Advertisement

ಬಸವರಾಜ ಐರಣಿಗೆ ರಂಗ ಗೌರವ

03:52 PM Feb 18, 2021 | Team Udayavani |

ದಾವಣಗೆರೆ: ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ರಂಗ ಕಲಾವಿದ, ಪತ್ರಕರ್ತ ಬಸವರಾಜ ಐರಣಿ ಅವರಿಗೆ ಶ್ರೀ ಪುಟ್ಟರಾಜ ಗವಾಯಿ ಕಲಾ ನಾಟಕ ಸಂಘದ ಕಲಾವಿದರಿಂದ ರಂಗ ಗೌರವ ಸಲ್ಲಿಸಲಾಯಿತು. ಕಲಾ ಸಂಘದ ಅಧ್ಯಕ್ಷ ಪಿ. ಮಲ್ಲಿಕಾರ್ಜುನ ಐರಣಿ
ಮಾತನಾಡಿ, ಐದು ದಶಕಗಳಿಂದ ರಂಗಭೂಮಿಯಲ್ಲಿ ಕ್ರಿಯಾಶೀಲ ನಟ, ಸಂಘಟಕ, ಹೋರಾಟಗಾರ, ಲೇಖಕರಾಗಿ ಕಾರ್ಯನಿರ್ವಹಿಸುತ್ತ ಕಲಾವಿದರ ಒಡನಾಡಿಯಾಗಿ, ಅವಿರತ ಸೇವೆ ಸಲ್ಲಿಸುತ್ತಾ ಬಂದಿರುವ ಬಸವರಾಜ ಐರಣಿ ಅವರಿಗೆ ಅಕಾಡಮಿ ಪ್ರಶಸ್ತಿ ಲಭಿಸಿರುವುದು ದಾವಣಗೆರೆ ನಗರಕ್ಕೆ ಕೀರ್ತಿ ತಂದಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

Advertisement

ಅಭಿನಂದನೆ ಸ್ವೀಕರಿಸಿದ ಬಸವರಾಜ ಐರಣಿ ಮಾತನಾಡಿ, ಸಹೃದಯಿಗಳ ಹಾರೈಕೆ, ಸಹಕಾರ, ಸದಾಶಯಗಳಿಂದ ಕಲಾರಂಗದಲ್ಲಿ ಒಂದಿಷ್ಟು ಸೇವೆ ಮಾಡುವ ಅವಕಾಶ ದೊರೆಯಿತು. ಅಭಿಮಾನಕ್ಕೆ ಸದಾ ಕೃತಜ್ಞನಾಗಿರುವುದಾಗಿ ತಿಳಿಸಿದರು. ಸಂಘದ ಕಾರ್ಯದರ್ಶಿ ನಾಗರಾಜ ಮುತ್ತಿಗಿ, ಕಲಾವಿದರಾದ ಎಸ್‌.ಎಲ್‌. ಚಂದ್ರಶೇಖರಯ್ಯ, ಶಿವಳ್ಳಿ ಮೈಲಪ್ಪ, ಎಚ್‌.ಎಂ.ಮಲ್ಲಿಕಾರ್ಜುನಯ್ಯ, ಕೆ.ಚಂದ್ರಶೇಖರ್‌, ಎಚ್‌.ಕರಿಯಪ್ಪ, ಕೆ. ಸರೋಜಮ್ಮ, ಉಮಾದೇವಿ, ಶ್ರುತಿ ಮೈಲಪ್ಪ, ಸಿ.ನೇತ್ರಾ, ರೇಣುಕಾ ಇತರರು ಇದ್ದರು.

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

 

Advertisement

Udayavani is now on Telegram. Click here to join our channel and stay updated with the latest news.

Next