Advertisement

ರಕ್ತ ದಾನದಿಂದ ಆತ್ಮ ಸಂತೃಪಿ ಸಾಧ್ಯ

04:11 PM Jan 25, 2021 | Team Udayavani |

ದಾವಣಗೆರೆ: ರಕ್ತದಾನದಿಂದ ಆತ್ಮ ಸಂತೃಪ್ತಿ ಸಾಧ್ಯ. ಒಂದು ಜೀವ ಉಳಿಸಿದ ಧನ್ಯತೆ, ಸಂತೃಪ್ತಿಯನ್ನು ನೀಡುವ ರಕ್ತದಾನ ಸೇವೆಯ
ಅವಕಾಶ ಮತ್ತು ಅದರ ಶ್ರೇಷ್ಠತೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದು ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ದಾವಣಗೆರೆ ಘಟಕದ ಅಧ್ಯಕ್ಷ ಡಾ| ಎ.ಎಂ. ಶಿವಕುಮಾರ ಅಭಿಪ್ರಾಯಪಟ್ಟರು.

Advertisement

ದಾವಣಗೆರೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಕ್ತದಾನ ಮಹತ್ವ ಕುರಿತ ವಿಚಾರ ಸಂಕಿರಣ ಹಾಗೂ ರಕ್ತದ ಗುಂಪು ತಪಾಸಣಾ ಶಿಬಿರವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ರಕ್ತಕ್ಕೆ ಇರುವ ಮಹತ್ವ ಅಪಘಾತ, ಶಸ್ತ್ರಚಿಕಿತ್ಸೆ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ಜೀವದ ಜೊತೆಗೆ ಹೋರಾಟ ನಡೆಸುವ ವ್ಯಕ್ತಿಯ ಕುಟುಂಬದವರು ಪರದಾಟ ಅನುಭವಿಸುವಾಗಲೇ ಗೊತ್ತಾಗುತ್ತದೆ. ಅಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳಲು ರಕ್ತವೊಂದೇ ಪರಿಹಾರ ಮಾರ್ಗ ಎಂದರು.

ಜಾತಿ- ಧರ್ಮ ಭೇದವಿಲ್ಲದೆ, ಗಂಡು-ಹೆಣ್ಣು ಅಥವಾ ಮೇಲು-ಕೀಳುಗಳ ಭಿನ್ನವಿಲ್ಲದೆ ಎಲ್ಲರಲ್ಲೂ ಇರುವ, ಎಲ್ಲರಿಗೂ ಬೇಕಾಗಿರುವ ಜೀವಚೇತನ ರಕ್ತ. ರಕ್ತದಾನದ ಬಗ್ಗೆ ಯಾವುದೇ ಅಳಕು, ಆತಂಕ ಬೇಕಿಲ್ಲ. ಆರೋಗ್ಯವಂತ ಎಲ್ಲ ಮನುಷ್ಯರೂ ರಕ್ತದಾನ ಮಾಡಬಹುದು. ಈ ಕುರಿತು ಅರಿವು ಮೂಡಿಸುವ ಜೊತೆಗೆ ತುರ್ತು ಸಂದರ್ಭದಲ್ಲಿ ಬೇಕಾಗಿರುವ ಪ್ರಥಮ ಚಿಕಿತ್ಸೆಯ ಬಗ್ಗೆಯೂ ಯುವಜನರಲ್ಲಿ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್‌ ಸದಸ್ಯ ಡಾ| ರಾಮನಾಥ ಮಾತನಾಡಿದರು. ಜೆಜೆಎಂ ವೈದ್ಯಕೀಯ ಕಾಲೇಜಿನ ರೋಗನಿಧಾನ ಶಾಸ್ತ್ರದ ಪ್ರಾಧ್ಯಾಪಕ ಡಾ| ಬಿ.ನಿಕೇತನ್‌ ಅವರು ರಕ್ತದಾನದ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಂಡಿಕೇಟ್‌ ಸದಸ್ಯ ಇನಾಯತ್‌ ಉಲ್ಲಾ, ಪ್ರಭಾರ ಕುಲಸಚಿವ ಪ್ರೊ| ವಿ. ಕುಮಾರ್‌, ದಾವಿವಿ ಯುವ ರೆಡ್‌ ಕ್ರಾಸ್‌ ಘಟಕದ ನೋಡಲ್‌ ಅಧಿಕಾರಿ ಡಾ| ಡಿ. ಕೊಟ್ರೇಶ್‌, ಪ್ರಧಾನ ಕಾರ್ಯದರ್ಶಿ ಉಮೇಶ ಶೆಟ್ಟಿ ಡಾ| ನಿಕೇತನ್‌, ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ, ಡಾ| ರಾಮನಾಥ, ಇನಾಯತ್‌ಉಲ್ಲಾ, ಪ್ರೊ| ವಿ. ಕುಮಾರ, ಡಾ| ಕೊಟ್ರೇಶ್‌ ಇದ್ದರು.

Advertisement

ಓದಿ: ಎಸ್‌ಟಿ ಮೀಸಲು ವಿಚಾರ ಅಧಿವೇಶನದಲ್ಲಿ ಪ್ರಸ್ತಾಪ

Advertisement

Udayavani is now on Telegram. Click here to join our channel and stay updated with the latest news.

Next