Advertisement

1-2 ರಂದು ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

03:37 PM Feb 25, 2021 | Team Udayavani |

ದಾವಣಗೆರೆ: ಜಿಲ್ಲಾ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್‌ 1 ಮತ್ತು 2ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದೆ
ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ| ಎಚ್‌.ಎಸ್‌. ಮಂಜುನಾಥ ಕುರ್ಕಿ ತಿಳಿಸಿದರು.

Advertisement

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 1ರಂದು ಬೆಳಿಗ್ಗೆ 8:30ಕ್ಕೆ ಜಿಪಂ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ ರಾಷ್ಟ್ರ
ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷರಾದ ತಾವು ಕಸಾಪ ಧ್ವಜಾರೋಹಣ ಹಾಗೂ ಮಹಾನಗರ ಪಾಲಿಕೆ ಮಹಾಪೌರರು ನಾಡ ಧ್ವಜಾರೋಹಣ
ನೆರವೇರಿಸುವರು ಎಂದರು.

ಬಳಿಕ ಸಮ್ಮೇಳನಾಧ್ಯಕ್ಷರ ಮೆರವಣಿಗೆ ವಿದ್ಯಾನಗರ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕುವೆಂಪು ಕನ್ನಡ ಭವನವರೆಗೆ ನಡೆಯಲಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮೆರವಣಿಗೆಗೆ ಚಾಲನೆ ನೀಡುವರು. ಇದರಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಪುಸ್ತಕ ಮಳಿಗೆ ಉದ್ಘಾಟಿಸುವರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಅಭಿವೃದ್ಧಿ) ಎಚ್‌.ಕೆ. ಲಿಂಗರಾಜ್‌ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು ಎಂದರು.
ಉದ್ಘಾಟನೆ: ಮಾ. 1ರಂದು ಬೆಳಗ್ಗೆ 11ಗಂಟೆಗೆ ಕಸಾಪ ಅಧ್ಯಕ್ಷ ಡಾ| ಮನು ಬಳಿಗಾರ್‌ ಸಮ್ಮೇಳನ ಉದ್ಘಾಟಿಸುವರು. ಶಾಸಕ ಎಸ್‌.ಎ.
ರವೀಂದ್ರನಾಥ್‌ ಅಧ್ಯಕ್ಷತೆ ವಹಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌ ಅವರು ಡಾ| ಜಿ.ಎಸ್‌. ಶಿವರುದ್ರಪ್ಪ ವೇದಿಕೆ ಉದ್ಘಾಟಿಸುವರು. ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಕೃತಿ ಬಿಡುಗಡೆಗೊಳಿಸುವರು. ಸಮ್ಮೇಳನಾಧ್ಯಕ್ಷ ಎನ್‌.ಟಿ. ಎರ್ರಿಸ್ವಾಮಿ ಅವರಿಗೆ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಲೋಕೇಶ ಅಗಸನಕಟ್ಟೆ ಕನ್ನಡ ಧ್ವಜ ಹಸ್ತಾಂತರಿಸುವರು. ಅತಿಥಿಗಳಾಗಿ ಶಾಸಕರು, ಹಿರಿಯ ಅಧಿಕಾರಿಗಳು ಭಾಗವಹಿಸುವರು ಎಂದರು.

Advertisement

ವಿವಿಧ ಗೋಷ್ಠಿಗಳು: ಮಧ್ಯಾಹ್ನ 2 ಗಂಟೆಗೆ ಕನ್ನಡ ಕಾವ್ಯ ಮತ್ತು ವಿಶ್ವ ಮಾನವ ಪ್ರಜ್ಞೆ ವಿಷಯ ಕುರಿತು ಗೋಷ್ಠಿ, ಮಧ್ಯಾಹ್ನ 3:30ಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು ವಿಷಯ ಕುರಿತ ಗೋಷ್ಠಿ, ಸಂಜೆ 5ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಮಾ. 2ರಂದು ಬೆಳಗ್ಗೆ 9:30ಕ್ಕೆ ಕೊರೊನಾ ಕುರಿತ ಕವಿಗೋಷ್ಠಿ, ಮಧ್ಯಾಹ್ನ 12 ಗಂಟೆಗೆ ಡಾ| ಪದ್ಮರಾಜ ದಂಡಾವತಿ ಅವರಿಂದ ವಿಶೇಷ ಉಪನ್ಯಾಸ, ಮಧ್ಯಾಹ್ನ 2 ಗಂಟೆಗೆ ನೂತನ ಕೃಷಿ ಕಾಯ್ದೆ ನಿಜಕ್ಕೂ ಹಿತಶತ್ರುವೇ? ವಿಷಯ ಕುರಿತು ಗೋಷ್ಠಿ ನಡೆಯಲಿದೆ. ಇದರಲ್ಲಿ ಕೃಷಿ ತಜ್ಞ ಪ್ರೊ| ಸಿ. ನರಸಿಂಹಪ್ಪ, ಮಾಜಿ ಶಾಸಕ ವೈ. ಎಸ್‌.ವಿ ದತ್ತ ಭಾಗವಹಿಸುವರು. ಸಂಜೆ 4 ಗಂಟೆಗೆ ಬಹಿರಂಗ ಅಧಿವೇಶನದಲ್ಲಿ ನಿರ್ಣಯ ಮಂಡನೆ ಮಾಡಲಾಗುತ್ತದೆ. ಬಳಿಕ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಮ್ಮೇಳನದಲ್ಲಿ ಭಾಗವಹಿಸುವ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಎರಡು ದಿನ ಅನ್ಯಕಾರ್ಯನಿಮಿತ್ತ ರಜಾ ಸೌಲಭ್ಯವಿದೆ.
ಕನ್ನಡಾಭಿಮಾನಿಗಳು ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಪರಿಷತ್‌ ಪದಾಧಿಕಾರಿಗಳಾದ ಬುರುಡೇಕಟ್ಟೆ ಮಂಜಪ್ಪ, ಜೆ.ಆರ್‌. ಷಣ್ಮುಖಪ್ಪ, ಬಿ. ದಿಳ್ಳೆಪ್ಪ, ಎನ್‌.ಎಸ್‌. ರಾಜು, ಎ.ಆರ್‌. ಉಜನಪ್ಪ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಓದಿ : ಡಿಜಿಟಲ್ ಮಾಧ್ಯಮ, ಸಾಮಾಜಿಕ ಜಾಲತಾಣ, ಒಟಿಟಿ ಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

Advertisement

Udayavani is now on Telegram. Click here to join our channel and stay updated with the latest news.

Next