Advertisement

ಮಂಗಳೂರು ಏರ್ ಪೋರ್ಟ್ ನಲ್ಲಿ ಮೇಳೈಸಿದ ದಸರಾ ಸಂಭ್ರಮ 

10:17 AM Oct 19, 2018 | |

ಬಜ್ಪೆ: ನವರಾತ್ರಿ ಸಂಭ್ರಮ ದೇಶದೆಲ್ಲೆಡೆ ರಂಗೇರಿದೆ. ಎಲ್ಲಿ ಕಂಡರೂ ದೇವಿ ಪೂಜೆ, ಹಬ್ಬದ ವಾತಾವರಣ.  ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ವಿನೂತನ ರೀತಿಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲಾಯಿತು. ಗುರುವಾರ ಮಹಾನವಮಿ ಹಿನ್ನಲೆಯಲ್ಲಿ ಭಾರತೀಯ ವಿಮಾನ ಯಾನ ಪ್ರಾಧಿಕಾರ ಮತ್ತು ಮಂಗಳೂರು ವಿಮಾನ ನಿಲ್ದಾಣ ವತಿಯಿಂದ ತುಳುನಾಡ ಸಂಪ್ರದಾಯದಂತೆ ದಸರಾ ಆಚರಣೆ ನಡೆಯಿತು. 

Advertisement


ದಸರಾ ಹಿನ್ನಲೆಯಲ್ಲಿ ವಿಮಾನ ನಿಲ್ದಾಣವನ್ನು ಬಣ್ಣದ ಬೆಳಕಿಂದ ಅಲಂಕಾರಗೊಳಿಸಲಾಗಿತ್ತು. ನಿಲ್ದಾಣಕ್ಕೆ ಆಗಮಿಸುವ ಪ್ರವಾಸಿಗರಿಗೆ ತುಳುನಾಡ ಸಂಸ್ಕೃತಿ ಪರಿಚಯಿಸುವ ಹುಲಿ ವೇಷ ಪ್ರಮುಖ ಆಕರ್ಷಣೆಯಾಗಿತ್ತು. ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಯಕ್ಷಗಾನ, ಸಾಂಪ್ರದಾಯಿಕ ನ್ರತ್ಯ, ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿ  ವಿಮಾನ ನಿಲ್ದಾಣದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next