Advertisement

ಅಭಿಮಾನಿಗಳ ಸಮ್ಮುಖದಲ್ಲಿ ದರ್ಶನ್‌ ಹುಟ್ಟುಹಬ್ಬ

10:40 AM Feb 17, 2018 | |

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ಶುಕ್ರವಾರ ತಮ್ಮ 42 ನೇ ಹುಟ್ಟುಹಬ್ಬವನ್ನು ತಮ್ಮ ಅಪಾರ ಅಭಿಮಾನಿಗಳೊಂದಿಗೆ ಆಚರಿಸಿಕೊಂಡರು. ಗುರುವಾರ ಮಧ್ಯರಾತ್ರಿಯಿಂದಲೇ ದರ್ಶನ್‌ ಅವರ ಮನೆಯ ಮುಂದೆ ಸಾವಿರಾರು ಮಂದಿ ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು.

Advertisement

ಅಭಿಮಾನಿಗಳನ್ನು ಕಂಡು ಖುಷಿಗೊಂಡ ದರ್ಶನ್‌, ಅವರೆಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ, ಅವರೊಂದಿಗೆ ಸೆಲ್ಫಿಗೆ ಫೋಸ್‌ ಕೊಟ್ಟು, ಅಭಿಮಾನಿಗಳು ತಂದಿದ್ದ, ಕೇಕ್‌ ಕತ್ತರಿಸಿ ಸಂತಸ ವ್ಯಕ್ತಪಡಿಸಿದರಲ್ಲದೆ, ಅಭಿಮಾನಿಗಳ ಪ್ರೀತಿಯ ಅಭಿಮಾನವನ್ನು ಕೊಂಡಾಡಿದರು.

ಶುಕ್ರವಾರ ಬೆಳಗ್ಗೆಯಿಂದಲೇ ಅಭಿಮಾನಿಗಳು ದರ್ಶನ್‌ ಅವರಿಗಾಗಿ ದೊಡ್ಡ ಕೇಕ್‌ ಮತ್ತು ಹಾರ ಹಿಡಿದು ಅವರ ಮನೆ ಎದುರು ಕಾದು ನಿಂತಿದ್ದರು. ಎಲ್ಲರತ್ತ ಕೈ ಬೀಸಿದ ದರ್ಶನ್‌, ಅವರೊಂದಿಗೆ ಕೆಲ ಕ್ಷಣ ಕಳೆದು, ಅವರು ತಂದಿದ್ದ ಕೇಕ್‌ ಕತ್ತರಿಸಿ, ತಿನ್ನಿಸಿ, ತಿನ್ನುವ ಮೂಲಕ ಸಂಭ್ರಮಿಸಿದರು.

ಈ ವೇಳೆ, ದರ್ಶನ್‌ ಅವರ ತಾಯಿ ಮೀನಾ ತೂಗುದೀಪ, ಸಹೋದರ ದಿನಕರ್‌ ತೂಗುದೀಪ, ಸೇರಿದಂತೆ ಚಿತ್ರರಂಗದ ಅನೇಕರು ದರ್ಶನ್‌ ಅವರ ಮನೆಗೆ ಹೋಗಿ ಶುಭಾಶಯ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next