Advertisement

ಮಹಾನಗರ ಪಾಲಿಕೆ ನೌಕರರಿಂದ ಪ್ರತಿಭಟನೆ

03:17 PM Feb 19, 2021 | Team Udayavani |

ದಾವಣಗೆರೆ: ಬೃಹತ್‌ ಬೆಂಗಳೂರು ಮಹಾನಗರ·ಪಾಲಿಕೆಯ ಅಧಿ ಕಾರಿ, ನೌಕರರಿಗೆ ವೃಂದ ಮತ್ತುನೇಮಕಾತಿ ನಿಯಮಾವಳಿಯಅನಾನೂಕೂಲತೆಗಳವಿರುದ್ಧ ನಡೆಸುತ್ತಿರುವ ಮುಷ್ಕರ ಬೆಂಬಲಿಸಿಗುರುವಾರ ಮಹಾನಗರ ಪಾಲಿಕೆ ನೌಕರರುಪ್ರತಿಭಟನೆ ನಡೆಸಿದರು.

Advertisement

ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿಎ ಶ್ರೇಣಿ ಅಧಿ ಕಾರಿ ಅಥವಾ 74 ಸಾವಿರ ಮೇಲ್ಪಟ್ಟುವೇತನ ಅಧಿ ಕಾರಿಗಳನ್ನು ಸರ್ಕಾರ ನೇಮಕಾತಿಪ್ರಾಧಿ ಕಾರ ಕ್ಕೆ ನೀಡಿರುವುದು ಸರಿಯಲ್ಲ. ಅರ್ಹಅ ಧಿಕಾರಿಗಳು ಸೇವಾ ನಿಯಮವಾದ ಮುಂಬಡ್ತಿ, ವರ್ಗಾವಣೆ ಹೊಂದಲು ವಿಳಂಬವಾಗುತ್ತಿದೆ.ನೇಮಕಾತಿ ಪ್ರಾ ಧಿಕಾರವನ್ನ ಆಯುಕ್ತರಿಗೆನೀಡಬೇಕು. ಕೋವಿಡ್‌ ಸೋಂಕಿನಿಂದ ಮೃತಪಟ್ಟವರಅವಲಂಬಿತರಿಗೆ 30 ಲಕ್ಷ ರೂಪಾಯಿ ನೀಡಬೇಕು.

ನಿವೃತ್ತಿ ವೇತನ ಮತ್ತು ಉಪಧನ, ಅನುಕಂಪದಆಧಾರದ ಮೇಲೆ ನೌಕರಿ ಹಾಗೂ ಇತರೆ ಆರ್ಥಿಕಸೌಲಭ್ಯಒದಗಿಸಬೇಕು. ನೇರ ನೇಮಕಾತಿ ಮೂಲಕಶೇ.25 ರಷ್ಟು ಕಂದಾಯ ಪರಿವೀಕ್ಷಕರ ನೇಮಕಾತಿರದ್ದುಪಡಿಸಿ ಕಂದಾಯ ವಸೂಲಿಗಾರರಿಂದ ಹಾಗೂದ್ವಿತೀಯ ದರ್ಜೆ ಗುಮಾಸ್ತರಿಂದ ಕಂದಾಯಪರಿವೀಕ್ಷಕರಿಗೆ ಮುಂಬಡ್ತಿ ನೀಡಬೇಕು ಎಂದುಒತ್ತಾಯಿಸಿದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿಖಾಲಿ ಇರುವ 702 ವಿವಿಧ ಹುದ್ದೆಗಳನ್ನು ನೇರನೇಮಕಾತಿ ಮೂಲಕ ಭರ್ತಿ ಮಾಡಬೇಕು.
ಕಂದಾಯ ಅಧಿ ಕಾರಿ ಹುದ್ದೆಯಿಂದ ಉಪಕಂದಾಯ ಅ ಧಿಕಾರಿಗೆ ಮುಂಬಡ್ತಿ ಹಾಗೂ ಪ್ರಥಮದರ್ಜೆ ಗುಮಾಸ್ತರು, ಕಂದಾಯ ಪರಿವೀಕ್ಷಕರಹುದ್ದೆಯಿಂದ ವ್ಯವಸ್ಥಾಪಕರು, ಮೌಲ್ಯಮಾಪಕರಹುದ್ದೆಗೆ ಮುಂಬಡ್ತಿ ದ್ವಿತೀಯ ದರ್ಜೆ ಗುಮಾಸ್ತರು,ಕಂದಾಯ ವಸೂಲಿಗಾರರ ಹುದ್ದೆಯಿಂದ ಕಂದಾಯಪರಿವೀಕ್ಷಕರ ಹುದ್ದೆಗೆ ಮುಂಬಡ್ತಿ ಇತರೆ ಬೇಡಿಕೆಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿರಾಜ್ಯದ ಎಲ್ಲಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನಕೆಲಸ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದರು.

ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷಕೆ.ಎಸ್‌. ಗೋವಿಂದರಾಜ್‌, ಕೆ.ಸಿ. ಹಾಲೇಶ್‌,ಕೆ. ಬಸವರಾಜ್‌, ಎಸ್‌.ಬಿ. ಗುತ್ಯಪ್ಪ, ಎಸ್‌.ಕೆ.
ಪಾಂಡುರಂಗ, ಗೋವಿಂದನಾಯ್ಕ, ನಾಗರತ್ನಮ್ಮ,ಸುರೇಶ್‌ ಪಾಟೀಲ್‌ ಇತರರು ಇದ್ದರು.

Advertisement

ಓದಿ :·ಪಿಎಫ್ಐ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ ಗೃಹ ಸಚಿವ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next