Advertisement

6 ಉದ್ಯಾನಗಳಿಗೆ ಸ್ವಾತಂತ್ರ್ಯ ಯೋಧರ ಹೆಸರಿಡಲು ನಿರ್ಧಾರ

04:13 PM Feb 21, 2021 | Team Udayavani |

ದಾವಣಗೆರೆ: ಜೆ.ಎಚ್‌. ಪಟೇಲ್‌·ಬಡಾವಣೆಯಲ್ಲಿರುವ ಆರುಉದ್ಯಾನಗಳಿಗೆ ಸ್ವಾತಂತ್ರ ಯೋಧರಹೆಸರು ಇಡಲಾಗುವುದು ಎಂದುದಾವಣಗೆರೆ ಹರಿಹರ ನಗರಾಭಿವೃದ್ಧಿಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿಶಿವಕುಮಾರ್‌ ಹೇಳಿದರು

Advertisement

ಶನಿವಾರ ನಡೆದ ಪ್ರಾಧಿಕಾರದಸಭೆಯಲ್ಲಿ ಮಾತಾನಾಡಿದ ಅವರು, ಸ್ವಾತಂತ್ರಯೋಧರಾದ ಹಳ್ಳೂರುನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ,ಬಿದರಕುಂದಿ ನಿಂಗಪ್ಪ, ಹದಡಿನಿಂಗಪ್ಪ, ಹಮಾಲಿ ತಿಮ್ಮಣ್ಣಮಾಗಾನಹಳ್ಳಿ ಹನುಮಂತಪ್ಪ ಅವರಹೆಸರಿಡಲಾಗುವುದು. ಜೆ.ಹೆಚ್‌.ಪಟೇಲ್‌ ಬಡಾವಣೆಯಲ್ಲಿರುವಎರಡು ವೃತ್ತಗಳಿಗೆ ಜಗನ್ನಾಥ್‌ಜೋಷಿ ಮತ್ತು ಡಾ| ಶ್ಯಾಮ್‌ಪ್ರಸಾದ್‌
ಮುಖರ್ಜಿ ಹೆಸರು ಇಡಲಾಗುವುದುಎಂದರು.

ಪ್ರಾಧಿಕಾರದ ವ್ಯಾಪ್ತಿಯಲ್ಲಿಬರುವ ಖಾಸಗಿ ಬಡಾವಣೆಗಳಲ್ಲಿಕಾಯ್ದಿರಿಸಿರುವ ಉದ್ಯಾನವನಗಳಅತಿಕ್ರಮಣ ತಡೆಯುವ ದೃಷ್ಟಿಯಿಂದ
ಹದ್ದುಬಸ್ತು ಮಾಡಿ ತಂತಿ-ಬೇಲಿ ಹಾಕುವಕುರಿತು ಕ್ರಮ ವಹಿಸಲಾಗುತ್ತಿದ್ದು, ಒಟ್ಟು20 ಉದ್ಯಾನವನಗಳನ್ನು ಹದ್ದುಬಸ್ತು
ಮಾಡಿ ತಂತಿ-ಬೇಲಿ ಹಾಕಲಾಗಿದೆಎಂದು ತಿಳಿಸಿದರು.

ಸಹಾಯಕ ಕಾರ್ಯಪಾಲಕಅಭಿಯಂತರರು ಮಾತನಾಡಿ,ದಾವಣಗೆರೆ-ಹರಿಹರ ನಗರಾಭಿವೃದ್ಧಿಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಿರುವ.ದಾವಣಗೆರೆ ತಾಲೂಕು ಕುಂದುವಾಡಗ್ರಾಮದ ವಿವಿಧ ರಿಸನಂ:ಗಳಲ್ಲಿ ಒಟ್ಟು53ಎಕರೆ ಜಮೀನುಗಳನ್ನು ವಸತಿಯೋಜನೆ ಉದ್ದೇಶಕ್ಕೆ ನೇರ ಖರೀದಿಮೂಲಕ ಜಮೀನು ಖರೀದಿ ಮಾಡಲುಪೂರ್ವಾನುಮತಿ ಪಡೆಯಲು
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿಹೇಳಿದರು.

ಪ್ರಾಧಿಕಾರದ ಸದಸ್ಯರಾದ ನಾಗರಾಎಂ. ರೋಖಡೆ, ಹರಿಹರ ನಗರದಲ್ಲಿರಿಂಗ್‌ ರಸ್ತೆ ನಿರ್ಮಾಣ ಮಾಡುವ ಬಗ್ಗೆ
ವಿಷಯವನ್ನು ಪ್ರಸ್ತಾಪಿಸಿದರು. ಈಬಗ್ಗೆ ಸಭೆಯು ರಿಂಗ್‌ ರಸ್ತೆ ಕಾಮಗಾರಿಕೈಗೊಳ್ಳಲು ಬಗ್ಗೆ ಸರ್ವೇ ಕಾರ್ಯಕೈಗೊಳ್ಳಲು ತೀರ್ಮಾನಿಸಿತು.
ಶಾಸಕರಾದ ಎಸ್‌.ಎ.ರವೀಂದ್ರನಾಥ್‌, ಎಸ್‌. ರಾಮಪ್ಪ,ಪ್ರಾಧಿಕಾರದ ಸದಸ್ಯರಾದ ದೇವಿರಮ್ಮಆರ್‌.ಎಲ್‌., ಸೌಭಾಗ್ಯಮ್ಮ,ಡಿ.ವಿ.ಜಯರುದ್ರಪ್ಪ, ಆಯುಕ್ತ ಬಿ.ಟಿ.ಕುಮಾರಸ್ವಾಮಿ ಇದ್ದರು.

Advertisement

ಓದಿ :·ಹಲ್ಮಿಡಿ ಗ್ರಾಮದಲ್ಲಿ ತಹಶೀಲ್ದಾರ್‌ ವಾಸ್ತವ್ಯ; 30 ಅರ್ಜಿ ಇತ್ಯರ್ಥ

Advertisement

Udayavani is now on Telegram. Click here to join our channel and stay updated with the latest news.

Next