Advertisement

ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಚಿಂತನೆ: ಪ್ರೊ|ಹಲಸೆ

03:37 PM Feb 18, 2021 | Team Udayavani |

ದಾವಣಗೆರೆ: ವಿಷನ್‌ 2020-25 ಅಡಿಯಲ್ಲಿ ಆಹಾರ ಉತ್ಪನ್ನ ತಯಾರಿಕೆ, ಕೌಶಲ್ಯ ಅಭಿವೃದ್ಧಿ ಕೇಂದ್ರ ಮತ್ತು ಬೃಹತ್‌ ಕ್ರೀಡಾಂಗಣ ನಿರ್ಮಾಣಕ್ಕೆ ಚರ್ಚೆ ನಡೆದಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್‌.ವಿ. ಹಲಸೆ ಹೇಳಿದರು.

Advertisement

ಬುಧವಾರ ದೃಶ್ಯಕಲಾ ಮಹಾವಿದ್ಯಾಲಯದ ಗ್ಯಾಲರಿಯಲ್ಲಿ ಅಂತಿಮ ಬಿ.ವಿ.ಎ. ಆನ್ವಯಿಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಐತಿಹಾಸಿಕ ಸ್ಥಳಗಳ ಛಾಯಾಚಿತ್ರ ಕಲೆಯ ಸಮೂಹ ಪ್ರದರ್ಶನ “ಬೆಳಕು ಬಿಂದು-2020′ ಉದ್ಘಾಟಿಸಿ ಮಾತನಾಡಿದ ಅವರು, ದಾವಣಗೆರೆ ವಿಶ್ವವಿದ್ಯಾಲಯದಿಂದ ಕೇಂದ್ರಕ್ಕೆ 200 ಕೋಟಿಗೂ ಅಧಿ ಕ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಆಹಾರ ಉತ್ಪನ್ನ ತಯಾರಿಕೆ ಕೇಂದ್ರ, ಕೌಶಲ್ಯ ಅಭಿವೃದ್ಧಿ ಮತ್ತು ಬೃಹತ್‌ ಕ್ರೀಡಾಂಗಣ ನಿರ್ಮಾಣಕ್ಕೆ ಚರ್ಚೆ ನಡೆದಿದೆ. ಉಳುಪಿನಕಟ್ಟೆಯಲ್ಲಿ ಆಹಾರ ಉತ್ಪನ್ನ ತಯಾರಿಕಾ ಘಟಕಕ್ಕೆ 17 ಎಕರೆ ಜಮೀನು ಮತ್ತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಮಾದರಿಯಲ್ಲಿ ಕ್ರೀಡಾಂಗಣದ ನಿರ್ಮಾಣಕ್ಕಾಗಿ ಹಾಲುವರ್ತಿಯಲ್ಲಿ 68 ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. ಸಂಗೀತ ಒಳಗೊಂಡಂತೆ ವಿವಿಧ ಪ್ರದರ್ಶನ
ಕಲೆಗಳ ಕೋರ್ಸ್‌ ಪ್ರಾರಂಭಿಸುವ ಚಿಂತನೆ ನಡೆದಿದೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪಿಯುಸಿ ನಂತರ ಸಂಗೀತ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆಯೇ ಸಂಗೀತ, ನೃತ್ಯ, ಫ್ಯಾಷನ್‌ ಡಿಸೈನಿಂಗ್‌ ಇತರೆ ಪ್ರದರ್ಶನ ಕಲೆಗಳನ್ನು ಲಲಿತಕಲಾ ಮಹಾವಿದ್ಯಾಲಯದಲ್ಲಿ ಆರಂಭಿಸಲು ನಿರ್ಧರಿಸಲಾಗಿತ್ತು. ಈಗ ಫ್ಯಾಷನ್‌ ಡಿಸೈನಿಂಗ್‌ ಪ್ರಾರಂಭಿಸಲಾಗಿದೆ. ಉಳಿದ ಪ್ರದರ್ಶನ ಕಲೆಗಳ ಕೋರ್ಸ್‌ ಆರಂಭಿಸಲು ಚರ್ಚೆ ನಡೆಸಲಾಗಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಡಿಜಿಟಲ್‌ ಆರ್ಟ್‌ನಲ್ಲಿ
ಡಿಪ್ಲೋಮಾ, ಡಿಪ್ಲೋಮಾ ಇನ್‌ ಕ್ಲಿನಿಕಲ್‌ ಡಯೆಟಿಕ್ಸ್‌, ಡಿಜಿಟಲ್‌ ಮೀಡಿಯಾದಲ್ಲಿ ಪಿಜಿ ಡಿಪ್ಲೋಮಾ, ಚಿಲ್ಲರೆ ಮಾರುಕಟ್ಟೆ ಮತ್ತು ಮಾಹಿತಿ ತಂತ್ರಜ್ಞಾನ, ಸೈಬರ್‌ ಭದ್ರತೆ ಇತರೆ ಕೌಶಲ್ಯ ಕೋರ್ಸ್‌ ಆರಂಭಿಸಲಾಗಿದೆ ಎಂದರು.

ಅನ್ವಯಿಕ ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಜೈರಾಜ್‌ ಎಂ. ಚಿಕ್ಕಪಾಟೀಲ ಮಾತನಾಡಿ, ಕಳೆದ 2020ರಲ್ಲಿಯೇ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ, ಕೊರೊನಾ ಕಾರಣದಿಂದ ಮುಂದೂಡಲಾಯಿತು. ದಾವಣಗೆರೆ, ಚಿತ್ರದುರ್ಗದ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಪ್ರರ್ದಶಿಸಲಾಗಿದೆ ಎಂದರು.

Advertisement

ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ| ರವೀಂದ್ರ ಎಸ್‌. ಕಮ್ಮಾರ್‌, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಆರ್‌. ಕೊರ್ತಿ, ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ, ಡಾ|ಎಚ್‌.ಎಸ್‌. ಅನಿತಾ, ಹಣಕಾಸು ಅ ಧಿಕಾರಿ ಡಿ. ಪ್ರಿಯಾಂಕ ಇತರರು ಇದ್ದರು. ಆರ್‌. ರಂಜಿತಾ ಸ್ವಾಗತಿಸಿದರು. ಪಲ್ಲವಿ ಪ್ರಾರ್ಥಿಸಿದರು. ದತ್ತಾತ್ರೇಯ ಎನ್‌. ಭಟ್‌ ನಿರೂಪಿಸಿದರು.

ಓದಿ : ದುಬೈ ಯುವರಾಣಿ ಗೋವಾದಲ್ಲಿ ಸೆರೆ ಸಿಕ್ಕಿದ್ದು ಹೇಗೆ, ಅಪ್ಪನೇ ಮಗಳನ್ನು ಜೈಲಿಗೆ ಹಾಕಿದ್ದೇಕೆ ?

Advertisement

Udayavani is now on Telegram. Click here to join our channel and stay updated with the latest news.

Next