Advertisement

ಮೌಡ್ಯ ಹೆಚ್ಚಳ ಉತ್ತಮ ಬೆಳವಣಿಗೆ ಅಲ್ಲ

03:39 PM Feb 08, 2021 | Team Udayavani |

ಹರಿಹರ: ಸಮಾಜದಲ್ಲಿ ದಿನೇ ದಿನೇ ವೈಜ್ಞಾನಿಕ, ವೈಚಾರಿಕ ಮನೋಭಾವ ಕ್ಷೀಣಿಸಿ ಮೂಢನಂಬಿಕೆ ಹೆಚ್ಚುತ್ತಿದೆ ಎಂದು ಭದ್ರಾವತಿಯ ಸರ್‌.ಎಂ.ವಿ ಕಾಲೇಜಿನ ಪ್ರಾಧ್ಯಾಪಕ ಡಾ| ಡಿ. ಶಿವಲಿಂಗೇಗೌಡ ಆತಂಕ ವ್ಯಕ್ತಪಡಿಸಿದರು.

Advertisement

ಸಾಹಿತ್ಯ ಸಂಗಮ ವತಿಯಿಂದ ನಗರದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಹರಿಹರಶ್ರೀ ಪ್ರಶಸ್ತಿ ಪ್ರಧಾನ ಮತ್ತು
ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶವಾಸಿಗಳು ಮೌಡ್ಯ ತೊರೆದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಇಂದಿನ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ.

ಬಹುತೇಕ ಮಾಧ್ಯಮಗಳು ಪ್ರಜಾಪ್ರಭುತ್ವ, ಸಂವಿಧಾನಿಕ ಮೌಲ್ಯಗಳನ್ನು ಪಸರಿಸುವ ಬದಲು ಮೌಡ್ಯಗಳನ್ನು ಬಿತ್ತುತ್ತಿವೆ ಎಂದು ವಿಷಾದಿಸಿದರು. ಯಾವ ದೇಶದಲ್ಲಿ ಸಾಹಿತಿಗಳು ಮೇಲ್ಪಂಕ್ತಿಯಲ್ಲಿರುತ್ತಾರೋ ಆ ದೇಶ ಪ್ರಗತಿಯಲ್ಲಿರುತ್ತದೆ. ಎಲ್ಲಿ ಕೇವಲ ರಾಜ ಕಾರಣಿಗಳು ಮೇಲ್ಪಂಕ್ತಿಯ ಲ್ಲಿರುತ್ತಾರೋ ಆ ದೇಶ ಏನಾಗುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಎಂದರು.

ಹರಿಹರಶ್ರೀ ರಾಜ್ಯ ಮಟ್ಟದ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಡಾ| ಪ್ರಕಾಶ್‌ ಗ. ಖಾಡೆ ಮಾತನಾಡಿ, ಸಾಹಿತಿಯಾದವನಿಗೆ ಸಾಮಾಜಿಕ ಕಳಕಳಿ, ಸೃಜನಶೀಲತೆ ಇದ್ದರೆ ಮಾತ್ರ ಮೌಲ್ಯಯುತ ಕವನ ರಚನೆ ಸಾಧ್ಯ. ಸಾಹಿತ್ಯ ಸಂಗಮ ಸಂಸ್ಥೆ ರಾಜ್ಯ ಮಟ್ಟದಲ್ಲಿ ಕವನ ಸಂಕಲನಗಳನ್ನು ತರಿಸಿಕೊಂಡು ಮೌಲ್ಯಮಾಪಕರಿಂದ ಆಯ್ಕೆ ಮಾಡಿಸಿ ಪ್ರಶಸ್ತಿ ನೀಡುವ ಪ್ರಕ್ರಿಯೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೊ| ಎಚ್‌.ಎ. ಭಿವರ್ತಿಮಠ ಮಾತನಾಡಿ, ಬೆಂಗಳೂರಿನಲ್ಲಿ ಸಾಹಿತಿ ಭಗವಾನ್‌ ಮುಖಕ್ಕೆ ಮಸಿ ಬಳಿದ ಘಟನೆ ಸಾಹಿತಿಗಳ ವಾಕ್‌ ಸ್ವಾತಂತ್ರದ ಮೇಲೆ ನಡೆದ ಪ್ರಹಾರ. ಸಲ್ಲದ ಕಾರಣಗಳನ್ನು ನೀಡಿ ಇಂತಹ ಹೇಯ ಕೃತ್ಯವನ್ನು ಸಮರ್ಥಿಸುತ್ತಿರುವುದು ಶೋಚನೀಯ ಎಂದರು.

Advertisement

ಕಾರ್ಮಿಕ ಮುಖಂಡ ಎಚ್‌. ಕೆ. ಕೊಟ್ರಪ್ಪ, ಕನ್ನಡ ಪರ ಹೋರಾಟಗಾರ ಎಕ್ಕೆಗೊಂದಿ ರುದ್ರೇಗೌಡರಿಗೆ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಸಿ.ಎನ್‌. ಹುಲಿಗೇಶ್‌, ಸಾಹಿತಿ ಜೆ. ಕಲೀಂ ಭಾಷ, ಪ್ರೊ| ಸಿ.ವಿ.ಪಾಟೀಲ್‌, ಎಚ್‌. ನಿಜಗುಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಪ್ಪ, ಸದಾನಂದ ಕುಂಬಳೂರು, ಕೊಟ್ರಪ್ಪ, ಅಜೀಜ್‌ ರೆಹಮಾನ್‌, ಹುಲಿಕಟ್ಟೆ ಚನ್ನಬಸಪ್ಪ, ಭೂಮೇಶ್‌, ಎಂ.ವಿ. ಹೊರಕೇರಿ, ಪಿ.ಎಂ. ಇಂದೂಧರ ಸ್ವಾಮಿ, ಡಿ.ಟಿ. ತಿಪ್ಪಣ್ಣ ರಾಜು, ಪರಶುರಾಮ್ ಅಂಬೇಕರ್‌, ಸುಬ್ರಹ್ಮಣ್ಯ ನಾಡಿಗೇರ್‌, ನಾಗರತ್ನಮ್ಮ, ಶಾಂತಾ ಹುಲ್ಯಾಳಮಠ, ಸುಜಾತಾ ಗೋಪಿನಾಥ್‌, ಗಂಗಮ್ಮ ಸುರೇಶಪ್ಪ, ರಿಯಾಜ್‌ ಅಹ್ಮದ್‌, ಬಿ.ಬಿ. ರೇವಣ ನಾಯ್ಕ, ಡಿ.ಎಂ. ಮಂಜುನಾಥಯ್ಯ ಮತ್ತಿತರರು ಇದ್ದರು.

ಓದಿ: 31ನೇ ಜಿಲ್ಲೆಯಾಗಿ ವಿಜಯನಗರ: ಅಧಿಕೃತ ಘೋಷಣೆ ಮಾಡಿದ ರಾಜ್ಯ ಸರ್ಕಾರ

Advertisement

Udayavani is now on Telegram. Click here to join our channel and stay updated with the latest news.

Next