, ಜನಸಾಮಾನ್ಯರನ್ನು ಆರ್ಥಿಕ ಹೊರೆಯಿಂದ ಉಳಿಸುವ ಸಾಮೂಹಿಕ ವಿವಾಹಗಳಿಗೆ ಎಲ್ಲರೂ ಆದ್ಯತೆ ನೀಡಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ಮಾತನಾಡಿ, ಸಾಮೂಹಿಕ ವಿವಾಹಗಳು ಸಮಾಜಮುಖೀಯಾಗಿವೆ. ನಮ್ಮ ತಂದೆ ಮಾಜಿ ಸಚಿವ ಎಚ್‌. ಶಿವಪ್ಪ ಅವರ ಸ್ಮರಣಾರ್ಥ ಹಲವು ಬಾರಿ
ಸಾಮೂಹಿಕ ವಿವಾಹ ನಡೆಸಲಾಗಿದೆ ಎಂದು ತಿಳಿಸಿದರು.

Advertisement

ಹರಪನಹಳ್ಳಿ ಎಂ.ಪಿ.ಪ್ರಕಾಶ್‌ ಪ್ರತಿಷ್ಠಾನದ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್‌ ಮಾತನಾಡಿ, ಸಾಧುವಿಗೆ ಸಾಧುವಾಗಿ, ವಿರೋ ಧಿಗೆ ವಿರೋ ಧಿಯಾಗಿರುವುದು ಕನ್ನಡಿಗರ ಸ್ವಭಾವವಾಗಿದೆ. ನಾಡು-ನುಡಿ ಸಂರಕ್ಷಣೆಗೆ ಕನ್ನಡ ಪರ ಸಂಘಟನೆಗಳು ಮುಂಜೂಣಿಯಲ್ಲಿರಬೇಕು. ಆದರೆ ಇತ್ತೀಚಿಗೆ ರಚನಾತ್ಮಕ ಚಳವಳಿಗಳು ಕಡಿಮೆಯಾಗುತ್ತಿವೆ ಎಂದರು.

ವೇದಿಕೆ ಅಧ್ಯಕ್ಷ ಎಚ್‌. ಸುಧಾಕರ ಮಾತನಾಡಿ, ನಮ್ಮ ತಾಯಿಯವರ ಆಶಯದಂತೆ ಸಾಮೂಹಿಕ ವಿವಾಹಗಳನ್ನು ನಡೆಸಲಾಗುತ್ತಿದೆ. ಈ ಬಾರಿ 12 ಜೋಡಿ ವಿವಾಹಗಳನ್ನು ನಡೆಸಲಾಗಿದೆ ಎಂದರು. ಕೊರೊನಾ ವಾರಿಯರ್ ಪೊಲೀಸ್‌ ಸಿಬ್ಬಂದಿ, ಪ್ರವಾಸಿ ಮಂದಿರ ಪರಿಚಾರಕ ಖಾಜಾ ಸಾಬ್‌ ಸೇರಿದಂತೆ ಹಲವರನ್ನು ಸತ್ಕರಿಸಲಾಯಿತು. ನವೀನ್‌ ಹಾಗೂ ಸಂಗಡಿಗರು ನೃತ್ಯ ಪದರ್ಶಿಸಿದರು. ಚಿತ್ರದುರ್ಗ ಬಂಜಾರ ಗುರುಪೀಠದ
ಸರ್ದಾರ್‌ ಸೇವಾಲಾಲ್‌ ಸ್ವಾಮೀಜಿ, ಕವಲತ್ತು ಬಸ ‌ಕೇಂದ್ರದ ಶರಣೆ ಮುಕ್ತಾಯಕ್ಕ, ತುಮ್ಮಿನಕಟ್ಟೆ ಪದ್ಮಶಾಲಿ ಗುರುಪೀಠದ ಪ್ರಭುಲಿಂಗ ಶ್ರೀಗಳು, ಜುಬೇರ್‌ ಅಹ್ಮದ್‌ ಮೌಲಾನಾ, ಅಶ್ರಫ್ ಸಖಾಫ್, ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಜಿ. ಪ್ರಭುಗೌಡ್ರು, ಹರಪನಹಳ್ಳಿ ಸುರೇಶ್‌ ಮಂಡಕ್ಕಿ, ನಂದಿಗಾವಿ ಶ್ರೀನಿವಾಸ್‌, ಸಿ.ಎನ್‌. ಹುಲಿಗೇಶ್‌, ಶಶಿ ನಾಯ್ಕ, ವಿಷ್ಣು ಪೂಜಾರ್‌, ಸುಚಿತ್‌ ಡಿ. ಪೂಜಾರ್‌, ಸೈಯದ್‌ ಹಜರತ್‌ ಅಲಿ, ಪ್ರಶಾಂತ್‌ ಮೆಹರವಾಡೆ, ಮೊಹ್ಮದ್‌ ಹಾಷೀಮ್‌ ಇತರರು ಇದ್ದರು.

ಓದಿ : ಕಸಬಾ ಪತ್ತಿನ ಸಹಕಾರ ಸಂಘ ವಿಂಗಡಣೆ ಖಚಿತ

Advertisement

Udayavani is now on Telegram. Click here to join our channel and stay updated with the latest news.

Next