ಬೆಂಗಳೂರು: ನಗರದ ಕೆಂಪೇಗೌಡ ರಸ್ತೆಯ ಜನಪ್ರಿಯ ಪೋತೀಸ್ ವಸ್ತ್ರಭಂಡಾರ, ಗ್ರಾಹಕರಿಗೆ “ಸಿಹಿ ಕೊಡುಗೆ’ ನೀಡುವ ಮೂಲಕ ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದೆ.
ಭಾನುವಾರ ಮಳಿಗೆಯಲ್ಲಿ ಹಮ್ಮಿಕೊಂಡಿದ್ದ ಸಿಹಿ ಕೊಡುಗೆ ನೀಡುವ ಕಾರ್ಯಕ್ರಮವನ್ನು ಬಿಬಿಎಂಪಿ ಸದಸ್ಯೆ ಲತಾ ನವೀನ್ ಕುಮಾರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಹಲವು ಗ್ರಾಹಕರಿಗೆ ಸಿಹಿ ತಿನಿಸುಗಳ ಬಾಕ್ಸ್ ನೀಡುವ ಮೂಲಕ ಸಿಹಿ ದಸರಾ ಮತ್ತು ಸಿಹಿ ದೀಪಾವಳಿ ಮಾರಾಟಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲತಾ ಅವರು, ನಮ್ಮ ಗಾಂಧಿನಗರ ವಾರ್ಡ್‌ನಲ್ಲಿ ಬೃಹತ್ ಪೋತೀಸ್ ಮಳಿಗೆ ಆರಂಭವಾಗಿರುವುದು ನಮಗೆ ಬಹಳ ಸಂತೋಷ ತಂದಿದೆ. ಇದು ಈ ಭಾಗದ ಜನತೆಗೆ ಮಾತ್ರವಲ್ಲದೆ, ಇಡೀ ಬೆಂಗಳೂರಿನ ನಾಗರಿಕರಿಗೆ ಬಹಳ ಅನುಕೂಲವಾಗಿದೆ. ಸಂಪೂರ್ಣ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ರೀತಿ ಆಧುನಿಕ ಹಾಗೂ ಸಾಂಪ್ರದಾಯಿಕ ಉಡುಗೆ, ತೊಡುಗೆಗಳು ಒಂದೇ ಸೂರಿನಡಿ ದೊರೆಯುತ್ತವೆ.
ಮಕ್ಕಳಿಂದ ಹಿಡಿದು ಎಲ್ಲ ವಯಸ್ಸಿನವರಿಗೂ ನಾನಾ ವಿಧದ ವಸ್ತ್ರಗಳ ಬೃಹತ್ ಸಂಗ್ರಹ ಇಲ್ಲಿದೆ ಎಂದರು. ಪೋತೀಸ್ ಮಳಿಗೆಯ ಹಿರಿಯ ಜನರಲ್ ಮ್ಯಾನೇಜರ್ ಕೃಷ್ಣಕುಮಾರ್ ಮಾತನಾಡಿ, ಶತಮಾನದ ಹೊಸ್ತಿಲಿನಲ್ಲಿರುವ ಪೋತೀಸ್ ದಕ್ಷಿಣ ಭಾರತದಲ್ಲಿ 15 ಶಾಖೆಗಳನ್ನು ತೆರೆದಿದೆ.
ಬೆಂಗಳೂರಿನ ಈ ಶಾಖೆ 14ನೇಯದಾಗಿದ್ದು, ಇಲ್ಲಿನ ಗ್ರಾಹಕರು ನಮ್ಮನ್ನು ಬಹಳ ಆದರದಿಂದ ಕಾಣುತ್ತಿದ್ದಾರೆ. ನಮ್ಮಲ್ಲಿ ರೇಷ್ಮೆ ಸೀರೆ, ಡಿಸೈನರ್ ಮತ್ತು ಫ್ಯಾನ್ಸಿ ಸೀರೆಗಳ ದೊಡ್ಡ ಸಂಗ್ರಹವಿದೆ. ಡ್ರೆಸ್ ಮೆಟೀರಿಯಲ್ ಮತ್ತು ಎಲ್ಲ ಬ್ರಾಂಡ್‌ನ ರೆಡಿಮೇಡ್ ಬಟ್ಟೆಗಳ ಬೃಹತ್ ಸಂಗ್ರಹವಿದೆ ಎಂದರು.
ಪ್ರಥಮ ಬಾರಿಗೆ ನಮ್ಮ ಗ್ರಾಹಕರೊಡನೆ ಆಚರಿಸುತ್ತಿರುವ ದಸರಾ-ದೀಪಾವಳಿ ಹಬ್ಬವಿದು. ಈ ಹಬ್ಬಗಳು ಜನತೆ ಜೀವನದಲ್ಲಿ ಸಿಹಿ ದಸರಾ ಹಾಗೂ ಸಿಹಿ ದೀಪಾವಳಿ ಆಗಲೆಂಬ ಇಚ್ಛೆಯಿಂದ ಸಿಹಿ ಹಂಚಿಕೊಳ್ಳುವ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಪೋತೀಸ್‌ಗೆ ದಸರಾ ಹಬ್ಬದ ಶುಭಾಶಯ ಕೋರಿದರು. ಪೋತೀಸ್‌ನ ಎಚ್‌ಆರ್ ಮ್ಯಾನೇಜರ್ ಸರಣವನ್, ಲಕ್ಷ್ಮಿ, ರಶೀದ್, ದೀಪಕ್ ಇತತರು ಉಪಸ್ಥಿತರಿದ್ದರು.