Advertisement

ಸಾಹಿತ್ಯ ಕ್ಷೇತ್ರಕ್ಕೆ ಜಗಳೂರು ಕೊಡುಗೆ ಅಪಾರ

02:58 PM Feb 08, 2021 | Team Udayavani |

ಜಗಳೂರು: ತಾಲೂಕು ಬರದ ನಾಡು ಎಂಬ ಹಣೆಪಟ್ಟಿ ಹೊಂದಿದ್ದರೂ ಸಹ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಮಂಜುನಾಥ ಕುರ್ಕಿ ಹೇಳಿದರು.

Advertisement

ಹತ್ತನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಪಟ್ಟಣದ ಹಿರಿಯ ಸಾಹಿತಿ ಎನ್‌.ಟಿ. ಯರ್ರಿಸ್ವಾಮಿ ಅವರಿಗೆ ಅ ಧಿಕೃತ ಆಮಂತ್ರಣ ನೀಡಿ ಅವರು ಮಾತನಾಡಿದರು.

ಬ್ಯಾಂಕ್‌ನಲ್ಲಿ ನೌಕರಿ ಹೊಂದಿದ್ದರೂ ಯರ್ರಿಸ್ವಾಮಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಮಾಜಿಕ ಮತ್ತು ಸಮಕಾಲಿನ ಸಮಸ್ಯೆಗಳನ್ನು ತುಂಬಾ ಹತ್ತಿರದಿಂದ ಕಂಡವರು. ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅವರನ್ನು ಸರ್ವಾನುಮತದಿಂದ ಆಯ್ಕೆ
ಮಾಡಲಾಗಿದೆ ಎಂದರು.

ನಿಕಟಪೂರ್ವ ಅಧ್ಯಕ್ಷ ಉಜ್ಜಿನಪ್ಪ ಮಾತನಾಡಿ, ಯರ್ರಿಸ್ವಾಮಿಯವರು ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶೀಲತೆಯಿಂದ ಸಾಹಿತ್ಯ ಮತ್ತು ಸೃಜನಶೀಲ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಜಗಳೂರು ತಾಲೂಕು ಆರ್ಥಿಕ, ಶೈಕ್ಷಣಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಮತ್ತಷ್ಟು ಉನ್ನತ ಸಾಧನೆ ಮಾಡಬೇಕಿದೆ ಎಂದು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ನಿಯೋಜಿತ ಅಧ್ಯಕ್ಷ ಎನ್‌.ಟಿ. ಯರ್ರಿಸ್ವಾಮಿ ಮಾತನಾಡಿ, ಬಾಲ್ಯದಲ್ಲಿ ಪ್ರಾಯೋಗಿಕವಾಗಿ ಕಂಡಂತಹ ಹಲವು ಅನುಭವಗಳೇ ಸಾಹಿತ್ಯ ರಚನೆಗೆ ತಳಹದಿಯಾದವು. ಬ್ಯಾಂಕ್‌ ಅಧಿಕಾರಿಯಾಗಿದ್ದರೂ ಸಾಹಿತ್ಯದ ಆಭಿರುಚಿ ಬೆಳೆಸಿಕೊಂಡೆ. ನನಗೆ ದೊರೆತ ಅವಕಾಶವನ್ನು ಸಮರ್ಥ ಹಾಗೂ ಸಮರ್ಪಕವಾಗಿ ಬಳಸಿಕೊಂಡು ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಡುತ್ತೇನೆ ಎಂದರು.
ಹಿರಿಯ ಸಾಹಿತಿ ಬಸವಪ್ಪ ಮಾತನಾಡಿದರು.

Advertisement

ಬಯಲಾಟ ಅಕಾಡೆಮಿ ಸದಸ್ಯ ಎನ್‌.ಎಸ್‌. ರಾಜ್‌, ಷಣ್ಮುಖಪ್ಪ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ದಿಂಡೆಪ್ಪ, ಮೋಹನ್‌, ಬಿ.ಸಿ .ಮಲ್ಲಿಕಾರ್ಜುನ್‌, ಸಿ.ಎಂ. ಹೊಳೆ ಬಸವೇಶ, ಬಾಬು ರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷ ಹಜರತ್‌ ಅಲಿ, ಎಂ.ಡಿ. ಆಂಜನೇಯ, ಡಿ.ಟಿ. ಆದಂ, ಸುಜಾತಾ ಮತ್ತಿತರರು ಇದ್ದರು.

ಓದಿ: ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಬಿಜೆಪಿ ಸಮಿತಿಗಿಲ್ಲ: ಈಶ್ವರಪ್ಪ

Advertisement

Udayavani is now on Telegram. Click here to join our channel and stay updated with the latest news.

Next