Advertisement

ಹರ್ಡೇಕರ್‌ ಮಂಜಪ್ಪ ಶ್ರೇಷ್ಠ ಸುಧಾರಕರು

03:14 PM Feb 19, 2021 | Team Udayavani |

ದಾವಣಗೆರೆ: ಕರ್ನಾಟಕದ ಗಾಂಧಿ ಎಂದೇ ಕರೆಯಲ್ಪಡುವ ಹರ್ಡೇಕರ್‌ ಮಂಜಪ್ಪನವರು ಒಬ್ಬ ವಿಭೂತಿ ಪುರುಷರು. ಕನ್ನಡನಾಡಿನ ಶ್ರೇಷ್ಠ
ಸುಧಾರಕರು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.

Advertisement

ಗುರುವಾರ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಹರ್ಡೇಕರ್‌‌ ಮಂಜಪ್ಪನವರ 135ನೇ ಜಯಂತಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹರ್ಡೇಕರ್‌ ಮಂಜಪ್ಪನವರ ಜೀವನ ಮತ್ತು ಶ್ರೇಷ್ಠ ಬರಹಗಳು ನಾಡಿನ ಪ್ರಗತಿಗೆ ದಾರಿದೀಪವಾಗಿವೆ. ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಂತೆ ಹರ್ಡೇಕರ್‌ ಮಂಜಪ್ಪನವರು ತಮ್ಮ ವೈಯಕ್ತಿಕ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದರು. ಚರಕದಿಂದ ನೂಲು ತೆಗೆಯುವುದನ್ನ ತಮ್ಮ ನಿತ್ಯ ಕಾಯಕ ಮಾಡಿಕೊಂಡಿದ್ದ ಅವರು “ಖಾದಿಯ ವಿಜ್ಞಾನ’ ಎಂಬ ಗ್ರಂಥ ರಚಿಸಿದ್ದಾರೆ. ಆದ್ದರಿಂದಲೇ ಜನರು ಅವರನ್ನು “ಕರ್ನಾಟಕದ ಗಾಂಧಿ’ ಎಂದು ಕರೆದರು. ಮಂಜಪ್ಪನವರಿಗೆ ಬಸವ ತತ್ವವೇ ಉಸಿರಾಗಿತ್ತು ಎಂದರು.

1913 ರಲ್ಲಿ ದಾವಣಗೆರೆಯ ವಿರಕ್ತ ಮಠದಲ್ಲಿ ಮೃತ್ಯುಂಜಯ ಅಪ್ಪ ಅವರೊಡಗೂಡಿ ಪ್ರಪ್ರಥಮ ಬಾರಿಗೆ ಸಾರ್ವತ್ರಿಕ ಬಸವ ಜಯಂತಿ
ಆಚರಿಸಿದರು. ಈ ಮೂಲಕ ಇಡೀ ವಿಶ್ವಕ್ಕೆ ಬಸವಣ್ಣನವರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಯುವಕರನ್ನು ಸ್ವಾತಂತ್ರ
ಚಳವಳಿಯಲ್ಲಿ ಭಾಗವಹಿಸಲು ಸದಾ ಪ್ರೇರಣೆ ನೀಡುತ್ತಿದ್ದರು. ಯುವಕರು ಸದಾ ಪವಿತ್ರರು, ಧೀರರು ಆಗಿರಬೇಕು ಎಂದು ಕರೆ ನೀಡಿದ್ದ
ಅವರು ಒಬ್ಬ ಮಹಾತ್ಮರು ಎಂದು ಸ್ಮರಿಸಿದರು. ಎಂ. ಜಯಕುಮಾರ್‌, ಕಣಕುಪ್ಪಿ ಮುರುಗೇಶಪ್ಪ, ಹಾಸಭಾವಿ ಕರಿಬಸಪ್ಪ, ಲುಂಬಿ
ಮುರುಗೇಶ್‌, ನಿಜಗುಣ, ಶಿವಯೋಗಿ, ಕುಂಟೋಜಿ ಚನ್ನಪ್ಪ, ರೋಷನ್‌ ಇತರರು ಇದ್ದರು.

ಓದಿ : ತುಳು ಚಿತ್ರರಂಗ ಉಳಿಯಬೇಕಾದರೆ ಥಿಯೇಟರ್ ಸಮಸ್ಯೆ ಬಗೆಹರಿಯಬೇಕು: ದೇವದಾಸ್ ಕಾಪಿಕಾಡ್

Advertisement

Udayavani is now on Telegram. Click here to join our channel and stay updated with the latest news.

Next