Advertisement

ಸರ್ಕಾರದಿಂದ ರೈತ-ಕಾರ್ಮಿಕರ ಕಡೆಗಣನೆ

03:10 PM Feb 08, 2021 | Team Udayavani |

ದಾವಣಗೆರೆ: ಸರ್ಕಾರಗಳು ರೈತ-ಕಾರ್ಮಿಕ ಕಾನೂನು ತಿದ್ದುಪಡಿಯ ಮೂಲಕ ರೈತ-ಕಾರ್ಮಿಕರ ಜೀವನವನ್ನೇ ಸಮಾ ಧಿ ಕಟ್ಟಲು ಹೊರಟಿವೆ ಎಂದು ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆವರಗೆರೆ ಎಚ್‌.ಜಿ. ಉಮೇಶ್‌ ಆರೋಪಿಸಿದರು.

Advertisement

ನ್ಯಾಮತಿ ತಾಲೂಕಿನ ಗುಡಿಹಳ್ಳಿಯಲ್ಲಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಶ್ರಮದ ಪ್ರತಿಫಲದಿಂದ ಕೂಡಿ ಕಟ್ಟಿರುವ ಹಣ ಇತರರ ಪಾಲಾಗುವ ಹಂತದಲ್ಲಿದೆ ಎಂದರು.

ಹಲವಾರು ವರ್ಷಗಳಿಂದ ಸಲ್ಲಿಸಿರುವ ಅರ್ಜಿಗಳನ್ನು ಕಲ್ಯಾಣ ಮಂಡಳಿ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದೆ ವಿಳಂಬ ಮಾಡುತ್ತಿದೆ. ಕಾರ್ಮಿಕ ಇಲಾಖೆಯ ದ್ವಂದ್ವ ನೀತಿ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು. ಪಿ.ಕೆ. ಲಿಂಗರಾಜ್‌, ಸಂಘದ ಜಿಲ್ಲಾಧ್ಯಕ್ಷ ವಿ. ಲಕ್ಷ್ಮಣ, ಉಪಾಧ್ಯಕ್ಷ ಭೀಮಾರೆಡ್ಡಿ, ಗ್ರಾಮ ಶಾಖೆಯ ಪದಾಧಿ ಕಾರಿಗಳಾದ ಎ.ಕೆ. ರಾಜಪ್ಪ, ಹನುಮಂತಪ್ಪ, ರವಿಕುಮಾರ್‌, ಭರತ್‌, ನಿಂಗಪ್ಪ, ಡಿ. ಮೈಲಾರಪ್ಪ, ನಿಂಗಪ್ಪ, ನರಸಿಂಹ, ವೀರಣ್ಣ ಗೌಡ, ಲೋಕೇಶ್‌, ಫಯಾಜ್‌ ಅಹ್ಮದ್‌ ಇದ್ದರು. ಹನುಮಂತಪ್ಪ ಸ್ವಾಗತಿಸಿದರು. ಶಿಕ್ಷಕ ರಾಜಪ್ಪ ನಿರೂಪಿಸಿದರು.

ಓದಿ: ಕೃಷಿ ಕಾಯ್ದೆ; ಮನಮೋಹನ್ ಸಿಂಗ್ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ಗೆ ಪ್ರಧಾನಿ ಮೋದಿ ತಿರುಗೇಟು

Advertisement

Udayavani is now on Telegram. Click here to join our channel and stay updated with the latest news.

Next