Advertisement

ಹೆಣ್ಣು ಮಗು ಮನೆಯ ನಂದಾದೀಪ

03:59 PM Jan 25, 2021 | Team Udayavani |

ಹೊನ್ನಾಳಿ: ಕತ್ತಲಲ್ಲಿ ಬೆಳಕು ಎಷ್ಟು ಮುಖ್ಯವೋ ಅದೇ ರೀತಿ ಮನೆಗೆ ಹೆಣ್ಣು ಮಗುವೂ ಅಷ್ಟೇ ಮುಖ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇಲಿಮಲ್ಲೂರು ಗ್ರಾಮದ ಉಮಾ ಪ್ರಗತಿ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಹೆಣ್ಣುಮಗು ಹುಟ್ಟಿದರೆ ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದ ಸಮಾಜ ಈಗ ಹೆಣ್ಣು ಮಗುವನ್ನು ಮನೆಯ ನಂದಾದೀಪದ ರೀತಿ ನೋಡುತ್ತಿದ್ದಾರೆ ಎಂದರು.
ಸಮಾಜದಲ್ಲಿ ತಾಯಿಗೆ ಸಿಗುವ ಗೌರವ ಎಲ್ಲಿಯೂ ಸಿಗುವುದಿಲ್ಲ. ತಾಯಿ ಗುರುಮಾತೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವುದು ತಾಯಿ ಮಾತ್ರ. ಜೀವನದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರುಗಳು ಇರಬೇಕು. ತಾಯಿಯೇ ಮೊದಲ ಗುರು ಹಾಗಾಗಿ ಮನೆಯಿಂದ ಬರುವಾಗ
ಮಕ್ಕಳು ತಾಯಿಗೆ ನಮಸ್ಕರಿಸಿ ಬರಬೇಕು. ಹೇಳಿದರಲ್ಲದೇ ತಾಯಿ ಹಾಕಿಕೊಟ್ಟ ಮಾರ್ಗದರ್ಶದಲ್ಲಿ ಹೆಜ್ಜೆ ಇಡುವಂತೆ
ತಿಳಿಸಿದರು.
ಜಿಪಂ ಸದಸ್ಯ ಸುರೇಂದ್ರನಾಯ್ಕ, ತಾಪಂ ಉಪಾಧ್ಯಕ್ಷ ಕೆ.ಎಲ್‌.ರಂಗನಾಥ್‌, ಎಂಪಿಎಂಸಿ ಅಧ್ಯಕ್ಷ ಸುರೇಶ್‌, ಎಸ್ಟಿ ಮೋರ್ಚ ತಾಲೂಕು
ಅಧ್ಯಕ್ಷರಾದ ಉಮೇಶ್‌ ಇದ್ದರು.
ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ನಿರ್ಮಾಣಕ್ಕೆ ಬೇಲಿಮಲ್ಲೂರು
ಗ್ರಾಮದಲ್ಲಿ ಬೃಹತ್‌ ಬ್ಯಾನರ್‌ ಹಾಕಿದ್ದು, ರಾಮನ ಭಾವಚಿತ್ರಕ್ಕೆ ಶಾಸಕರು ಪುಷ್ಪ ನಮನ ಸಲ್ಲಿಸಿದರು. ರಾಮಮಂದಿರ ನಿರ್ಮಾಣಕ್ಕೆ ಜನರು ಕೈಲಾದಷ್ಟು ದೇಣಿಗೆ ನೀಡುವಂತೆ ಮನವಿ ಮಾಡಿದರು.

Advertisement

ಓದಿ: ಆನ್ ಲೈನ್ ಕ್ಲಾಸ್ ಗೂ ಹಾಜರಾತಿ ಕಡ್ಡಾಯ ಮಾಡುವ ಕುರಿತು ನಿರ್ಧಾರ: ಅಶ್ವಥ್ ನಾರಾಯಣ್

Advertisement

Udayavani is now on Telegram. Click here to join our channel and stay updated with the latest news.

Next