Advertisement

ಮಾ. 27ಕ್ಕೆ ಲೋಕ ಅದಾಲತ್‌ ಆಯೋಜನೆ: ನ್ಯಾ|ತಿಮ್ಮಯ್ಯ

03:57 PM Feb 18, 2021 | Team Udayavani |

ಜಗಳೂರು: ಮುಂದಿನ ಮಾ. 27 ರಂದು·ಲೋಕ ಅದಾಲತ್‌ ಕಾರ್ಯಕ್ರಮಆಯೋಜಿಸಲಾಗಿದೆ. ಕಕ್ಷಿದಾರರುಇದರ ಸದ್ಬಳಕೆ ಮಾಡಿಕೊಂಡರೆ ಆರ್ಥಿಕಹೊರೆ ತಗ್ಗುವುದಲ್ಲದೆ ನ್ಯಾಯಾಲಯಕ್ಕೆಅಲೆದಾಡುವುದು ನಿಲ್ಲುತ್ತದೆ ಎಂದು

Advertisement

ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಜಿ. ತಿಮ್ಮಯ್ಯ ತಿಳಿಸಿದರು.ಪಟ್ಟಣದ ಜೆಎಂಎಫ್‌ಸಿನ್ಯಾಯಾಲಯದ ಆವರಣದಲ್ಲಿಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮೆಗಾ ಲೋಕಅದಾಲತ್‌ ಮೂಲಕ ಸಾರ್ವಜನಿಕರುನ್ಯಾಯಾಲಯದಲ್ಲಿ ಬಾಕಿ ಇರುವ
ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವಪ್ರಕರಣಗಳನ್ನು ರಾಜಿ ಸಂಧಾನದಮೂಲಕ ಸುಲಭವಾಗಿ, ಶೀಘ್ರವಾಗಿಮತ್ತು ಯಾವುದೇ ಶುಲ್ಕವಿಲ್ಲದೆ ಇರ್ತ್ಯರ್ಥಪಡಿಸಿಕೊಳ್ಳಬಹುದು ಎಂದರು.

ಕಳೆದ ಡಿ. 2020 ರಂದು ನಡೆದಲೋಕ್‌ ಅದಾಲತ್‌ನಲ್ಲಿ ಒಟ್ಟು 217ಪ್ರಕರಣಗಳು ಇತ್ಯರ್ಥಗೊಂಡು 55.59ಲಕ್ಷ ರೂ. ಪರಿಹಾರ ಒದಗಿಸಲಾಗಿದೆ.ಚೆಕ್‌ ಅಮಾನ್ಯ ಪ್ರಕರಣಗಳು,ಬ್ಯಾಂಕ್‌ ಸಾಲ ವಸೂಲಾತಿಪ್ರಕರಣಗಳು, ಪಾಲು ವಿಭಾಗ ಕೋರಿ
ಸಲ್ಲಿಸುವ ದಾವೆ, ವಿದ್ಯುತ್‌ ಹಾಗೂನೀರಿನ ಶುಲ್ಕಗಳು, ಮೆಂಟೇನೆನ್ಸ್‌ಪ್ರಕರಣಗಳು, ಜೀವನಾಂಶದಅರ್ಜಿ ಪ್ರಕರಣಗಳು, ಕೌಟುಂಬಿಕ
(ವಿಚ್ಛೇದನವನ್ನು ಹೊರತುಪಡಿಸಿ)ಕಲಹಗಳು, ರಾಜಿಯಾಗಬಲ್ಲಅಪರಾ ಧ ಪ್ರಕರಣಗಳು, ಸಿವಿಲ್‌ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ
ಬಗೆಹರಿಸಲಾಗುವುದು ಹಾಗೂವ್ಯಾಜ್ಯಪೂರ್ವ ಪ್ರಕರಣಗಳನ್ನು ಸಹಇತ್ಯರ್ಥಪಡಿಸಲಾಗುವುದು ಎಂದುಹೇಳಿದರು.

ಈಗಾಗಲೇ ಮೂರು ಬಾರಿಲೋಕ ಅದಾಲತ್‌ ನಡೆಸಲಾಗಿದ್ದುಜನರಿಂದ ಉತ್ತಮ ಸ್ಪಂದನೆ ದೊರಕಿದೆ.ಲೋಕ ಅದಾಲತ್‌ಗೆ ಕಂದಾಯ,ಪೊಲೀಸ್‌ ಇಲಾಖೆ, ವಕೀಲರುಗಳಿಂದಉತ್ತಮ ಸಹಕಾರ ದೊರೆಯುತ್ತಿದೆ.ಪ್ರಸ್ತುತವಾಗಿ ನ್ಯಾಯಾಲಯದಲ್ಲಿ1500-1700ಪ್ರಕರಣಗಳಿದ್ದು,ಕೋವಿಡ್‌ ಹಿನ್ನೆಲೆಯಲ್ಲಿ ಶೀಘ್ರವಾಗಿಪ್ರಕರಣಗಳು ಇತ್ಯರ್ಥವಾಗಿರಲಿಲ್ಲ.ಇದೀಗ ಪ್ರಕರಣಗಳು ಇತ್ಯರ್ಥಕ್ಕೆಬರುವುದರಿಂದ ಒತ್ತಡ ನಿಭಾಯಿಸಲುಲೋಕ ಅದಾಲತ್‌ ಸಹಕಾರಿಯಾಗಲಿದೆಎಂದರು.

ಓದಿ :ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

Advertisement
Advertisement

Udayavani is now on Telegram. Click here to join our channel and stay updated with the latest news.

Next