Advertisement

ಅಡಕೆ ಹಾಳೆ ತಟ್ಟೆ; ಶಿಬಿರಾರ್ಥಿಗಳಿಗೆ ತರಬೇತಿ

03:46 PM Feb 15, 2021 | Team Udayavani |

ಹೊನ್ನಾಳಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪಟ್ಟಣದ ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಸಂಘಗಳ
ಸದಸ್ಯರ ಬಲವರ್ಧನೆಗಾಗಿ ನಬಾರ್ಡ್‌ ಎಲ್‌ಇಡಿಪಿ ಕಾರ್ಯಕ್ರಮದಡಿ ಅಡಿಕೆ ಹಾಳೆ ತಟ್ಟೆ ತಯಾರಿಕಾ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಬಸವರಾಜ ಅಂಗಡಿ ಮಾತನಾಡಿ, ತರಬೇತಿ ಪಡೆಯುತ್ತಿರುವ ಸಂಘದ ಸದಸ್ಯರು ಸ್ವಾವಲಂಬಿ ಜೀವನ ನಡೆಸಲು ತರಬೇತಿಯು ಅನುಕೂಲಕರವಾಗಿದೆ. ಯಾವುದೇ ಸ್ವ-ಉದ್ಯೋಗ ಆರಂಭ ಮಾಡಲು ತರಬೇತಿ ಮುಖ್ಯವಾಗಿರುತ್ತದೆ. ಶಿಬಿರಾರ್ಥಿಗಳು ತರಬೇತಿಯಲ್ಲಿ ಉತ್ತಮ ಜ್ಞಾನ ಪಡೆದುಕೊಂಡು ತಮ್ಮ ಜೀವನ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಶಿಬಿರಾರ್ಥಿ ಮಂಜುಳಾ ಮಾತನಾಡಿ, ನಮಗೆ ಉತ್ತಮವಾದ ಮಾಹಿತಿ ಮತ್ತು ಮಾರ್ಗದರ್ಶನ ದೊರೆತಿದ್ದು, ಇದರಿಂದ ತುಂಬಾ
ಅನುಕೂಲಕರವಾಗಿದೆ. ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಕೈಗೊಂಡು ಅಭಿವೃದ್ಧಿಯೆಡೆ ಸಾಗುತ್ತೇವೆ ಎಂದರು.

ಸಾಸ್ವೆಹಳ್ಳಿ ವಲಯದ ಸಾಸ್ವೆಹಳ್ಳಿ ಕಾರ್ಯಕ್ಷೇತ್ರದ ಕಿರಣ್‌ಕುಮಾರ್‌ ಮಾತನಾಡಿ, ಬ್ಯಾಂಕಿನಿಂದ ಹಾಗೂ ಇಲಾಖೆಗಳಿಂದ ಸಿಗುವಂತಹ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ರೀತಿಯಲ್ಲಿ ಅಡಿಕೆ ಹಾಳೆತಟ್ಟೆ ಘಟಕವನ್ನು ಮಾಡುವುದಾಗಿ ತಿಳಿಸಿದರು.

ಹೊನ್ನಾಳಿ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ವಿಠಲ ಮಾಳಗಿ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ. ಬಸವರಾಜ್‌, ಧಾರವಾಡ ಜ್ಞಾನ ವಿಕಾಸ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಂತೋಷ್‌ ರಾವ್‌, ಉಪನ್ಯಾಸಕಿ ವೈಷ್ಣವಿ ರೆಡ್ಡಿ, ಜಿಲ್ಲಾ ಎನ್‌ಆರ್‌ಎಲ್‌
ಎಂ ಸಮನ್ವಯಾಧಿ ಕಾರಿ ಧರ್ಮೆಂದ್ರ ಉಪಸ್ಥಿತರಿದ್ದರು. ಕೃಷಿ ಮೇಲ್ವಿಚಾರಕಿ ರಚನಾ ಸ್ವಾಗತಿಸಿದರು. ಜಿಲ್ಲಾ ಎನ್‌ ಆರ್‌ಎಲ್‌ಎಂ ಸಮನ್ವಯಾ ಧಿಕಾರಿ ಧರ್ಮೆಂದ್ರ ವಂದಿಸಿದರು. ಮಂಜುಳಾ ನಿರೂಪಿಸಿದರು.

Advertisement

ಓದಿ : ಉದ್ಯಾನಗಳಲ್ಲಿ ಕೇಳಿಸದ ಪ್ರೇಮಪಕ್ಷಿಗಳ ಕಲರವ

Advertisement

Udayavani is now on Telegram. Click here to join our channel and stay updated with the latest news.

Next