ಕಲ್ಯಾಣ್: ಕಳೆದ ಒಂದೂವರೆ ದಶಕಗಳಿಂದ ಕನ್ನಡಪರ ಸೇವೆಯಲ್ಲಿ ತೊಡಗಿರುವ ಕಲ್ಯಾಣ್ ಕರ್ನಾಟಕ ಸಂಘದ ನೂತನ ಅಧ್ಯಕ್ಷೆಯಾಗಿ ದರ್ಶನಾ ಸೋನ್ಕರ್ ಅವರು ಆಯ್ಕೆಯಾಗಿದ್ದು, ಸಂಘದ ಪ್ರಪ್ರಥಮ ಮಹಿಳಾಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆ. 19 ರಂದು ಸಂಘದ ಕಾರ್ಯಾಲಯದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಗೋಪಾಲ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಮುಂದಿನ ಎರಡು ವರ್ಷಗಳ ಅವಧಿಗೆ ದರ್ಶನಾ ಸೋನ್ಕರ್ ಅವರನ್ನು ನೂತನ ಅಧ್ಯಕ್ಷೆಯನ್ನಾಗಿ ನೇಮಿಸಲಾಯಿತು.
ಉಪಾಧ್ಯಕ್ಷರುಗಳಾಗಿ ಕೆ. ಎನ್. ಸತೀಶ್ ಮತ್ತು ನ್ಯಾಯವಾದಿ ನೂತನಾ ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಪ್ರಕಾಶ್ ಬನಾರೆ, ಗೌರವ ಕೋಶಾಧಿಕಾರಿಯಾಗಿ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಪ್ರಶಾಂತಿ ಶೆಟ್ಟಿ ಅವರು ಆಯ್ಕೆಯಾದರು. ಜತೆ ಕಾರ್ಯದರ್ಶಿಗಳಾಗಿ ಅಹಲ್ಯಾ ರಮೇಶ್ ಶೆಟ್ಟಿ, ಶ್ರೀಕಾಂತ್ ಸೋನ್ಕರ್, ಗಣೇಶ್ ಪೈ, ಸ್ವರ ಕಲಾವೇದಿಕೆಯ ಕಾರ್ಯಾಧ್ಯಕ್ಷರಾಗಿ ಗೀತಾ ಪೂಜಾರಿ ಮತ್ತು ಶ್ರೀಧರನ್ ಹಿಂದುಪುರ, ಸದಸ್ಯರುಗಳಾಗಿ ಜಯಂತ್ ದೇಶು¾ಖ್, ವೀಣಾ ಕಾಮತ್, ಹೇಮಲತಾ ನರಸಿಂಹನ್, ಉಷಾ ಶೆಟ್ಟಿ, ವಿನಯಾ ಶೆಟ್ಟಿ, ಕೆ. ಚಂದ್ರಶೇಖರ ಹಾಗೂ ಸಲಹೆಗಾರರುಗಳಾಗಿ ಡಾ| ಸುರೇಂದ್ರ ಎ. ಶೆಟ್ಟಿ, ಗುರುದೇವ ಭಾಸ್ಕರ ಶೆಟ್ಟಿ, ರಾಮದೇವ ಶೆಟ್ಟಿ, ಸಂಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ, ಇಂ. ಟಿ. ಎಸ್. ಉಪಾಧ್ಯಾಯ, ಗೋಪಾಲ್ ಹೆಗ್ಡೆ ಅವರನ್ನು ಆಯ್ಕೆ ಮಾಡಲಾಯಿತು.
ಗೌರವ ಕಾರ್ಯದರ್ಶಿ ನೂತನಾ ಹೆಗ್ಡೆ ಅವರು ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಯು. ಡಿ. ಮಲ್ಯ ಅವರು ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಲೆಕ್ಕ ಪರಿಶೋಧಕರಾಗಿ ಶಂಕರ ನಾರಾಯಣ ಅವರನ್ನು ನೇಮಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಗೋಪಾಲ ಹೆಗ್ಡೆ, ಸಂಸ್ಥಾಪಕ ಅಧ್ಯಕ್ಷ ನಂದಾ ಶೆಟ್ಟಿ, ಶ್ರೀಧರ ಹಿಂದುಪುರ, ವಿಶ್ವನಾಥ ಶೆಟ್ಟಿ ಅವರು ಸಂಘದ ಅಭಿವೃದ್ಧಿಯ ಕುರಿತು ಮಾಹಿತಿ ನೀಡಿದರು.
ಸಂಘದ ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಹೆಗ್ಡೆ ಅವರು ಸ್ವಾಗತಿಸಿ ವಂದನಾರ್ಪಣೆಗೈದರು.