ಮಲೇಬೆನ್ನೂರು: ರಾಜ್ಯದ ಕಂದಾಯ ಸಚಿವರು ವಿಡಿಯೋ ಸಂವಾದದಲ್ಲಿ ಸೂಚಿಸಿರುವಂತೆ ಸಮೀಪದ ಕುಂಬಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ಫೆ. 20 ರಂದು ಕಂದಾಯ ಇಲಾಖೆ ಅ ಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ. ಕಂದಾಯ, ಭೂ ದಾಖಲೆಗಳು, ಉಪವಿಭಾಗ, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾ ಧಿಕಾರಿಗಳು ಅಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಪಹಣಿಯಲ್ಲಿನ ಲೋಪದೋಷ ತಿದ್ದುಪಡಿ, ಪಹಣಿಗಳ ಕಾಲಂ ಮೂರು ಮತ್ತು 9ಅನ್ನು ತಾಳೆ ಹೊಂದುವಂತೆ ಸೂಕ್ತ ಕ್ರಮ, ಪಹಣಿಯಲ್ಲಿನ ಖಾತೆದಾರರ ಹೆಸರು, ಪಂಚಣಿ ಸೌಲಭ್ಯ, ವಸತಿ ನಿಲಯಗಳಿಗೆ ಭೇಟಿ, ಅಂಗನವಾಡಿಗಳಿಗೆ ಭೇಟಿ,
ಸ್ಮಶಾನ ಲಭ್ಯತೆ ಪರಿಶೀಲನೆ ಮತ್ತಿತರೆ ಕಾರ್ಯವನ್ನು ಅ ಧಿಕಾರಿಗಳು ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಓದಿ :
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ: ಸಮಗ್ರ ವರದಿ ಕೇಳಿದ ಹೈಕೋರ್ಟ್