ಜಗಳೂರು: ಬುಡಕಟ್ಟು ಸಮುದಾಯಗಳ ಸಂಪ್ರದಾಯ ಆಚರಣೆಗಳಿಗೆ ತನ್ನದೆಯಾದ ಐತಿಹಾಸಿಕ ಹಿನ್ನೆಲೆಯಿದ್ದು, ಯುವಕರು ಅವುಗಳನ್ನು ಸಂರಕ್ಷಿಸುವ ಜತೆಗೆ ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದು ಕೆಪಿಸಿಸಿ ಎಸ್‌ಟಿ ವಿಭಾಗದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಹೇಳಿದರು.
ತಾಲೂಕಿನ ಕಾನನಕಟ್ಟೆ ಸಮೀಪ ಎತ್ತಪ್ಪನ ಜಾತ್ರಾ ಮೆರವಣಿಗೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗೊಲ್ಲರ ಹಟ್ಟಿಗಳ ಸಮುದಾಯದ ಆರಾಧ್ಯ ದೈವಗಳಾದ ಸಿದ್ದೇಶ್ವರ, ಕ್ಯಾತಪ್ಪ, ಜುಂಜಪ್ಪ ದೇವರುಗಳ ಎತ್ತಪ್ಪನ ಜಾತ್ರಾ ಪರವಿಗೆ ತೆರಳುವ ಪಲ್ಲಕ್ಕಿ ಹಾಗೂ ಎತ್ತಿನ ಬಂಡಿ ಮೆರವಣಿಗೆ ಸಂಪ್ರದಾಯ ವಿಶಿಷ್ಟವಾದದ್ದು ಎಂದರು.
ತಾಲೂಕಿನ ಚಿಕ್ಕಮ್ಮನಹಟ್ಟಿ, ಅಣಬೂರು, ಹನುಮಂತಾಪುರ, ತೋರಣಗಟ್ಟೆ, ಹಚ್ಚಂಗಿಪುರ, ಹಿರೇಮಲ್ಲನಹೊಳೆ, ಚಿಕ್ಕಮಲ್ಲನಹೊಳೆ, ಜಗಳೂರು ಗೊಲ್ಲರ ಹಟ್ಟಿಗಳ ಬುಡಕಟ್ಟು ಸಮುದಾಯದ ಪಲ್ಲಕ್ಕಿ ಹಾಗೂ ಎತ್ತಿನ ಗಾಡಿ ಮೆರವಣಿಗೆ ಪ್ರತಿ ವರ್ಷ ನೂರಾರು ಎತ್ತಿನ ಗಾಡಿಗಳು ಹೊರಡುತ್ತವೆ. ಪರವು ಮಹೋತ್ಸವಕ್ಕೆ ತೆರಳುವ ತಾಲೂಕಿನ ಯಾದವ ಸಮಾಜಕ್ಕೆ ಶುಭವಾಗಲಿ ಎಂದರು.
ಬುಡಕಟ್ಟು ಸಂಸ್ಕೃತಿ ಅನಾವರಣದ ಜೊತೆಗೆ ಮಕ್ಕಳ ಶಿಕ್ಷಣವೂ ಸಹ ಬಹುಮುಖ್ಯವಾಗಿದೆ. ಸಮುದಾಯದ ಆರ್ಥಿಕ ಶೈಕ್ಷಣಿಕ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ತಾಲೂಕಿನ ಯಾದವ ಸಮಾಜದ ಅಭಿವೃದ್ಧಿ ಎಲ್ಲರ ಸಹಕಾರ ಇರಲಿ ಎಂದರು.
ಹಿರಿಯ ಮುಖಂಡರಾದ ಚಿಕ್ಕಮ್ಮನಹಟ್ಟಿ ಚೇರ್ ಮನ್ ಕಾಟಪ್ಪ ಸೇರಿದಂತೆ ಹಲವರು ಇದ್ದರು.
ಓದಿ :
ಸೂರು ಸಹಿತ ಸಂತೆ ಕಟ್ಟೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ