ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಎಂ.ಜಿ.ಈಶ್ವರಪ್ಪ ತಿಳಿಸಿದ್ದಾರೆ.
Advertisement
ಕುವೆಂಪು ಕನ್ನಡ ಭವನದಲ್ಲಿ ಭಾನುವಾರಸೌಹಾರ್ದ ಪ್ರಕಾಶನ ಹೊರ ತಂದ ಶಿಕ್ಷಣಯೋಗಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿಮಾತನಾಡಿದ ಅವರು, ಎಲ್ಲಾ ಕ್ಷೇತ್ರದಲ್ಲಿಯೋಗಿಗಳಂತೆ ಕೆಲಸ ಮಾಡಬೇಕು.ಮತ್ತೂಬ್ಬರಿಗೆ ಮಾರ್ಗದರ್ಶಕರು,ಪ್ರೇರಣಾದಾಯಿಗಳಾಗಬೇಕು ಎಂದುಆಶಿಸಿದರು.
ವೃತ್ತಿಯ ಮೇಲಿನ ಒಲವು, ಮಮತೆಯಿಂದಮತ್ತೆ ಶಿಕ್ಷಕ ವೃತ್ತಿಗೆ ವಾಪಾಸ್ಸಾಗಿರುವ ಅವರುಪ್ರಾಚಾರ್ಯರಾಗಿ ದಾವಣಗೆರೆ ಡಯಟ್‌ನಲ್ಲಿಸಾಕಷ್ಟು ಬದಲಾವಣೆಗೆ ಕಾರಣಕರ್ತರಾಗಿದ್ದಾರೆಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Related Articles
ಕೆಲಸ ಮಾಡಿದಂತಹವರು ಇತಿಹಾಸ ನಿರ್ಮಾಣಮಾಡುತ್ತಾರೆ. ಅಂತಹವರು ಶ್ರೇಷ್ಠ ವ್ಯಕ್ತಿಗಳಾಗಿಹೊರ ಹೊಮ್ಮುತ್ತಾರೆ. ಅಂತಹ ಶ್ರೇಷ್ಠ ವ್ಯಕ್ತಿಗಳಾಗಿ,ಇತಿಹಾಸ ನಿರ್ಮಾಣ ಮಾಡುವಂತಹ ವ್ಯಕ್ತಿತ್ವವನ್ನಬೆಳೆಸಿಕೊಳ್ಳುವಂತಾಗಬೇಕು. ಹಣ, ಕಟ್ಟಡ,ಅಧಿಕಾರಕ್ಕಿಂತಲೂ ಅಂತರಂಗದಲ್ಲಿನ ಮೌಲ್ಯವೇಉತ್ತಮವಾದುದು ಎಂದು ತಿಳಿಸಿದರು.ಉತ್ಕೃಷ್ಟ ಸಮಾಜವನ್ನ ನಿರ್ಮಾಣಮಾಡುವಂತಹ ಶಕ್ತಿ ಹೊಂದಿರುವ ಶಿಕ್ಷಕ ವೃತ್ತಿಅತೀ ಶ್ರೇಷ್ಠವಾದ ವೃತ್ತಿ. ಶಿಕ್ಷಕರು ಪಠ್ಯದ ಜೊತೆಗೆಅನುಭವ, ಮೌಲ್ವಿಕ, ಜೀವನದ ಶಿಕ್ಷಣ ನೀಡಿದಾಗವಿದ್ಯಾರ್ಥಿ ಸಮುದಾಯದ ಸರ್ವತೋಮುಖಅಭಿವೃದ್ಧಿ ಸಾಧ್ಯ. ಶಿಕ್ಷಕರು ದಾರಿ ತಪ್ಪಿ ನಡೆದರೆರಾಷ್ಟ್ರದ ಭವಿಷ್ಯಕ್ಕೆ ಧಕ್ಕೆ ಆಗುತ್ತದೆ ಎಂದು ಆತಂಕ
ವ್ಯಕ್ತಪಡಿಸಿದರು.
Advertisement
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷ ಪ್ರೊ|ಎಸ್.ಬಿ. ರಂಗನಾಥ್ ಅಧ್ಯಕ್ಷತೆವಹಿಸಿದ್ದರು. ಡಾ| ಎಚ್.ವಿ. ವಾಮದೇವಪ್ಪಅಭಿನಂದನಾ ಗ್ರಂಥ ಕುರಿತು ಮಾತನಾಡಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷಬಿ. ವಾಮದೇವಪ್ಪ, ಸಿದ್ದಗಂಗಾ ವಿದ್ಯಾಸಂಸ್ಥೆಮುಖ್ಯಸ್ಥೆ ಜಸ್ಟಿನ್ ಡಿಸೌಜ, ಪ್ರೊ|ಸಿ.ಎಚ್.ಮುರಿಗೇಂದ್ರಪ್ಪ, ಎಸ್.ಟಿ. ಶಾಂತಗಂಗಾಧರ್,ಶಶಿಕಲಾ ಶಂಕರಮೂರ್ತಿ, ಎಚ್.ಜಿ.ರಾಮೋಜಪ್ಪ ಮತ್ತು ಎಚ್.ಕೆ. ಲಿಂಗರಾಜ್,ಲೀಲಾವತಿ ಲಿಂಗರಾಜ್ ಇತರರು ಇದ್ದರು.
ಓದಿ :ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ: ಉಮೇಶ್ ಕತ್ತಿ ಸ್ಪಷ್ಟನೆ