Advertisement

ಜಿಎಸ್‌ಎಸ್‌ ಜಾತಿ-ಧರ್ಮ ಮೀರಿದ ರಾಷ್ಟ್ರ ಕವಿ

04:03 PM Feb 15, 2021 | Team Udayavani |

ಚನ್ನಗಿರಿ: ರಾಷ್ಟ್ರಕವಿ ಡಾ| ಜಿ.ಎಸ್‌. ಶಿವರುದ್ರಪ್ಪ ಅವರು ಯಾವುದೇ ಜಾತಿ, ಧರ್ಮ, ಸಮುದಾಯ ಅನುಸರಿಸದೇ ಮಾನವ ಧರ್ಮ
ಅನುಸರಿಸಿದ್ದರಿಂದ ಹೆಚ್ಚಿನ ಜನಪ್ರಿಯತೆ ಗಳಿಸಲು ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ ಎಂ.ಬಿ. ನಾಗರಾಜ್‌ ಕಾಕನೂರು ಹೇಳಿದರು.

Advertisement

ತಾಲೂಕಿನ ಬಸವಾಪಟ್ಟಣ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ, ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ| ಜಿ.ಎಸ್‌. ಶಿವರುದ್ರಪ್ಪ ಅವರು ನಮ್ಮನ್ನು ಅಗಲಿದ್ದರೂ ಅಪಾರ ಸಾಹಿತ್ಯ ಸಂಪತ್ತನ್ನು ಬಿಟ್ಟು ಹೋಗಿದ್ದಾರೆ. ಜಿಎಸ್‌ಎಸ್‌ ಅಪರೂಪದ ವ್ಯಕ್ತಿ
ಅಷ್ಟೇ ಅಲ್ಲ. ಕವಿ, ವಿಮರ್ಶಕರಾಗಿ ಕಾವ್ಯ ಮತ್ತು ವಿಮಶಾ ಕ್ಷೇತ್ರಕ್ಕೆ ಶಾಶ್ವತ ಕೊಡುಗೆ ನೀಡಿದ ಮಹಾನುಭಾವ ಎಂದು ಬಣ್ಣಿಸಿದರು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ಅಲ್ಲಿ ಉತ್ತಮ ರೀತಿಯ ವಾತಾವರಣ ಸೃಷ್ಟಿ ಮಾಡಿದರು. ಇದರಿಂದ ಅವರು ಎಲ್ಲರ
ಮನೆಮಾತಾಗುವುದರ ಮೂಲಕ ಉತ್ತಮ ಕವಿ ಎಂಬುದಾಗಿ ನಾಮಾಂಕಿತರಾದರು. ಅವರ ಕವಿತೆಯಲ್ಲಿ ವಿಸ್ಮಯ ಮತ್ತು ಆಶ್ಚರ್ಯಗಳು
ಒಳಗೊಂಡಿದ್ದವು. ಶಿವರುದ್ರಪ್ಪ ಜಾತಿ, ಮತ ಮೀರಿ ಬೆಳೆದವರು. ಅವರು ಯಾವುದೇ ಒಂದು ಕಟ್ಟುಪಾಡಿಗೆ ಒಳಗಾಗಿರಲಿಲ್ಲ. ಸಮಾಜದ
ಮೇಲೆ ಅವರು ಇಟ್ಟಿದ್ದ ಕಾಳಜಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

“ಪ್ರಸ್ತುತ ಎಲ್ಲೆಡೆ ಅಂಧಕಾರ, ಮೂಢನಂಬಿಕೆ ಹೆಚ್ಚಾಗುತ್ತಿದೆ. ಅನೇಕರು ತಮ್ಮ ಪ್ರಭಾವ ಬೀರುವ ಮೂಲಕ ಜನಸಾಮಾನ್ಯರನ್ನು ಅಂಧಕಾರದಲ್ಲಿ ಮುಳುಗಿಸಿದ್ದಾರೆ. ಶಿಕ್ಷಕರಾಗಿರಲಿ, ಪೋಷಕರಾಗಿರಲಿ ಹಾಗೂ ಸ್ನೇಹಿತರಾಗಿರಲಿ ಯಾರೇ ಏನೇ ಹೇಳಿದರೂ ಅದರ ಬಗ್ಗೆ ಪ್ರಶ್ನೆ
ಮಾಡದೇ ಒಪ್ಪಿಕೊಳ್ಳಬೇಡಿ. ಸುಮ್ಮನೆ ಹೇಳಿದ್ದನ್ನು ಒಪ್ಪಿಕೊಳ್ಳುವವರು ಅಜ್ಞಾನಿಗಳು. ಹೇಳಿದ್ದನ್ನು ಪ್ರಶ್ನೆ ಮಾಡುವವರು ಜ್ಞಾನಿಗಳು’ ಎಂದು
ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Advertisement

ಹಿರಿಯ ಪರ್ತಕರ್ತ ಎನ್‌.ವಿ. ರಮೇಶ್‌ ಮಾತನಾಡಿ, ಜ್ಞಾನ ಸಂಪಾದನೆ ಮಾಡುವಾಗ ನೈಜವಾದ ಮನಸ್ಸು ಅಗತ್ಯವಾಗಿದ್ದು, ಯಾವುದೇ
ರೀತಿಯ ಆಡಂಬರದ ಅಗತ್ಯವಿಲ್ಲ. ಶಿಕ್ಷಣ ಬರೀ ಬದುಕನ್ನು ನಡೆಸುವಂತಿರದೇ ಅದು ಜನರ ಹೃದಯ ತೆರದಿಡುವಂತಿರಬೇಕಿದೆ. ಮಾನವ ಸರಿ,
ತಪ್ಪುಗಳನ್ನು ಅರಿತು ಜೀವನ ಸಾಗಿಸಬೇಕು. ಧರ್ಮ, ಪ್ರಾಮಾಣಿಕತೆ ಮತ್ತು ರಾಜಕೀಯದಲ್ಲಿ ತೆಗೆದುಕೊಳ್ಳುವ ತೀರ್ಮಾನ ತೂಕವಾಗಿದ್ದಾಗ ಮಾತ್ರ ಉತ್ತಮ ಫಲಿತಾಂಶ ಲಭ್ಯವಾಗಲು ಸಾಧ್ಯ ಎಂದರು.

ಪ್ರಾಂಶುಪಾಲ ಪ್ರೊ| ಯೋಗೇಶ್‌, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಸಂಚಾಲಕ ಎಲ್‌. ಜೆ. ಮದುಕುಮಾರ್‌, ಕಾರ್ಯದರ್ಶಿ ಎಂ.ಸಿ.
ಮಲ್ಲಿಕಾರ್ಜುನ ಗೌಡ, ಪ್ರಾಧ್ಯಾಪಕರು ಮಲ್ಲಯ್ಯ, ಎಜಾಜ್‌ ಅಹ್ಮದ್‌, ಸಂಗಮೇಶ್‌, ಕುಸುಮ, ಡಾ| ಬಿ.ಎನ್‌. ರಂಗಪ್ಪ, ರವಿ ಕುಮಾರ್‌ ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.

ಓದಿ : ಬೀದರ್ ವಾಯು ಸೇನಾ ಕೇಂದ್ರಕ್ಕೆ ಐಎಎಫ್ ಮುಖ್ಯಸ್ಥ ಆರ್.ಡಿ ಮಾಥುರ ಭೇಟಿ

Advertisement

Udayavani is now on Telegram. Click here to join our channel and stay updated with the latest news.

Next